Fri. Apr 11th, 2025

Milana Nagaraj: ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

ಬೆಂಗಳೂರು:(ಸೆ.6) ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 🔷ಮಂಗಳೂರು: ವಿಶ್ವ ಸೌಂದರ್ಯ ಸ್ಪರ್ಧೆಗೆ ಕರಾವಳಿಯ ಇಬ್ಬರು ವೈದ್ಯೆಯರು ಆಯ್ಕೆ

ಮಿಲನಾ ನಾಗರಾಜ್ ಅವರು ತಾಯಿ ಆಗಿದ್ದಾರೆ. ಈ ಖುಷಿ ಸುದ್ದಿಯನ್ನು ಡಾರ್ಲಿಂಗ್ ಕೃಷ್ಣ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಮಿಲನಾ ನಾಗರಾಜ್ ಅವರಿಗೆ ಹೆಣ್ಣುಮಗು ಜನಿಸಿದೆ. ಈ ವಿಚಾರವನ್ನು ದಂಪತಿ ರಿವೀಲ್ ಮಾಡಿದ್ದಾರೆ. ಮಗು ಹಾಗೂ ತಾಯಿಯ ಆರೋಗ್ಯ ಉತ್ತಮವಾಗಿದೆ ಎಂದು ಡಾರ್ಲಿಂಗ್ ಕೃಷ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಮಿಲನಾ ನಾಗರಾಜ್ ಅವರನ್ನು ಡಾರ್ಲಿಂಗ್ ಕೃಷ್ಣ ಅವರು ಹೊಗಳಿದ್ದಾರೆ. ಅದೇ ರೀತಿ ಮಗಳು ಹುಟ್ಟಿದ್ದಕ್ಕೆ ಡಾರ್ಲಿಂಗ್ ಕೃಷ್ಣ ಅವರಿಗೆ ಸಾಕಷ್ಟು ಖುಷಿ ಆಗಿದೆ. ಹೆಣ್ಣು ಮಗು ಜನಿಸಬೇಕು ಎಂದು ಅವರ ಆಸೆ ಆಗಿತ್ತಂತೆ. ಈ ಆಸೆ ಈಡೇರಿದೆ.

ಮಿಲನಾಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಾ ಇದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು