Tue. Apr 8th, 2025

Vitla: ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ತಂದೆ – ಪ್ರಕರಣ ದಾಖಲು!

ವಿಟ್ಲ :(ಸೆ.6) ತಂದೆ-ಮಗನ ನಡುವೆ ಜಗಳ ನಡೆದು ತಂದೆ-ಮಗನಿಗೆ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 🟠ಬೆಳ್ತಂಗಡಿ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಮತ್ತು ಗ್ರಾಮೀಣ ಘಟಕದ ಪದಾಧಿಕಾರಿಗಳ ಸಭೆ


ಪುಣಚ ಗ್ರಾಮದ ಕೊಲ್ಲಪದವು ನಿವಾಸಿ ಬಾಬು ಕೆ.ಎಂಬವರ ಮಗ ಅಶೋಕ್ ಕೆ (33) ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.


ಅಶೋಕ್ ಮತ್ತು ಆತನ ತಂದೆ ಮಧ್ಯೆ ಮನೆಯಲ್ಲಿ ಆಗಾಗ ಜಗಳವಾಗುತ್ತಿದ್ದು, ಸೆ.3ರಂದು ರಾತ್ರಿ ಅಶೋಕ್ ಮನೆಯಲ್ಲಿರುವಾಗ ತಂದೆ ಟಿವಿ ನೋಡುತ್ತಿದ್ದರು.

ಟಿ.ವಿ ವಾಲ್ಯೂಮ್ ಕಡಿಮೆ ಮಾಡಲು ಹೇಳಿದ್ದಕ್ಕೆ ಅವರು ಕೋಪದಿಂದ, ಶಬ್ದ ಕಡಿಮೆ ಮಾಡುವುದಿಲ್ಲ ಎಂದು ಹೇಳಿ, ನೀನು ಕೆಲಸಕ್ಕೂ ಹೋಗದೆ ಅಲ್ಲಿ ಇಲ್ಲಿ ಸುತ್ತಾಡಿ ನನ್ನ ಕುಟುಂಬದ ಮರ್ಯಾದೆ ತೆಗೆಯುತ್ತೀಯಾ.

ನಿನ್ನನ್ನು ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಹೇಳಿ ಮನೆಯ ಜಗಲಿಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಬಂದು ಕುತ್ತಿಗೆಗೆ ಹಾಗೂ ಎಡಭುಜಕ್ಕೆ ಕತ್ತಿಯಿಂದ ಬೀಸಿ ಕಡಿದಾಗ ಅಶೋಕ್ ತಪ್ಪಿಸಿಕೊಂಡು ಒಳಗೆ ಹೋಗಿದ್ದು, ಹಲ್ಲೆಯಿಂದ ನನ್ನ ಎಡಭುಜಕ್ಕೆ ಹಾಗೂ ಕುತ್ತಿಗೆ ಎಡಬದಿ ಹಿಂಭಾಗಕ್ಕೆ ಗಾಯವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಕಲಂ 352,118(1), 109 (1) BNS Act 2024 ಯಂತೆ ಪ್ರಕರಣ (ಅ.ಕ್ರ. 139/2024) ದಾಖಲಾಗಿದೆ.

Leave a Reply

Your email address will not be published. Required fields are marked *