Wed. Nov 20th, 2024

Belthangadi : ಮಹಿಳೆಯರೇ ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವ ವೇಳೆ ಹುಷಾರ್‌ – ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿದ್ದನ್ನು ಕೇಳಿಸಿಕೊಂಡು ಮನೆಗೆ ನುಗ್ಗಿ ಮಹಿಳೆ ಮಾನಭಂಗಕ್ಕೆ ಯತ್ನ

ಬೆಳ್ತಂಗಡಿ :(ಸೆ.) ಅಪರಿಚಿತ ಯುವಕನೊಬ್ಬ ಮಹಿಳೆಯನ್ನು ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: 🟣ಇಳಂತಿಲ : ಇಳಂತಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ 38 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ


ಇತ್ತೀಚೆಗಷ್ಟೇ ಪುದುವೆಟ್ಟಿಗೆ ಬಂದಿದ್ದ ದಂಪತಿ ಜಾಗ ಖರೀದಿಸಿ ನೆಲೆಸಿದ್ದರು. ಪತಿ ಕೆಲಸಕ್ಕೆ ತೆರಳಿದ್ದು, ಮಾವನೂ ಕೆಲಸಕ್ಕೆ ಹೋಗಿದ್ದರು. ಪುತ್ರಿ ಶಾಲೆಗೆ ಹೋಗುತ್ತಿದ್ದಾಳೆ.

ಸೆ.6ರಂದು ಬೆಳಗ್ಗೆ ಮಗುವನ್ನು ಶಾಲೆಗೆ ಬಿಟ್ಟು ಮರಳುವಾಗ ತಮ್ಮ ಪರಿಚಯದವರಲ್ಲಿ ಮಾತನಾಡುವಾಗ, ಮನೆಯಲ್ಲಿ ಯಾರೂ ಇಲ್ಲ, ಅಕ್ಕಪಕ್ಕದಲ್ಲೂ ಹತ್ತಿರದಲ್ಲಿ ಬೇರೆ ಮನೆಗಳಿಲ್ಲ, ಹೆದರಿಕೆಯಾಗುತ್ತದೆ ಎಂಬಿತ್ಯಾದಿ ಮಾತುಗಳನ್ನಾಡಿ ಮನೆಗೆ ತೆರಳಿದ್ದರು.


ಈ ವೇಳೆ ಮಾತುಗಳನ್ನು ಕೇಳಿಸಿಕೊಂಡ ಅಪರಿಚಿತ ಯುವಕನೊಬ್ಬ ಮಹಿಳೆಯನ್ನು ಹಿಂಬಾಲಿಸಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಮಹಿಳೆ ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದ ಯುವಕನೊಬ್ಬ ಮಹಿಳೆಯನ್ನು ಹಿಂಬಾಲಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸದೆ ಮಹಿಳೆ ಮನೆಗೆ ತೆರಳಿದ್ದರು.

ಯುವಕ ಅಂಗಳಕ್ಕೂ ಬಂದಿದ್ದು, ವಿಚಾರಿಸಿದಾಗ ಸ್ಪಷ್ಟ ಉತ್ತರ ನೀಡಿರಲಿಲ್ಲ. ನಂತರ ಮನೆಯೊಳಗೆ ದಿಢೀರನೆ ನುಗ್ಗಿ ಬಾಗಿಲಿನ ಚಿಲಕ ಹಾಕಿ ಮಾನಭಂಗಕ್ಕೆ ಮುಂದಾಗಿದ್ದ. ಮಹಿಳೆ ಯುವಕನಿಗೆ ಬಲವಾಗಿ ಒದ್ದಿದ್ದು, ಆತ ಬೀಳುತ್ತಿದ್ದಂತೆ ಬಾಗಿಲಿನ ಚಿಲಕ ತೆಗೆದು ಹೊರಗೆ ಓಡಿ ತಪ್ಪಿಸಿಕೊಂಡಿದ್ದಾರೆ.

ಆತಂಕಗೊಂಡ ಮಹಿಳೆ ಸ್ಥಳೀಯರಿಗೆ ಘಟನೆಯ ಕುರಿತು ವಿವರಿಸಿದ್ದಾರೆ. ಬಳಿಕ ಆಕೆ ಅಸ್ವಸ್ಥಗೊಂಡ ಹಿನ್ನೆಲೆ ಸ್ಥಳೀಯರು ಉಜಿರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಗೂ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.


ಅಪರಿಚಿತನ ಹೆಸರು, ಮನೆ ಸಹಿತ ಯಾವುದೇ ಮಾಹಿತಿ ಗೊತ್ತಿರಲಿಲ್ಲ. ಆತನ ಚಹರೆ ತಿಳಿಸಿದ ಬಳಿಕ ಊರಿನವರು ಗುರುತಿಸಿದ್ದು, ಮನೆಗೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತ ಬಾಡಿಗೆ ಮನೆಯಲ್ಲಿದ್ದು, ಬೇರೆ ಊರಿನವ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *