ಬೆಂಗಳೂರು:(ಸೆ.8) ಗಂಡನ ಕಿರುಕುಳ ತಾಳಲಾರದೆ ಪತ್ನಿ ಬಾತ್ ರೂಂ ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹುಳಿಮಾವು ಅಕ್ಷಯನಗರದಲ್ಲಿ ನಡೆದಿದೆ.


ಇದನ್ನೂ ಓದಿ: 🟣ಧರ್ಮಸ್ಥಳ: ಶ್ರೀ ರಾಮ ಭಜನಾ ಮಂದಿರ ಕಟ್ಟದಬೈಲು ಧರ್ಮಸ್ಥಳದಲ್ಲಿ 23 ನೇ ವರ್ಷದ ಗಣೇಶ ಚತುರ್ಥಿ
ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಡುವಾಗ ನೂರು ಬಾರಿ ಯೋಚಿಸ್ಬೇಕು. ಹುಡುಗನಿಗೆ ಆಸ್ತಿ ಇದೆ, ಅಂತಸ್ತು ಇದೆ ಅಂತ ಹೇಳಿ ತಮ್ಮ ಮಗಳ ಭವಿಷ್ಯವನ್ನೇ ಪೋಷಕರು ಹಾಳುಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆಯುತ್ತಿವೆ. ಈಕೆಯ ಹೆಸರು ಅನುಷಾ( 28 ವ). ಪತಿಯ ಹೆಸರು ಶ್ರೀಹರಿ .
ಇವರಿಬ್ಬರ ಮದುವೆ ಆಗಿ 5 ವರ್ಷ ಆಗಿತ್ತು. ಅವರಿಗೊಂದು 2 ವರ್ಷದ ಕಂದಮ್ಮ ಇತ್ತು. ಇವ್ರದ್ದೇನು ಲವ್ ಮ್ಯಾರೇಜ್ ಅಲ್ಲ, ಎರಡೂ ಕುಟುಂಬ ಮಾತಾಡಿ , ಎರಡೂ ಕುಟುಂಬ ಒಪ್ಪಿಗೆಯನ್ನು ಸೂಚಿಸಿ ಮದುವೆಯಾಗದ್ದ ಜೋಡಿ. ಹುಡುಗನ ಬ್ಯಾಕ್ ಗ್ರೌಂಡ್ ಕೂಡ ಚೆನ್ನಾಗಿದ್ದ ಕಾರಣ ತಮ್ಮ ಮಗಳು ಸುಖವಾಗಿ ಇರ್ತಾಳೆ ಅನ್ನೋ ನಂಬಿಕೆತಿಂದ ಮದುವೆ ಮಾಡಿ ಕೊಟ್ಟಿದ್ದರು.

ಆದ್ರೆ ಆರಂಭದಲ್ಲಿ ಎಲ್ಲಾವು ಚೆನ್ನಾಗಿತ್ತು. ಬರು ಬರುತ್ತಾ ಶ್ರೀ ಹರಿ ತನ್ನ ವರಸೆಯನ್ನು ಬದಲಾಯಿಸಿದ್ದ. ನನ್ಗೆ ಬೇರೆ ಹುಡುಗೀರ ಜೊತೆ ಸಂಬಂಧ ಇದೆ, ಕಾಲ್ ಗರ್ಲ್ಸ್ ಇದ್ದಾರೆ , ಮುಂದೆ ಸರಿ ಹೋಗ್ತೇನೆ ಅಂತ ಹೇಳ್ತಿದ್ದ. ಅನುಷಾ ಕೂಡ ಆತ ಸರಿ ಹೋಗ್ಬೋದು ಅಂದ್ ಕೊಂಡು ಸಂಸಾರ ಮಾಡ್ತಿದ್ಲು. ಆದರೆ ಅವನು ಬದಲಾಗೋ ತರ ಕಾಣಿಸ್ಲಿಲ್ಲ. ಹೆಂಡ್ತಿ ಜೊತೆ ಅಸಭ್ಯವಾಗಿ ವರ್ತಿಸೋದು, ಅವಳಿಗೆ ಕಿರುಕುಳ ನೀಡೋದು ಮಾಡ್ತಿದ್ದ.
ಅದಲ್ಲದೇ ನಿತ್ಯ ಅಶ್ಲೀಲ ವಿಡಿಯೋ ತೋರಿಸಿ , ನನ್ ಜೊತೆ ಹೀಗ್ ಸಹಕರಿಸು ಎಂದು ಕಿರುಕುಳ ನೀಡ್ತಿದ್ದ. ಅವಳು ಒಪ್ಕೊಳ್ಳದೆ ಇರುವಾಗ ನಿನ್ಗಿಂತ ಬೇರೆಯವರು ನನ್ ಜೊತೆ ಹೀಗೆ ಸಹಕರಿಸುತ್ತಾರೆ ಎಂದು ಹೇಳ್ತಿದ್ದ, ಹೀಗೆಲ್ಲ ಹೇಳಿದ್ರೆ ಯಾವ ಹೆಂಡ್ತಿ ತಾನೆ ಸಹಿಸ್ಕೊತಾಳೆ. ಆದ್ರೂ ಸಹಿಸಿಕೊಂಡು ಅವನ ಜೊತೆಲೇ ಸಂಸಾರ ಮುಂದೂಡ್ತಿದ್ದಳು.

ಅವಳು ಸಹಕರಿಸಲ್ಲ ಅಂತ ಹೇಳಿದಾಗ ಅವಳ ಮುಂದೆಯೇ ಇನ್ನೊಂದು ಹುಡುಗಿಯ ಜೊತೆ ಸಲುಗೆ ಬೆಳೆಸಿದ್ದಾನೆ, ಇದನ್ನೆಲ್ಲಾ ಪ್ರಶ್ನಿಸಿದ್ದಕ್ಕೆ ಪತ್ನಿ ಗೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಅಲ್ಲದೇ ಎರಡು ತಿಂಗಳಿಂದ ಡೈವೋರ್ಸ್ ಕೊಡುವಂತೆ ಪೀಡಿಸುತ್ತಿದ್ದಂತೆ. ಇದನ್ನು ಸಹಿಸಲಾಗದೆ ಅನುಷಾ ತನ್ನ ಮಗುವನ್ನು ನೋಡಿಕೊಳ್ಳಲು ತಾಯಿಯನ್ನು ಕರೆಸಿಕೊಂಡಿದ್ದಾಳೆ.
ಆಗಲಾದರೂ ಆತ ಸರಿಹೋಗಬಹುದು ಅಂದುಕೊಂಡಿದ್ದಾಳೆ. ಆದರೆ ಆತ ಸರಿ ಹೋಗಲೇ ಇಲ್ಲ. ಇವನು ಸರಿ ಹೋಗಲ್ಲ ಅಂತ ತಿಳಿದ ಅನುಷಾ , ಬಾತ್ ರೂಂ ಗೆ ಹೋಗಿ ತನ್ನ ಗಂಡನಿಗೆ ವೀಡಿಯೋ ಕಾಲ್ ಮಾಡಿ ಪೆಟ್ರೋಲ್ ಸುರಿದುಕೊಳ್ಳುವುದಾಗಿ ಬೆದರಿಸಿದ್ದಾಳೆ, ಆಗಲಾದರೂ ತನ್ನ ಗಂಡ ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿದ್ದಳು,
ಆದರೆ ಅವನು ಮೌನವಾಗಿ ಕುಳಿತು ನೋಡುತ್ತಿದ್ದ, ಅವಳು ಪೆಟ್ರೋಲ್ ಸುರಿದುಕೊಂಡು , ಬೆಂಕಿ ಹಚ್ಚಿಕೊಂಡರೂ ಇವನು ಯಾರಿಗೂ ಹೇಳಿಲ್ಲ, ನಂತ್ರ ತನ್ನ ಅತ್ತೆಗೆ ಹೇಳಿದಾಗ, ಅನುಷಾಳ ಅಮ್ಮ ಹೇಗೋ ಬಾಗಿಲು ಒಡೆದು , ಮಗಳನ್ನು ರಕ್ಷಿಸಲು ಹೋದರು, ಆದ್ರೆ ದೇಹ ಅರ್ಧ ಸುಟ್ಟು ಹೋಗಿತ್ತು, ತಕ್ಷಣ ಆಸ್ಪತ್ರೆ ಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೆ ಅನುಷಾ ಮೃತಪಟ್ಟಳು. ಆದರೆ , ಮಗು ಮಾತ್ರ ಅನಾಥವಾಯಿತು. ಖುಷಿ ಜೀವನ ನಡೆಸಬೇಕಿದ್ದ ಆ ಮುಗ್ಧ ಹೆಣ್ಣುಮಗಳು ತನ್ನ ಗಂಡನ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡದ್ದು, ದುರಂತವೇ ಸರಿ.


