ಕಾರವಾರ :(ಸೆ.8) ನಗರದ ಸಾಯಿಕಟ್ಟಾ ಪ್ರದೇಶದ ಬಿಂಧು ಮಾಧವ ದೇವಸ್ಥಾನದ ಬಳಿ ಇರುವ ಬೋರ್ಕರ್ ಕುಟುಂಬದಲ್ಲಿ ಗಣೇಶ ವಿಗ್ರಹದ ಮುಂದಿದ್ದ ಹುಂಡಿ ಹಣಕ್ಕಾಗಿ ಎರಡು ಕುಟುಂಬಗಳ ನಡುವೆ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಕಾರವಾರದಲ್ಲಿ ಶನಿವಾರ ನಡೆದಿದೆ.
ಇದನ್ನೂ ಓದಿ: 🔶ತೆಕ್ಕಾರು: ಫ್ರೆಂಡ್ಸ್ ತೆಕ್ಕಾರು ಇವರ ಆಶ್ರಯದಲ್ಲಿ ನಡೆಯುವ
ಸಂದೇಶ ಪ್ರಭಾಕರ ಬೋರ್ಕರ್ ಎಂಬ ಯುವಕ ಕೊಲೆಯಾದ ನತದೃಷ್ಟ. ತನ್ನ ಚಿಕ್ಕಪ್ಪನ ಮಗ ಮನೀಷ್ ಮನೋಹರ ಬೋರ್ಕರ್ ಎಂಬಾತ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ. ಮನೀಷ್ ,ಕಿರಣ್ ಹಾಗೂ ಕೊಲೆಗೆ ಸಹಕರಿಸಿದ ಆರೋಪದಲ್ಲಿ ಇನ್ನಿಬ್ಬರನ್ನು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಣಪತಿ ಪ್ರತಿಷ್ಠಾಪನೆ ನಂತರ,ವಿಗ್ರಹದ ಎದುರಿಗೆ ಇದ್ದ ಹಣದ ಹುಂಡಿ ವಿಚಾರವಾಗಿ ಗಲಾಟೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಕೊಲೆ ಹಂತಕ್ಕೆ ತಲುಪಿದೆ ಎನ್ನಲಾಗಿದೆ.
ಪೊಲೀಸರು ಸ್ಥಳ ಮಹಜರು ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ಯುವಕ ಸಂದೇಶ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕಾರವಾರ ಸಾಯಿಕಟ್ಟಾ ಪ್ರದೇಶದಲ್ಲಿ ಆತಂಕದ ವಾತಾವರಣ ಏರ್ಪಟ್ಟಿದ್ದು ಗಣೇಶ ಹಬ್ಬದ ದಿನ ನಡೆದ ಕೊಲೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.