Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:36 ಗಂಟೆ, ರಾಹು ಕಾಲ ಮಧ್ಯಾಹ್ನ 03:33 ರಿಂದ ಸಂಜೆ 05:05, ಯಮಘಂಡ ಕಾಲ ಬೆಳಿಗ್ಗೆ 09:26 ರಿಂದ 10:58ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:01ರ ವರೆಗೆ.

ಮೇಷ ರಾಶಿ: ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳು ಪ್ರಭಾವ ಬೀರಬಹುದು. ಅಸ್ತಿಯ ಹಂಚಿಕೆಯ ವಿಚಾರದಲ್ಲಿ ಚರ್ಚೆಗಳು ಆಗಲಿದೆ. ನಿಮ್ಮ ಕೆಲಸಗಳಿಗೆ ವಿಘ್ನಗಳು ಬರಬಹುದು. ಕುಟುಂಬವೂ ನಿರಾತಂಕವಾಗಿ ಜೀವನ ನಡೆಸುವುದು. ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪ್ರೋತ್ಸಾಹದಿಂದ ಒಳ್ಳೆಯ ಫಲವನ್ನು ನಿರೀಕ್ಷಿಸಬಹುದು. ನಿಮ್ಮ ನಿರೀಕ್ಷೆಯ ಮಟ್ಟ ಕಡಿಮೆಯಾಗಲಿದೆ.

ವೃಷಭ ರಾಶಿ: ಯಾವುದನ್ನು ನಿಮ್ಮದೆಂದುಕೊಂಡಿದ್ದೀರೋ ಅದು ಉಳಿಯದು. ನೀವು ಕುಟುಂಬ ಮತ್ತು ನಿಮ್ಮ ಆಪ್ತರ ಜೊತೆ ಸಮಯ ಕಳೆಯುವುದರಿಂದ ಬಾಂಧವ್ಯ ಬೆಳೆಯುವುದು. ಬಂಧುಗಳ ಭೇಟಿಯಿಂದ ಚಿತ್ತವು ಉತ್ಸಾಹದಿಂದ ಇರುವುದು. ಮಾಡಬೇಕಾದ ಕೆಲಸಗಳನ್ನು ವೇಗವಾಗಿ, ಎಚ್ಚರಿಕೆಯಿಂದ ಮಾಡಿ. ಸಹೋದರನ ಅನಿರೀಕ್ಷಿತ ಸಹಾಯವು ಸಂತಸವನ್ನು ತರುವುದು.

ಮಿಥುನ ರಾಶಿ: ನಿಮ್ಮ ಮಾತನ್ನು ಯಾರೂ ಕೇಳರು ಎಂದು ಬೇಸರವಾಗುವುದು. ನೀವು ಇಂದು ಯಾರ ಸಹಾಯವನ್ನೂ ಪಡೆಯಲು ಇಚ್ಛಿಸುವುದಿಲ್ಲ. ಆಲಸ್ಯದಿಂದ ಕಛೇರಿಯ ಕೆಲಸವನ್ನು ಮಾಡಲು ಆಸಕ್ತಿ ತೋರಿಸುವುದಿಲ್ಲ. ಒಳ್ಳೆಯ ಅಭ್ಯಾಸಗಳು ನಿಮ್ಮನ್ನು ಆರೋಗ್ಯವಾಗಿ ಇಡುವುದು. ಹಿತಶತ್ರುಗಳನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಜೀವನ ಸಂಗಾತಿಯ ಜೊತೆ ಹೆಚ್ಚು ಮಾತನಾಡುವಿರಿ. ಸಾಮಾಜಿಕ ಕೆಲಸಗಳಿಂದ ಗೌರವಪ್ರಾಪ್ತಿಯಾಗಲಿದೆ.

ಕರ್ಕಾಟಕ ರಾಶಿ: ಇಂದು ವೈಯಕ್ತಿಕ ಕಾರಣದಿಂದ ನಿಮ್ಮ ಉದ್ಯೋಗವನ್ನು ಬದಲಿಸಬೇಕಾಗುವುದು. ಪಡೆದ ಸಾಲವನ್ನು ತೀರಿಸುವಿರಿ. ಬಾಂಧವ್ಯವನ್ನು ಉಳಿಸಿಕೊಳ್ಳುವುದು ನಿಮಗೆ ಹಿಡಿಸದು. ಹೂಡಿಕೆ ಮಾಡಿದ ಹಣವನ್ನು ಪಡೆಯಲು ಓಡಾಟ ಮಾಡಬೇಕಾದೀತು. ಸಹೋದ್ಯೋಗಿಗಳ ಹಾದಿಯನ್ನು ಸೇರಿ ಮೇಲಧಿಕಾರಿಗಳಿಂದ ಬೈಗುಳ ತಿನ್ನುವಿರಿ.

ಸಿಂಹ ರಾಶಿ: ಪಾಲುದಾರಿಕೆಯ ಭಿನ್ನಾಭಿಪ್ರಾಯವನ್ನು ನೀವೇ ಮೊದಲು ಮಾತನಾಡಿ ಸರಿ ಮಾಡಿಕೊಂಡರೆ ಮುಂದುವರಿಯುವುದು. ನಿಮ್ಮ ಉಪಯೋಗವನ್ನು ಪಡೆದುಕೊಳ್ಳಲು ಇಚ್ಛಿಸಬಹುದು. ಸ್ನೇಹಿತರ ಮಾತುಗಳು ನಿಮಗೆ ಉಪಯೋಗಬಹುದು. ಉದ್ಯಮವನ್ನು ನೀವು ಹೆಚ್ಚಿಸುವ ಯೋಚನೆ ಇರಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಅಳುಕು ಇರುವುದು. ನಿಮ್ಮ ಒತ್ತಡವನ್ನು ಕಡಿಮೆ‌ಮಾಡಿಕೊಳ್ಳಲು ಕೆಲಸವನ್ನು ಹಂಚುವಿರಿ.

ಕನ್ಯಾ ರಾಶಿ: ನಿಮ್ಮ ದೌರ್ಬಲ್ಯವು ಗೌರವವನ್ನು ಹರಣಮಾಡಬಹುದು. ದಾಂಪತ್ಯದಲ್ಲಿ ಸುಖವನ್ನು ಕಾಣುವಿರಿ. ಮನಸ್ಸು ಉದ್ವಿಗ್ನದಿಂದ ಹೊರಬರಲು ಮಾರ್ಗವನ್ನು ಹುಡುಕುವಿರಿ. ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ನಿರ್ಧಾರವನ್ನು ಮಾಡುವಿರಿ. ಯಾವುದೇ ದೊಡ್ಡ ಮೊತ್ತದ ಖರೀದಿಯನ್ನು ಮಾಡುವಾಗ ಅವಶ್ಯಕತೆ ಅನಿವಾರ್ಯತೆಗಳ ಬಗ್ಗೆ ಗಮನವಿರಲಿ.

ತುಲಾ ರಾಶಿ: ಇಂದು ಸಂಗಾತಿಯ ಜೊತೆಗಿನ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ. ಪುಣ್ಯಸ್ಥಳಕ್ಕೆ ಅನಿರೀಕ್ಷಿತ ಭೇಟಿ ಹಾಗೂ ಸಮಾಧಾನ ಸಿಗಲಿದೆ. ಸಾಲವನ್ನು ಮರುಪಾವತಿ‌ ಮಾಡಿ ನಿರಾಳವಾಗುವಿರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸದೇ ಕೋಪಗೊಳ್ಳುವಿರಿ. ಯಾರದೋ ಸಿಟ್ಟನ್ನು ನಿಮ್ಮವರ ಮೇಲೆ ತೋರಿಸುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಆರಂಭಿಸುವುದಕ್ಕಿಂತ ಸಾಮರ್ಥ್ಯವನ್ನು ಕಂಡುಕೊಂಡು ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ: ಇಂದು ನಿಮಗೆ ಸಿಗುವ ಪ್ರೀತಿ ಹಂಚಿಕೆಯಾಗಿ ನಿಮಗೆ ಕಷ್ಟವಾಗುವುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂವನೆಯನ್ನು ನೀವು ಇಷ್ಟಪಡುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ನಿಮಗೆ ಅನ್ನಿಸಿದ್ದನ್ನು ಕೂಡಲೇ ಹೇಳಿದರೂ ಅನ್ಯ ಪರಿಣಾಮ ಬೀರದು. ನಿಮ್ಮ ನಡತೆಯ ಪರೀಕ್ಷೆಯೂ ನಡೆಯಲಿದೆ.

ಧನು ರಾಶಿ: ಇಂದು ನೀವು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ನಿಮಗೆ ತೃಪ್ತಿ ಸಿಗದು. ಒಳ್ಳೆಯ ಸೇವೆಯಿಂದ ಯಶಸ್ಸು ಸಿಗುವುದು. ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಬೆರೆಯುವ ಒಳ್ಳೆಯ ಸ್ವಭಾವದಿಂದ ಅಪವಾದ ಬರಬಹುದು.

ಮಕರ ರಾಶಿ: ಇಂದು ನೀವು ಸಂಗಾತಿಯ ಮೇಲೆ ಕೋಪವನ್ನು ತೀರಿಸಿಕೊಂಡರೂ ಆ ಕಡೆಯಿಂದ ಯಾವ ಪ್ರತಿಕ್ರಿಯೆ ಬಾರದು. ಪ್ರೀತಿಯಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು. ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ‌ ನಿಮಗೆ ಗೊಂದಲವು ಬರಬಹುದು.

ಕುಂಭ ರಾಶಿ: ಯಾರನ್ನೂ ನೀವು ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ಇಂದು ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಕಾರ್ಯವು ಸಿದ್ಧಿಯಾಗುವ ತನಕವಾದರೂ ಮೌನವಾಗಿರುವುದು ಉತ್ತಮವೆಂದು ಹಿರಿಯರಿಂದ ಉಪದೇಶ ಸಿಗುವುದು.

ಮೀನ ರಾಶಿ: ಇಂದು ನೀವು ಯಾರಾದರೂ ಏನನ್ನಾದರೂ ಕೇಳಿದರೆ ಮಾತ್ರ ಹೇಳಬೇಕೇ ವಿನಹ ನಿಮಗೆ ಗೊತ್ತಿದೆ ಎಂದು ಮೂಗುತೂರಿಸಲು ಹೋಗಿ, ಮೂಗು ಜಜ್ಜಿಕೊಳ್ಳಬೇಕಾದೀತು. ಇಂದು ಕುಟುಂಬದಲ್ಲಿ ನಿಮ್ಮ ಯಶಸ್ಸಿಗೆ ಎಲ್ಲರೂ ಖುಷಿಪಡುವರು. ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಅತಿಯಾದ ಪ್ರಶಂಸೆಯಿಂದ ದಾರಿ ತಪ್ಪುತ್ತದೆ ಎಂದು ಗೊತ್ತಾಗುವ ಮೊದಲೇ ನಿಮ್ಮನ್ನು ದಾರಿ ತಪ್ಪಿಸಿ ಅನ್ಯ ಮಾರ್ಗವೇ ಇಲ್ಲದಂತೆ ಆಗುವುದು.

Leave a Reply

Your email address will not be published. Required fields are marked *