Wed. Nov 20th, 2024

Ujire: ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಹರ್ಷಿತಾ ಆಯ್ಕೆ

ಉಜಿರೆ:(ಸೆ.10) ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ

ಇದನ್ನೂ ಓದಿ: 🛑ಲಾರಿ-ಕಾರುಗಳ ನಡುವೆ ಭೀಕರ ಅಪಘಾತ – ಓರ್ವ ಸ್ಥಳದಲ್ಲೇ ಸಾವು!

ಬೆಂಗಳೂರಿನ ಗಾಂಧೀ ಭವನದಲ್ಲಿ ಸೆ. 17 ರಿಂದ 23 ರ ವರೆಗೆ ನಡೆಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂ ಸೇವಕಿ ಹರ್ಷಿತಾ ಆಯ್ಕೆ ಆಗಿದ್ದಾರೆ.

ಈಕೆ ಇದೀಗ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದು , ರಾಜ್ಯ ಮಟ್ಟದ ಯೋಗ ಸ್ಪರ್ಧಾಪಟು ಕೂಡ ಆಗಿದ್ದಾಳೆ.

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದರೊಂದಿಗೆ ಪ್ರಬಂಧ ಬರಹ , ಪೋಸ್ಟರ್ ರಚನೆ , ಏಕಪಾತ್ರಾಭಿನಯ , ನೃತ್ಯ , ಪ್ರಹಸನ , ಕಾರ್ಯಕ್ರಮ ನಿರ್ವಹಣೆ ಇತ್ಯಾದಿಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ.


ಪ್ರೌಢಶಾಲೆಯ ಎನ್ ಸಿ ಸಿ ಯಲ್ಲಿ ಸಾರ್ಜೆಂಟ್ ಕೂಡ ಆಗಿದ್ದ ಈಕೆ ಉಜಿರೆಯ ರೆಂಜಾಳದ ಅಣ್ಣು ನಾಯ್ಕ್ ಹಾಗೂ ಸುಶೀಲಾ ದಂಪತಿಯ ಪುತ್ರಿ. ಇವಳ ಆಯ್ಕೆಗೆ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *