Mon. Apr 14th, 2025

Belthangady: ಬೆಳ್ತಂಗಡಿ ಉಪವಿಭಾಗ ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ಸೆ.12 (ನಾಳೆ) ವಿದ್ಯುತ್ ನಿಲುಗಡೆ

ಕಲ್ಲೇರಿ :(ಸೆ.11) ಬೆಳ್ತಂಗಡಿ ಉಪವಿಭಾಗದ ಕಲ್ಲೇರಿ ಶಾಖಾ ವ್ಯಾಪ್ತಿಯ 110/33/11 ಕೆ ವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಲ್ಲೇರಿ ಟೌನ್ ಹಾಗೂ

ಮುಗೇರಡ್ಕ ಫೀಡರುಗಳ ಹೊರೆಯನ್ನು ವಿಂಗಡಿಸಲು ಪ್ರತ್ಯೇಕವಾದ ಫೀಡರನ್ನು ನಿರ್ಮಿಸುವ ಹಾಗೂ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಹಾಗೂ

ಪದ್ಮುಂಜ ಫೀಡರುಗಳ ಹೆಚ್ ಟಿ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ

ಸೆ. 12 ಗುರುವಾರದಂದು ಬೆಳಗ್ಗೆ ಗಂಟೆ 10.00 ರಿಂದ ಸಂಜೆ ಗಂಟೆ 5.30ರ ತನಕ 11 ಕೆವಿ ಉಪ್ಪಿನಂಗಡಿ ಟೌನ್, ಕೆಮ್ಮಾರ, ಕಲ್ಲೇರಿ ಟೌನ್ ಹಾಗೂ ಪದ್ಮುಂಜ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ ಇದೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *