Tue. Apr 15th, 2025

Mangaluru: ಸಾಕು ನಾಯಿಯನ್ನು ಬಲವಂತವಾಗಿ ತ್ಯಾಜ್ಯ ವಾಹನಕ್ಕೆ ನೀಡಿದ ಮನೆ ಮಂದಿ – ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್

ಮಂಗಳೂರು:(ಸೆ.11) ನಾಯಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ನಾಯಿ ಅಂದ್ರೆ ಪಂಚಪ್ರಾಣ. ನಾಯಿಗೆ ಪ್ರೀತಿ ಕೊಟ್ರೆ , ಅದು ನಮ್ಗೆ ಹೆಚ್ಚಿನ ಪ್ರೀತಿ ಕೊಡುತ್ತೆ. ಆದ್ರೆ ಇಲ್ಲೊಂದು ಮನಕಲಕುವ ಘಟನೆ ನಡೆದಿದೆ.

ಇದನ್ನೂ ಓದಿ: ⛔ಕನ್ನಡತಿ ಸೀರಿಯಲ್‌ ನಟ ಕಿರಣ್‌ ರಾಜ್‌ ಕಾರು ಅಪಘಾತ!

ಸಾಮಾನ್ಯವಾಗಿ ಕಸವನ್ನು ತ್ಯಾಜ್ಯ ಕೊಂಡೊಯ್ಯುವ ವಾಹನಕ್ಕೆ ನೀಡುತ್ತಾರೆ. ಆದರೆ ಜೀವಂತ ಶ್ವಾನವನ್ನು ಅದರ ಮಾಲಕರು ಪಾಲಿಕೆಯ ತ್ಯಾಜ್ಯ ಕೊಂಡೊಯ್ಯವ ವಾಹನಕ್ಕೆ ನೀಡಿರುವ ಕೃತ್ಯ ನಗರದ ಡೊಂಗರಕೇರಿಯಲ್ಲಿ ನಡೆದಿದೆ.

ಡೊಂಗರಕೇರಿಯಲ್ಲಿ ವಾಸಿಸುವ ಕುಟುಂಬವೊಂದರ ಸದಸ್ಯರು ವಿದೇಶದಲ್ಲಿ ವಾಸಿಸುತ್ತಿದ್ದರು. ಈ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ವಾಸವಾಗಿದ್ದಾರೆ. ಈ ಮನೆಯ ನಾಯಿ ಇತ್ತೀಚೆಗೆ ಕೆಲವೆಡೆ ತೊಂದರೆ ನೀಡಿತ್ತು.

ಹೀಗಾಗಿ ಮನೆಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಜೀವಂತ ನಾಯಿಯನ್ನು ನೀಡಲಾಗಿದೆ. ಜೊತೆಗೆ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರು ಕೂಡ ವಿರೋಧ ವ್ಯಕ್ತಪಡಿಸದೆ ತ್ಯಾಜ್ಯದೊಡನೆ ನಾಯಿಯನ್ನೂ ಪಚ್ಚನಾಡಿಗೆ ಕೊಂಡೊಯ್ದಿದ್ದಾರೆ.

ಈ ಘಟನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಎರಡು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ.

ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಪಶುಪಾಲನೆ ಇಲಾಖೆಯಿಂದ ಪಾಲಿಕೆಗೆ ನೋಟಿಸ್‌ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ವಾಹನ ಕೊಂಡೊಯ್ದಿದ್ದ ಶ್ವಾನ ಇನ್ನೂ ಪತ್ತೆಯಾಗಿಲ್ಲ. ಪಚ್ಚನಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕುವ ಕೆಲಸ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *