ಚಾರ್ಮಾಡಿ :(ಸೆ.12) ಇತ್ತೀಚೆಗೆ ಚಾರ್ಮಾಡಿ ಗ್ರಾಮದ ಹೊಸಮಠ ಎಂಬಲ್ಲಿ ವಾಸಿಸುತ್ತಿರುವಂತಹ ಹಿಂದೂ ಮಲಯಾಳಿ ಕೇರಳ ಆಚರಣೆಯಾದ

ಓಣಂ ಹಬ್ಬವನ್ನು ವಿಜ್ರಂಭಣೆಯಿಂದ ಆ ಭಾಗದ ಜನಗಳು ಅದೇ ರೀತಿ ಊರಿನ ಗಣ್ಯ ವ್ಯಕ್ತಿಗಳ ಕೂಡುವಿಕೆಯಲ್ಲಿ ಸಂಭ್ರಮಿಸಿದರು.
ಮೊಸರು ಕುಡಿಕೆ, ಹಗ್ಗ ಜಗ್ಗಾಟ, ಮೊಸರು ಕುಡಿಕೆ, ಮಕ್ಕಳಿಗೆ ಲಿಂಬೆ ಚಮಚ ಓಟ, ಸಂಗೀತ ಕುರ್ಚಿ, ಕಪ್ಪೆ ಜಿಗಿತ, ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು.
ಓಣಂ ವಿಶೇಷ ಪೋಕಳಂ 18 ಬಗೆಯ ಕೇರಳ ಮಾದರಿಯ ತಿನಿಸುಗಳಿತ್ತು. ಈ ಕಾರ್ಯಕ್ರಮವನ್ನು ಕೃಷ್ಣ ಭಟ್ ಕೊಡಿತ್ತಿಲ್, ವತ್ಸಲನ್ ಹೊಸಮಠ,


ಪುರುಷೋತ್ತಮ ಹೊಸಮಠ, ಶೈಲಜ ಹೊಸಮಠ, ಪ್ರಕಾಶ್ ಹೊಸಮಠ, ರವಿಚಂದ್ರ ಹೊಸಮಠ , ಗೋಪಾಲಕೃಷ್ಣ ಕೆರೆಕೋಡಿ ಪ್ರದೀಪ್ ಕೆರೆಕೋಡಿ ಮತ್ತು ಅ ಭಾಗದ ಬಂಧುಗಳು ಉಪಸ್ಥಿತರಿದ್ದರು.




