Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸೌಭಾಗ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 10:50 ರಿಂದ 12:23, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:59ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:46 ರಿಂದ 09:18ರ ವರೆಗೆ.

ಮೇಷ ರಾಶಿ : ಇಂದು ನಿಮ್ಮ ಇಚ್ಛೆಯನ್ನು ಕಾಪಾಡಿಕೊಳ್ಳಲು ಕೆಲವು ನಿರ್ಣಯಗಳನ್ನು ಮಾಡುವಿರಿ. ನಿಮ್ಮ ಆಕರ್ಷಕ ವರ್ತನೆಯಿಂದ ಎಲ್ಲರ ಗಮನವನ್ನು ಸೆಳೆಯುವಿರಿ. ಸಹೋದ್ಯೋಗಿಗಳು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಕೆಲಸವನ್ನು ವಹಿಸಿಕೊಂಡು ಮಾಡುವ ಗುತ್ತಿಗೆದಾರರಿಗೆ ಇಂದು ಸಕಾಲವಾಗಿದೆ.

ವೃಷಭ ರಾಶಿ : ಇಂದು ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು. ಆದ್ದರಿಂದ ನಿಮ್ಮ ಗಮನವು ಪೂರ್ಣವಾಗಿ ಅತ್ತಕಡೆಗೆ ಇರಲಿ. ಎಲ್ಲರಿಗೂ ಸಲ್ಲುವಂತಾಗಬೇಕು ಎನ್ನುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಮುಖ್ಯವಾಗಿ ಬೇಕಾಗುವುದು. ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವಿರಿ.

ಮಿಥುನ ರಾಶಿ : ನಿಮ್ಮ ಮನಸ್ಸಿನಲ್ಲಿ ಹೊಸ ಯೋಜನೆಗಳಿಗೆ ರೂಪಕೊಡುವಿರಿ. ಅವುಗಳನ್ನು ಕಾರ್ಯಗತಗೊಳಿಸಲು ಇದು ಸರಿಯಾದ ಸಮಯ. ಕುಟುಂಬದಲ್ಲಿ ಯಾರಾದರೂ ಒಬ್ಬರೂ ತಲೆಬಾಗಲೇಬೇಕಾದೀತು. ಇನ್ನೊಬ್ಬರಿಗಾಗಿ ಕಾಯುವುದು ಬೇಡ.

ಕರ್ಕಾಟಕ ರಾಶಿ : ಇಂದು ನಿಮ್ಮ ಭರವಸೆಯ ಕನಸುಗಳು ನನಸಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಭಾವನಾತ್ಮಕವಾದ ಸವಾಲುಗಳಿಗೆ ಒಳಗಾಗುವಿರಿ.

ಸಿಂಹ ರಾಶಿ : ಇಂದು ಕೆಲವು ಸಮಯದಿಂದ ನಿಮ್ಮ ಸ್ವಂತ ಪ್ರಗತಿಗಾಗಿ ಮಾಡುತ್ತಿರುವ ಪ್ರಯತ್ನಗಳು ಸಫಲ ಆಗಲಿವೆ. ವೈಯಕ್ತಿಕವಾಗಿ ನೀವು ಗಳಿಸುವ ಸ್ಥಾನಮಾನಗಳು ಇತರರಿಗೆ ಕಷ್ಟವಾಗುವುದು.

ಕನ್ಯಾ ರಾಶಿ : ಇಂದು ಬಂಧುಗಳ ಸಮಯಕ್ಕಾಗಿ ಕಾಯಬೇಕಾಗಬಹುದು. ಇಂದು ನೀವು ಹಣಕಾಸಿನ ವಿಚಾರದಲ್ಲಿ ನಿಷ್ಠುರದಿಂದ ವರ್ತಿಸಿದರೆ ಮಾತ್ರ ಲಾಭಗಳಿಸುವ ಸಾಧ್ಯತೆ ಇದೆ. ಯಾರನ್ನೋ ಸೋಲಿಸುವ ಸವಾಲನ್ನು ತೆಗೆದುಕೊಳ್ಳುವಿರಿ. ಇದರಿಂದ ಪ್ರೇಮಿಯು ದೂರಾಗಬಹುದು.

ತುಲಾ ರಾಶಿ : ಇಂದು ನೀವು ಉದ್ಯೋಗ ಕ್ಷೇತ್ರದಲ್ಲಿ ಆಗುವ ವಾದಗಳನ್ನು ತಪ್ಪಿಸಿ. ಅನ್ಯರು ನಿಮ್ಮ ಖಾಸಗಿ ವಿಚಾರಗಳಿಗೆ ಮನೆಯವರು ಮೂಗು ತೂರಿಸಿದರೆ ಸಿಟ್ಟುಗೊಳ್ಳುವಿರಿ. ಕೌಟುಂಬಿಕ ಅಗತ್ಯಗಳಿಗೆ ತಕ್ಷಣ ಗಮನ ನೀಡಬೇಕಾದೀತು.

ವೃಶ್ಚಿಕ ರಾಶಿ : ಇಂದು ಕೆಲಸ ಹೆಚ್ಚು ಆದರೂ ಎಲ್ಲವನ್ನೂ ಮಾಡಿಮುಗಿಸಿದ ಸಮಾಧಾನ ಇರುವುದು. ಉದ್ಯೋಗಸ್ಥರು ಉನ್ನತ ಅವಕಾಶವನ್ನು ಪ್ರತೀಕ್ಷೆ ಮಾಡಬಹುದು.

ಧನು ರಾಶಿ : ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ಆಶಾವಾದಿ ವರ್ತನೆ ಇಂದು ನಿಮ್ಮ ಸುತ್ತಲಿನವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ಹೊಸ ಯೋಜನೆಗಳಿಗೆ ಹಣವನ್ನು ಎಷ್ಟೇ ಕಷ್ಟವಾದರೂ ಪಡೆಯುವಿರಿ.

ಮಕರ ರಾಶಿ : ಇಂದಿನ ಆರಂಭವು ತುಂಬಾ ಆಹ್ಲಾದಕರವಾಗಿರುತ್ತದೆ. ಶಾಂತವಾಗಿ ಮತ್ತು ಚಿಂತನಶೀಲವಾಗಿ ಕೆಲಸ ಮಾಡಿ. ಇಂದು, ನೀವು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ಇದು ಹಣಕಾಸಿನ ಲಾಭಕ್ಕೆ ಕಾರಣವಾಗುತ್ತದೆ.

ಕುಂಭ ರಾಶಿ : ಇಂದು ನಿಮ್ಮ ಆಹಾರ ಪದ್ದತಿ, ತೂಕ ಹೆಚ್ಚಳದ ಬಗ್ಗೆ ವಿಶೇಷ ಗಮನಹರಿಸಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾದೀತು. ಹೆಚ್ಚು ಮಾತುಕತೆಗಳು ತಂದೆಯ ಜೊತೆ ಆಡಬಹುದು. ವಿದ್ಯಾಭ್ಯಾಸ ಹಿನ್ನಡೆಯಿಂದ ನಿಮ್ಮಲ್ಲಿ ಆತಂಕವು ಹೆಚ್ಚಾಗುವುದು.

ಮೀನ ರಾಶಿ : ಇಂದು ಮನೆ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿಮಗೆ ವಿಶೇಷ ಬೆಂಬಲ ಸಿಗಲಿದೆ. ನಿಮ್ಮ ಕುಟುಂಬ ಸದಸ್ಯರ ಹರ್ಷಚಿತ್ತದ ವರ್ತನೆ ನಿಮ್ಮ ಮನೆಗೆ ಧನಾತ್ಮಕ ಕಂಪನ್ನು ತರುತ್ತದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಯಾವುದೇ ವಿಶೇಷ ಯಶಸ್ಸಿನ ಬಗ್ಗೆ ಚರ್ಚೆಗಳು ಸಹ ನಡೆಯುತ್ತವೆ. ಇನ್ನೊಬ್ಬರಿಗೆ ಅಪಮಾನವಾಗುವಂತೆ ಇಂದಿನ‌ ನಿಮ್ಮ ಮಾತು ಇರಬಹುದು.

Leave a Reply

Your email address will not be published. Required fields are marked *