ಉಜಿರೆ :(ಸೆ.13) “ಮಾತೃಭಾಷೆಯಲ್ಲಿ ಹಿಡಿತಹೊಂದಿದವರು ಇತರ ಭಾಷೆಗಳನ್ನು ಸರಾಗವಾಗಿ ಕಲಿಯಬಹುದು.
ಇದನ್ನೂ ಓದಿ; ⛔ಧರ್ಮಸ್ಥಳ: ದೊಂಡೋಲೆ ನಿವಾಸಿ ಪುಂಡಲೀಕ ಪ್ರಭು ನೇಣು ಬಿಗಿದುಕೊಂಡು ಆತ್ಮಹತ್ಯೆ
ಭಾರತವು ಬಹುಭಾಷ ದೇಶವಾಗಿದ್ದು ಎಲ್ಲಾ ಭಾಷೆಗಳು ಇಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ” ಎಂದು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಶಿಕ್ಷಕ ಶ್ರೀ ಸೋಮಶೇಖರ್ ಹೇಳಿದರು.
ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ನಡೆದ ‘ಹಿಂದಿ ದಿವಸ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ಕಿರು ಪ್ರಹಸನ, ವೃಂದ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕಿ ಶಾಂಟಿ ಜಾರ್ಜ್ ವಹಿಸಿದ್ದರು.
ವಿದ್ಯಾರ್ಥಿನಿ ಇಶಿತ ಹಾಗೂ ಆನೆಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಆಯಿಷಾ ಅಸ್ಮಿನ್ ಸ್ವಾಗತಿಸಿ ವಿದ್ಯಾರ್ಥಿ ಅನಿಶ್ ವಂದಿಸಿದರು.