Wed. Nov 20th, 2024

Belthangadi: ವಿದ್ಯಾರ್ಥಿಗೆ ಬೆತ್ತದಿಂದ ಹಲ್ಲೆ – ಶಿಕ್ಷಕನ ವಿರುದ್ಧ ದೂರು ದಾಖಲು

ಬೆಳ್ತಂಗಡಿ :(ಸೆ.14) ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು ಮೂರು ದಿನ ಶಾಲಾ ಶಿಕ್ಷಕ ಬೆತ್ತದಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.

ಇದನ್ನೂ ಓದಿ: ⛔ಬಂಟ್ವಾಳ : ಮನೆಯ ಬಾಗಿಲಿನ ಚಿಲಕ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು!

ಸದ್ಯ ವಿದ್ಯಾರ್ಥಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿವಾಸಿ 15 ವರ್ಷದ 9 ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿಗೆ ಸೆ.9,10,11 ರಂದು ಮೂರು ದಿನ ಸರಕಾರಿ ಪ್ರೌಢ ಶಾಲೆ ಪದ್ಮುಂಜ ಇಲ್ಲಿಯ ಇಂಗ್ಲಿಷ್ ಶಿಕ್ಷಕ ಬೆತ್ತದಿಂದ ಹಲ್ಲೆ ಮಾಡಿದ್ದಾರೆ.

ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ಹೇಳದೆ ಸುಮ್ಮನಿದ್ದ ಬಳಿಕ ನೋವು ಜಾಸ್ತಿಯಾದ ಕಾರಣ ಮನೆಯವರಿಗೆ ವಿಚಾರ ತಿಳಿಸಿದ್ದು , ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಶಿಕ್ಷಕ ಹಲ್ಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ.

ತಕ್ಷಣ ಸೆ.12 ರಂದು ಸಂಜೆ ವಿದ್ಯಾರ್ಥಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *