Fri. Apr 18th, 2025

Karkala jewellery shop theft case: ಮಾತಾಡ್ತಾ ಮಾತಾಡ್ತಾ ಚಿನ್ನ ಎಗರಿಸಿದ ಖದೀಮ

ಕಾರ್ಕಳ :(ಸೆ.14) ಕಾರ್ಕಳದ ಉಷಾ ಜ್ಯುವೆಲ್ಲರಿಯಲ್ಲಿ ಸೆ.11ರಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬರು ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ.

ಇದನ್ನೂ ಓದಿ; 🔴ಮಂಗಳೂರಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಟ್ರೇಡ್ ಯೂನಿಯನ್ ವತಿಯಿಂದ ಪ್ರತಿಭಟನೆ

ಕಾರ್ಕಳ ಕಸಬಾ ಗ್ರಾಮದ ಮೂರು ಮಾರ್ಗ ಜಂಕ್ಷನ್ ಬಳಿಯಿರುವ ಕುಕ್ಕುಂದೂರು ಗ್ರಾಮದ ಅಮಿತ್ ಮಾಲೀಕತ್ವದ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಚಿನ್ನದ ಮಣಿಗಳಿಂದ ಕೂಡಿದ ಸರವನ್ನು ತೋರಿಸಲು ಸಿಬ್ಬಂದಿಯನ್ನು ವ್ಯಕ್ತಿ ಕೇಳಿದ್ದಾರೆ. ಚೈನ್ ನೀಡಿದ ನಂತರ ಅದನ್ನು ನೋಡ್ತಾ ಎಷ್ಟು ರೇಟ್‌ ಆಗುತ್ತೆ ಅಂತ ಕೇಳಿದ್ದಾರೆ, ಅವಾಗ ಸಿಬ್ಬಂದಿ ಲೆಕ್ಕ ಮಾಡಿ ಹೇಳಿದ್ದಾರೆ. ನಂತರ ಮಾತಾಡ್ತಾ ಮಾತಾಡ್ತಾ ವ್ಯಕ್ತಿ ಮೆಲ್ಲಗೆ ಚಿನ್ನವನ್ನು ಕೈಯಲ್ಲಿ ಹಿಡಿದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ. ವ್ಯಕ್ತಿ ಮತ್ತು 7.630 ಗ್ರಾಂ ಚಿನ್ನದ ಸರ ಎರಡೂ ಕಾಣೆಯಾಗಿದೆ.

ಕಳ್ಳತನವಾದ ನಂತರ ಅಂಗಡಿ ಮಾಲೀಕರು ದೂರು ನೀಡಿದ್ದು, ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯನ್ನು ಗುರುತಿಸಿ ಬಂಧಿಸಲು ತನಿಖೆ ಮುಂದುವರಿದಿದೆ. ಕಳ್ಳತನದ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *