Fri. Apr 11th, 2025

Viral video – ರೀಲ್ಸ್‌ ತಂದ ಪಜೀತಿ – ಟೆರೇಸ್‌ ಮೇಲೆ ಮುಗ್ಗರಿಸಿ ಬಿದ್ದ ಯುವತಿ!

Viral video :(ಸೆ.14) ಇಂದಿನ ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ರೀಲ್ಸ್ ಮಾಡೋದು, ಯುಟ್ಯೂಬ್ ವ್ಲಾಗ್ ಮಾಡೋದು ಟ್ರೆಂಡ್ ಆಗಿ ಪರಿಣಮಿಸಿದೆ.

ಇದನ್ನೂ ಓದಿ; 🐍ಮಂಗಳೂರು : ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿಯನ್ನ ಬರಿಗೈಯಲ್ಲಿ ಹಿಡಿದ ವ್ಯಕ್ತಿ

ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಮುದುಕರವರೆಗೂ ಎಲ್ಲರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ರೀಲ್ಸ್ ಮಾಡುವವರೇ . ಕೆಲವರಂತೂ ಪ್ರತಿನಿತ್ಯ ತಮ್ಮ ಚಿತ್ರವಿಚಿತ್ರ ರೀಲ್ಸ್ಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ.

ಅದೇ ರೀತಿ ಇಲ್ಲೊಬ್ಲು ಯುವತಿ ಮಳೆ ಬಂದು ಹೋದ ನಂತರ ವೆದರ್ ತುಂಬಾ ಚೆನ್ನಾಗಿದೆಯಲ್ವಾ ಎನ್ನುತ್ತಾ ಟೆರೇಸ್ ಮೇಲೆ ರೀಲ್ಸ್ ಮಾಡಲು ಹೋಗಿ, ಸಖತ್ ಆಗಿರುವ ಹಾಡೊಂದಕ್ಕೆ ಡಾನ್ಸ್ ಮಾಡುವ ಭರದಲ್ಲಿ ದೊಪ್ಪನೆ ಜಾರಿ ಬಿದ್ದಿದ್ದಾಳೆ.

ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೋಷಿಯಲ್‌ ಮೀಡಿಯಾದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವೀಡಿಯೋವೊಂದು ವೈರಲ್ ಆಗಿದ್ದು, ರೀಲ್ಸ್ ಮಾಡಲು ಹೋಗಿ ಯುವತಿಯೊಬ್ಬಳು ಮುಗ್ಗರಿಸಿ ಬಿದ್ದಿದ್ದಾಳೆ.


ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವತಿಯೊಬ್ಬಳು ಮನೆಯ ಟೆರೇಸ್ ಮೇಲೆ ನಿಂತಿದ್ದ ಮಳೆ ನೀರಿನಲ್ಲಿ ಡಾನ್ಸ್ ಮಾಡುತ್ತಾ ರೀಲ್ಸ್ ವೀಡಿಯೋ ಮಾಡುವ ದೃಶ್ಯವನ್ನು ಕಾಣಬಹುದು. ಹೀಗೆ ಸೊಂಟ ಬಳುಕಿಸುತ್ತಾ ಡಾನ್ಸ್ ಮಾಡುತ್ತಿದ್ದ ವೇಳೆ ಕಾಲು ಜಾರಿ ಆ ಯುವತಿ ಬಿದ್ದಿದ್ದಾಳೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು