Wed. Nov 20th, 2024

Daughter Killed Her Mother: ಬಾಯ್‌ ಫ್ರೆಂಡ್‌ ಗಾಗಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗಳು – ಕೊಲೆ ಕೇಸಿನ ರಹಸ್ಯ ಬಿಚ್ಚಿಟ್ಟ ಆ ಸಾಕ್ಷಿ ಯಾವುದು ಗೊತ್ತಾ?

Daughter Killed Her Mother:(ಸೆ.15) ಲವ್ವರ್‌ಗಾಗಿ ಮಗಳಿಂದಲೇ ಹೆತ್ತ ತಾಯಿ ಕೊಲೆಯಾಗಿರುವ ಭಯಾನಕ ಘಟನೆ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: 💥ಮುನಿರತ್ನ ವಶಕ್ಕೆ ಪಡೆದ ಫೊಲೀಸರು

ಪ್ರಿಯಕರನ ಜೊತೆಗೂಡಿ ಮಗಳು ತಾಯಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬೊಮ್ಮನಹಳ್ಳಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಯಾರು ಈ ಜಯಲಕ್ಷ್ಮೀ?
ಮೃತ ಜಯಲಕ್ಷ್ಮೀ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಕಷ್ಟಪಟ್ಟು ಜೀವನದಲ್ಲಿ ಮೇಲಕ್ಕೆ ಬಂದಿದ್ದರು. ಸುಖವಾದ ಸಂಸಾರ ಮುದ್ದಾದ ಹೆಣ್ಣುಮಕ್ಕಳು. ಜೀವನಕ್ಕೆ ಏನು ಕೊರತೆ ಇರಲಿಲ್ಲ. 3 ಮಹಡಿಯ ಮನೆ ಕಟ್ಟಿದ್ದರು. ಕೆಳಗಡೆ ದಿನಸಿ ಅಂಗಡಿ, ಮತ್ತೆ ಬೇರೆಯವರಿಗೆ ರೂಮ್‌ ಬಾಡಿಗೆಗೆ ಕೊಟ್ಟಿದ್ದರು. ತನ್ನ ಮಗಳು ತನ್ನ ಕಣ್ಣೆದುರೆ ಓಡಾಡಿಕೊಂಡು ಇರಬೇಕೆಂದು ಜಯಲಕ್ಷ್ಮೀ ತನ್ನ ತಮ್ಮನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದಳು. ಪವಿತ್ರ ಹಾಗೂ ಸುರೇಶ್‌ ಸಂಸಾರ ಸುಖವಾಗಿತ್ತು. ಕಳೆದ 12 ವರ್ಷಗಳಿಂದ ಪವಿತ್ರಾ, ಸುರೇಶ್ ಸಂಸಾರ ನಡೆಸಿದ್ದರು.

ಬಾಡಿಗೆ ಮನೆ ಹುಡುಕುತ್ತಾ ಬಂದಿದ್ದ ತಮಿಳುನಾಡು ಮೂಲದ ನವನೀಶ್‌ ಹೊಂಗಸಂದ್ರ ಮನೆಯಲ್ಲಿ ವಾಸವಿದ್ದ . ನವನೀಶ್ ಇದ್ದ ಪಕ್ಕದ ಮನೆಯಲ್ಲೇ ಜಯಲಕ್ಷ್ಮಿ & ಮುನಿರಾಜು ಇದ್ದರು. ಜಯಲಕ್ಷ್ಮಿ ಅಳಿಯ ಸುರೇಶ್ ಮತ್ತು ಮಗಳು ಪವಿತ್ರಾ ಬೇರೆ ಕಡೆ ವಾಸವಿದ್ದರು. ಪವಿತ್ರಾ ತಾಯಿ ಮನೆಗೆ ಆಗಾಗ ಬಂದು ಹೋಗುತ್ತಿದ್ದಳು.

ಈ ವೇಳೆ ನವನೀಶ್ ಜೊತೆಗೆ ಪವಿತ್ರಾ ಪರಿಚಯವಾಗಿದೆ. ಮೊದಲು ಪರಿಚಯ , ಆಮೇಲೆ ಪ್ರೇಮಾಂಕುರವಾಗಿತ್ತು. ಚ್ಯಾಟಿಂಗ್‌, ಕಾಲ್‌ ಇದೆಲ್ಲಾ ಮನೆಯವರಿಗೆ ಗೊತ್ತಾಗದ ಹಾಗೆ ನಡೀತಾ ಇತ್ತು. ಆದರೆ, ಒಮ್ಮೆ ಇವರಿಬ್ಬರನ್ನು ಕಂಡ ಜಯಲಕ್ಷ್ಮೀ ಬುದ್ಧಿವಾದ ಹೇಳಿದ್ದಳು, ಅದರಂತೆ ನಾನು ಅವನ ಜೊತೆ ಮಾತಾಡಲ್ಲ ಅಂತ ಹೇಳ್ತಿದ್ದ ಪವಿತ್ರ , ಪುನಃ ಅವರ ಪ್ರೇಮದಾಟ ಶುರು ಮಾಡಿದ್ದರು. ಆದ್ರೆ , ತಾಯಿ ಇನ್ನೊಮ್ಮೆ ಅವನನ್ನು ಭೇಟಿ ಆದರೆ, ಎಲ್ಲರಿಗೂ ವಿಷ್ಯ ಹೇಳ್ತೆನೆ ಎಂದು ಹೇಳಿದ್ದಳು.

ಇತ್ತೀಚೆಗೆ ತಾಯಿ ಜಯಲಕ್ಷ್ಮಿಗೆ ಅನಾರೋಗ್ಯ ಕಾಡಿತ್ತು. ಆಗ ಪವಿತ್ರ ತಾನೇ ಅಂಗಡಿ ನೋಡಿಕೊಳ್ಳಲು ಬರ್ತೀನಿ ಎಂದಿದ್ದಳು. ಈ ವೇಳೆ ನವನೀಶ್ ಜೊತೆಗಿನ ಅಕ್ರಮ ಸಂಬಂಧ ಮತ್ತೆ ಶುರುವಾಗಿದೆ ಎಂದು ತಾಯಿ ಜಯಲಕ್ಷ್ಮಿಗೆ ಗೊತ್ತಾಗಿದೆ. ಜಗಳ ಮಾಡಿದ ಜಯಲಕ್ಷ್ಮಿ ಅವರು ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಇದಾದ ಮೇಲೆ ಒಂದು ತಿಂಗಳ ಹಿಂದೆ ನವನೀಶ್ ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ.

ಸೆ. 11ರಂದು ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಪವಿತ್ರ, ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದಳು. ಇಬ್ಬರು ಏಕಾಂತದಲ್ಲಿ ರೂಮ್‌ನಲ್ಲಿರುವಾಗ ತಾಯಿ ಮನೆಗೆ ಬಂದಿದ್ದಾರೆ. ಈ ಇಬ್ಬರ ಅಕ್ರಮ ಸಂಬಂಧದ ಬಗ್ಗೆ ಜಯಲಕ್ಷ್ಮಿ ಅವರು ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ತಾಯಿ-ಮಗಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸ್ನೇಹಿತನ ಜೊತೆ ಸೇರಿ ಪವಿತ್ರ ಪಕ್ಕದಲ್ಲೇ ಟವೆಲ್‌ನಿಂದ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಜಯಲಕ್ಷ್ಮಿ ಉಸಿರು ನಿಲ್ಲಿಸಿದ ಮೇಲೆ ಪವಿತ್ರ ಹಾಗೂ ನವನೀಶ್ ಬಾತ್‌ ರೂಮ್‌ನಲ್ಲಿ ಬಿದ್ದು ತಾಯಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹ ನೋಡಿದ ಪೊಲೀಸರಿಗೆ ಮೊದಲೇ ಅನುಮಾನ ಬಂದಿದೆ. ಮಾಹಿತಿ ನೀಡಿ, ಕಥೆ ಕಟ್ಟಿದ್ದ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.


ಪೋಸ್ಟ್ ಮಾರ್ಟಮ್ ವೇಳೆ ಜಯಲಕ್ಷ್ಮಿ ಅವರ ಸಾವು ಸಹಜ ಸಾವಲ್ಲ, ಕತ್ತು ಹಿಸುಕಿ ಉಸಿರುಗಟ್ಟಿಸಿರುವುದು ದೃಢವಾಗಿದೆ. ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪವಿತ್ರ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ.

Leave a Reply

Your email address will not be published. Required fields are marked *