Perla Bypadi Shri Siddivinayaka Temple: ಬಂದಾರು: ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಂದಿನ ಜ.8ರಿಂದ ಜ.12ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಮಾಲೋಚನಾ ಸಭೆ ಸೆ.15ರಂದು ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ ಗೌಡ ಅಡ್ಡಾರು ವಹಿಸಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತಸರ ಶರತ್ ಕೃಷ್ಣ ಪಡ್ಡೆಟ್ನಾಯ ಮಾರ್ಗದರ್ಶನ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಬಜೆ ಗೌರವ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಆನುವಂಶಿಕ ಆಡಳಿತ ಮೋಕ್ತಸರ ಕುಕ್ಕಪ್ಪ ಗೌಡ, ಅರ್ಚಕ ಅನಂತರಾಮ ಶಬರಾಯ, ಭಜನಾ ಮಂಡಳಿಯ ಅಧ್ಯಕ್ಷ ಲಕ್ಷ್ಮಣ ಗೌಡ, ಆಡಳಿತ ಮಂಡಳಿ ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿ ಮಜಲು, ಸಮಿತಿ ಸದಸ್ಯರು, ಊರ ಗಣ್ಯರು ಭಕ್ತರು ಉಪಸ್ಥಿತರಿದ್ದರು.
ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಮಾಡಲಾಯಿತು.
ಗೌರವಾಧ್ಯಕ್ಷರು: ಶ್ರೀ ಹರೀಶ್ ಪೂಂಜಾ ಶಾಸಕರು ಬೆಳ್ತಂಗಡಿ
ಅಧ್ಯಕ್ಷರಾಗಿ: ಶ್ರೀ ಮಹಾಬಲ ಗೌಡ ನಾಗಂದೋಡಿ
ಉಪಾಧ್ಯಕ್ಷರು: ವಿಶ್ವನಾಥ್ ಪೂಜಾರಿ ಕುರುಡಂಗೆ, ತಿಮ್ಮಪ್ಪ ಗೌಡ ಸೋಣಕುಮೆರು
ಪ್ರಧಾನ ಸಂಚಾಲಕರು: ಬಾಲಕೃಷ್ಣ ಪೂಜಾರಿ ಮುಖ್ಯಸ್ಥರು ಕೃಷಿ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ
ಪ್ರಧಾನ ಕಾರ್ಯದರ್ಶಿ: ಹರೀಶ್ ಗೌಡ ಪರಪ್ಪಜೆ
ಕಾರ್ಯದರ್ಶಿ: ಸತೀಶ್ ಗೌಡ ಬಾಲಂಪಾಡಿ
ಜೊತೆ ಕಾರ್ಯದರ್ಶಿ: ಕುಮಾರಿ ಪ್ರತೀಕ್ಷ , ಚರಣ್ಯ ಬೈದ್ರುಟ್ಟು, ಶ್ರೀಮತಿ ಸವಿತಾ ತಾರಕೆರೆ
ಕೋಶಾಧಿಕಾರಿ: ಕೇಶವ ಗೌಡ ಕೋಂಗುಜೆ
ಗೌರವ ಸಲಹೆಗಾರರು : ನಾಗೇಶ್ ಕುಮಾರ್ ಸ್ವಾಮಿ ಪ್ರಸಾದ್ ನಿಡ್ಲೆ, ಸತ್ಯಶಂಕರಮಯ್ಯ ಫಲಸದಕೊಡಿ, ಧರ್ನಪ್ಪ ಗೌಡ ಬನಡ್ಕ, ಆದಪ್ಪ ಗೌಡ ಹರ್ತ್ಯಾರು, ಹೊನ್ನಪ್ಪ ಗೌಡ ಸೋಣಕುಮೇರು, ಯೋಜನಾಧಿಕಾರಿಗಳು ಎಸ್ ಕೆ ಡಿ ಆರ್ ಡಿ ಪಿ ಧರ್ಮಸ್ಥಳ
ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹಲವಾರು ಸಮಿತಿ ಗಳನ್ನು ರಚಿಸಲಾಯಿತು. ಮಹಾಬಲ ಗೌಡ ಅಧ್ಯಕ್ಷರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಆಡಳಿತ ಮಂಡಳಿ ಸದಸ್ಯೆ ಯಶೋಧಾ ಅಡ್ಯಾರು ವಂದಿಸಿ, ಶೀನಪ್ಪ ಗೌಡ ಮತ್ತು ಸತೀಶ್ ಗೌಡ ಬಾಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.