Fri. Dec 27th, 2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಸುಕರ್ಮ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:32 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ 09:25, ಯಮಘಂಡ ಕಾಲ ಬೆಳಿಗ್ಗೆ 10:56 ರಿಂದ ಮಧ್ಯಾಹ್ನ 12:27ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:58 ರಿಂದ ಸಂಜೆ 03:30ರ ವರೆಗೆ.

ಮೇಷ ರಾಶಿ: ಇಂದು ನ್ಯಾಯವನ್ನು ಪಡೆಯಲು ಬೇರೆ ದಾರಿಗಳಿಂದ ಪ್ರಯತ್ನಿಸುವಿರಿ. ಇಂದು ಒಂದೇ ಕಾರ್ಯವನ್ನು ಮತ್ತೆ ಮಾಡಬೇಕಾಗುವುದು. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ವಾಹನದಿಂದ ನಿಮಗೆ ತೊಂದರೆಯಾಗಲಿದೆ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ವಿದ್ಯುತ್ ಯಂತ್ರಗಳ ಖರೀಯಲ್ಲಿ ವಂಚನೆಯಾಗುವ ಸಾಧ್ಯತೆ ಇದೆ.

ವೃಷಭ ರಾಶಿ; ಆತ್ಮಾವಲೋಕನ ಮಾಡಿಕೊಳ್ಳುವುದು ನಿಮಗೆ ಯೋಗ್ಯ. ನಿಮ್ಮ ನಿಶ್ಚಿತವಾದ ಯೋಜನೆಯನ್ನು ಬದಲಾಯಿಸುವಿರಿ. ತಾಯಿಯ‌ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಆತಂಕ ಉಂಟಾಗಬಹುದು. ಪ್ರಯತ್ನಪಟ್ಟು ಮಾಡುವ ಕೆಲಸವು ನಿಮಗೆ ಅನುಕೂಲವನ್ನು ಮಾಡುವುದು. ನಿಮ್ಮ ಕಾರ್ಯದ‌ ಬಗ್ಗೆ ಸಕಾರಾತ್ಮಕ ಭಾವನೆಯು ಕಡಿಮೆ ಆಗಬಹುದು.

ಮಿಥುನ ರಾಶಿ: ಏಕಕಾಲಕ್ಕೆ ಹಲವಾರು ಖರ್ಚುಗಳು ಬಂದು ನಿಮಗೆ ತಲೆಬಿಸಿ ಆಗುವುದು. ನಿಮ್ಮ ಬಗ್ಗೆ ಅಪರಿಚಿತರು ಪ್ರೀತಿ ತೋರಿಸಿದರೆ ಮುಜುಗರವಾಗುವುದು. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವಾಗಬಹುದು. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗುವಿರಿ. ನಿಮ್ಮ ಆದಾಯವನ್ನು ಅಳೆಯಬಹುದು.

ಕರ್ಕಾಟಕ ರಾಶಿ: ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದು ಇಷ್ಟವಾಗುವುದು. ಇಂದು ನಿಮ್ಮ ಪ್ರೇಮವು ಸ್ನೇಹಿತರ ಮೂಲಕ ಸಫಲವಾಗುವುದು. ಕೆಲಸದ ಸ್ಥಳದಲ್ಲಿ ಹಿರಿಯರು ಮಾರ್ಗದರ್ಶನ ಪಡೆಯಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸುವರು. ಸಾಲವನ್ನು ಮುಕ್ತಾಯ‌ ಮಾಡಿಕೊಂಡು ಸಂತೃಪ್ತಿ ಆಗುವುದು. ವ್ಯಾಪಾರದ ಉದ್ದೇಶಕ್ಕೆ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ. ನಿಮ್ಮ ಸಂಗಾತಿಯಿಂದ‌ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದೀತು.

ಸಿಂಹ ರಾಶಿ: ನಿಮ್ಮ ಉದ್ಯೋಗದ ನಿಷ್ಠೆಯು ಮೇಲಧಿಕಾರಿಗಳಿಗೆ ಇಷ್ಟವಾಗುವುದು. ಇಂದು ನೀವು ನಿಶ್ಚಿಂತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳುವಿರಿ. ಸಾಲವನ್ನು ನೆನೆಸಿಕೊಂಡು ನೀವು ಬಹಳ ಸಂಕಟಪಡುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ. ಬಂಧುಗಳ ಅಸಹಜವಾದ ಮಾತನ್ನು ತಿರಸ್ಕರಿಸುವಿರಿ. ನಿಮ್ಮ ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಕನ್ಯಾ ರಾಶಿ: ಯಾವ ಒಪ್ಪಂದವನ್ನೂ ಬಾಯಿ ಮಾತಿನಲ್ಲಿ ಮಾಡಿಕೊಳ್ಳಬೇಡಿ. ನೀವು ಇಂದು ಆಪ್ತರನ್ನೇ ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ಸ್ಥಿರಾಸ್ತಿಯಲ್ಲಿ ಹೆಚ್ಚು ಲಾಭವನ್ನು ಪಡೆಯಲು ನೀವು ಯೋಚಿಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದುವಾಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಅನ್ಯರ ಬೆಂಬಲ ಸಿಗಲಿದೆ. ಇಂದು ನೀವು ಲವಲವಿಕೆಯಿಂದ ಇದ್ದು ಇನ್ನೊಬ್ಬರನ್ನೂ ಹಾಗೆ ನೋಡಿಕೊಳ್ಳುವಿರಿ.

ತುಲಾ ರಾಶಿ: ವ್ಯವಸ್ಥೆಯ ಕೈಮೀರುವ ತನಕ‌ ಅದನ್ನು ಬಿಡುವುದು ಬೇಡ. ಇಂದು ಅವಸರದಲ್ಲಿ ಉದ್ಯೋಗದ ತೀರ್ಮಾನವನ್ನು ನೀವು ತೆಗೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವ ಮನಃಸ್ಥಿತಿಯನ್ನು ಹೊಂದುವಿರಿ. ನೀವು ಸಭ್ಯರಂತೆ ಕಂಡರೂ ಯಾರೂ ನಂಬಲಾರರು. ನಿಮ್ಮ ಇಂದಿನ ಆರ್ಥಿಕ ಸ್ಥಿತಿಯು ನಿಮಗೆ ಹೆಚ್ಚು ಸುಖ ಕೊಡುವುದು.

ವೃಶ್ಚಿಕ ರಾಶಿ: ಕೌಟುಂಬಿಕ ವಾತಾವರಣವನ್ನು ನೀವು ಸಂತೋಷದಿಂದ ಅನುಭವಿಸುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತನೆ ಆರಂಭವಾಗಲಿದೆ. ನಿಮ್ಮ ಸ್ಥಿರಾಸ್ತಿಯ ಬಗ್ಗೆ ಶಂಕೆ ಇರುವುದು. ನಿಮ್ಮ‌ ಸುತ್ತಮುತ್ತಲಿನವರು ನಿಮಗೆ ತೊಂದರೆ ಕೊಡಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆಯುವಿರಿ. ವಿದೇಶದ ನಿಮ್ಮ ಉದ್ಯಮವು ಕಷ್ಟ ಎನಿಸಬಹುದು. ಹೊಸದಾಗಿ ಕೆಲಸಕ್ಕೆ ಸೇರಿದವರು ಕಾರ್ಯದಲ್ಲಿ ಉತ್ಸಾಹವನ್ನು ತೋರಿಸುವರು.

ಧನು ರಾಶಿ: ನಿಮ್ಮ ಬೆಳವಣಿಗೆಯು ಸಾತ್ತ್ವಿಕ ರೀತಿಯಲ್ಲಿ ಇರಲಿ. ಇಂದು ಸಿಟ್ಟಿನ ಭರದಲ್ಲಿ ನೀವು ವಿವೇಚನೆಯನ್ನು ಕಳೆದುಕೊಳ್ಳುವಿರಿ. ಚಂಚಲ ಮನಸ್ಸಿನಿಂದ ಕಾರ್ಯವನ್ನು ಸಾಧಿಸಲಾಗದು. ಪ್ರೀತಿಯಿಂದ ಕೊಟ್ಟ ಹಣವನ್ನು ನೀವು ಕೇಳುವುದರೊಳಗೆ ಹಿಂದಿರುಗಿಸಿ. ವಾಸದ ಸ್ಥಳವನ್ನು ನೀವು ಬದಲಾಯಿಸುವಿರಿ. ನೀವು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದೀತು. ನಿಮ್ಮ ಸಾಧನೆಯನ್ನು ನೀವು ಎಲ್ಲರ ಬಳಿ ಹೇಳಿಕೊಳ್ಳುವಿರಿ.

ಮಕರ ರಾಶಿ: ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರದರ್ಶನ ಇರಲಿದೆ. ವ್ಯವಹಾರದಲ್ಲಿ ಮಧ್ಯವರ್ತಿಗಳಿಂದ ಕೆಲವು ತೊಂದರೆಗಳು ಎದುರಾಗುವುದು.ವ್ಯಕ್ತಿಗತ ಸಂಬಂಧಗಳನ್ನು ಸರಿಯಾಗಿ ಇರುವಂತೆ ನೋಡಿಕೊಳ್ಳಿ. ನೀವು ಎಲ್ಲವನ್ನೂ ಪ್ರಾಯೋಗಿಕ ಹಿನ್ನೆಲೆಯಲ್ಲಿ ನೋಡುವಿರಿ. ನೀವು ಮಕ್ಕಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ. ಕೆಲವು ಸವಾಲುಗಳು ಉದ್ಭವಿಸಬಹುದು.

ಕುಂಭ ರಾಶಿ: ಪರಧನದಿಂದ ನಿಮಗೆ ಹಿಂಜರಿಕೆ ಇರಲಿದೆ. ಹೂಡಿಕೆಯ ಕಾರಣದಿಂದ‌ ನಿಮ್ಮ ಖರ್ಚನ್ನು ಆದಾಯವಾಗಿ ಪರಿವರ್ತಿಸಲು ಮಾಡಿಕೊಳ್ಳುವಿರಿ. ಹಳೆಯ ರೋಗವು‌ ಮರುಕಳಿಸಬಹುದು. ವಿದೇಶದ ವ್ಯಾಪಾರವನ್ನು ಮಾಡುವವರಿಗೆ ಶುಭ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಲಿದೆ. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಶೈಕ್ಷಣಿಕವಾಗಿ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು.

ಮೀನ ರಾಶಿ: ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ತೊಂದರೆ. ನಿಮಗೆ ವ್ಯವಹಾರವು ಅಂದುಕೊಂಡಷ್ಟು ಸಾಧಿಸಲಾಗದೇ ಇಂದು ಬೇಸರವಾಗಬಹುದು. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಮಾಡಬಹುದು. ಸಣ್ಣಮಟ್ಟಿನ‌ ಗೌರವವು ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿಯು ಇರಲಿದ್ದು, ನೀವು ತೊಡಗಿಕೊಳ್ಳುವಿರಿ. ಲಾಭವನ್ನು ಪಡೆಯಲು ಹೋಗಿ ಇರುವ ಸಂಪತ್ತನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಭವಿಷ್ಯದ‌ ಕುರಿತಂತೆ ನಿಮ್ಮ ಉದ್ದೇಶವನ್ನು ಸಂಗಾತಿಯ ಜೊತೆ ಚರ್ಚಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ಇಂದು ನಿಮಗೆ ಆತ್ಮತೃಪ್ತಿಯು ಇರುವುದು.

Leave a Reply

Your email address will not be published. Required fields are marked *