Thu. Dec 26th, 2024

Mundaje: ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ – ಅಪಾರ ನಷ್ಟ

ಮುಂಡಾಜೆ:(ಸೆ.17) ರಬ್ಬರ್ ಸ್ಮೋಕ್ ಹೌಸ್ ಗೆ ಬೆಂಕಿ ಬಿದ್ದು ಒಂದು ಲಕ್ಷ ರೂ.ಗಿಂತ ಅಧಿಕ ನಷ್ಟ ಸಂಭವಿಸಿದ ಘಟನೆ ಮುಂಡಾಜೆ ಗ್ರಾಮದ ಬಲ್ಯಾರ್ ಕಾಪು ರಸ್ತೆಯ ಹೊಸ ಗದ್ದೆಯಲ್ಲಿ ನಡೆದಿದೆ.

ಇದನ್ನೂ ಓದಿ ;🛑ಆ‌ರ್.ಎ.ಎಫ್ ಪೊಲೀಸರಿದ್ದ ಲಾರಿ ಪಲ್ಟಿ – ಇಬ್ಬರಿಗೆ ಗಾಯ

ರಬ್ಬರ್ ಸ್ಮೋಕ್ ಹೌಸ್ ಗೆ ಮಂಗಳವಾರ ಬೆಳಗಿನ ಜಾವ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಹೋಗಿ ಸುಮಾರು 3 ಕ್ವಿಂಟಾಲ್ ರಬ್ಬರ್ ಹಾಗೂ ಒಂದು ಕ್ವಿಂಟಾಲ್ ಅಡಿಕೆ ಬೆಂಕಿಗೆ ಆಹುತಿಯಾಗಿದೆ.

ಸ್ಮೋಕ್ ಹೌಸ್ ನ ಶೀಟುಗಳು ಸುಟ್ಟು ಹೋಗಿವೆ.


ಸ್ಥಳೀಯರು ಮತ್ತು ಅಗ್ನಿ ಶಾಮಕ ದಳ ಬೆಂಕಿ ಹತೋಟಿಗೆ ತರಲು ಸಹಕರಿಸಿದರು. ಆದರೂ ಸ್ಮೋಕ್ ಹೌಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.

Leave a Reply

Your email address will not be published. Required fields are marked *