ನಿಟ್ಟಡೆ :(ಸೆ.17) 2023 -24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ, ನಿಟ್ಟಡೆಯಲ್ಲಿ ನಡೆಯಿತು.
ಇದನ್ನೂ ಓದಿ; 🟠74 ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ
ಕುಂಭಶ್ರೀ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಹುಮಾನವನ್ನು ಪಡೆದಿರುತ್ತಾರೆ.
ಹಿರಿಯ ವಿಭಾಗ – ಪ್ರಿಯಾ ಕೆಎಸ್- ಭಕ್ತಿ ಗೀತೆ ಮತ್ತು ದೇಶಭಕ್ತಿ ಗೀತೆ ಪ್ರಥಮ, ಸಾನ್ವಿ ಯಂ ಅಭಿನಯ ಗೀತೆ ಪ್ರಥಮ, ಸಾನ್ವಿ -ಚಿತ್ರಕಲೆ ಪ್ರಥಮ, ಪ್ರೀತಿ ಕೆಎಸ್ – ಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ, ಚಿನ್ಮಯಿ- ಆಶುಭಾಷಣ ಪ್ರಥಮ, ಸಂಪ್ರೀತ್ ಕ್ಲೇ ಮಾಡಲಿಂಗ್ ದ್ವಿತೀಯ, ಅನನ್ಯ ಕಥೆ ಹೇಳುವುದು ದ್ವಿತೀಯ, ಅಮಿತ್ ಭಾಗ್ ಹಿಂದಿ ಕಂಠಪಾಠ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಚಾಂಪಿಯನ್ ಶಿಪ್ ಕುಂಭಶ್ರೀ ವಿದ್ಯಾಸಂಸ್ಥೆಯು ಪಡೆದುಕೊಂಡಿರುತ್ತದೆ.
ಕಿರಿಯ ವಿಭಾಗ ಸಂಜಿತ್ ಆಶುಭಾಷಣ ಪ್ರಥಮ , ಪ್ರಣಿತ್ ಪಿ ಧಾರ್ಮಿಕ ಪಠಣ, ಸನಾ ಕಾರ್ಲೊ ಚಿತ್ರಕಲೆ ದ್ವಿತೀಯ, ಸುಪ್ರೀತ್ ಕ್ಲೇ ಮಾಡಲಿಂಗ್ ದ್ವಿತೀಯ, ಇಶಾಂತ್ ಕೆ ಟಿ ಇಂಗ್ಲೀಷ್ ಕಂಠಪಾಠ ತೃತೀಯ, ಅಝೀಂ ಅರೇಬಿಕ್ ಪಟ್ಟಣ ತೃತೀಯ, ಮನ್ವಿತ್ ಜಿ ಪಿ ಭಕ್ತಿಗೀತೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಿರಿಯ ವಿಭಾಗದಲ್ಲಿ ನಮ್ಮ ಶಾಲೆ ದ್ವಿತೀಯ ಚಾಂಪಿಯನ್ ಶಿಪ್ ಪಡೆದುಕೊಂಡಿದೆ. ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರ, ಹಿರಿಯ ಪ್ರಾಥಮಿಕ ವಿಭಾಗದ ಉಪಮುಖ್ಯ ಶಿಕ್ಷಕಿ ಶುಭ, ಹಿರಿಯ ಪ್ರಾಥಮಿಕ ಶಿಕ್ಷಕಿ ವಾಣಿ, ಮತ್ತು ಚೈತ್ರ ಶ್ರೀ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಭಾಗವಹಿಸಿ ಮಕ್ಕಳಿಗೆ ಸಹಕರಿಸಿದರು.
ಬಹುಮಾನವನ್ನು ಪಡೆದಂತಹ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆಎಚ್ ಮತ್ತು ಸಂಚಾಲಕರಾದಯಾದ ಅಶ್ವಿತ್ ಕುಲಾಲ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.