ಬೆಳ್ತಂಗಡಿ:(ಸೆ.18) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಘಟಕದ ಪದಾಧಿಕಾರಿಗಳ ಸಭೆಯು ಬೆಳ್ತಂಗಡಿ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು.
ಇದನ್ನೂ ಓದಿ; ☪ಉಜಿರೆಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ – ಪ್ರವಾದಿ ಸಂದೇಶ ಜಾಥಾ
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರು ಪದಾಧಿಕಾರಿಗಳೊಂದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ವಾಸಿಸುತ್ತಿರುವ ಬುಡಕಟ್ಟು ಕುಟುಂಬದ ಹಲವಾರು ಸಮಸ್ಯೆಗಳ ಬಗ್ಗೆ ವಿದ್ಯುತ್ , ರಸ್ತೆ , ಭೂ ಒಡೆತನದ ,ಬಗ್ಗೆ ಸಂವಾದ ವನ್ನು ನಡೆಸಿ.
ಮುಂದಿನ ದಿನದಲ್ಲಿ ಬೆಳ್ತಂಗಡಿ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶವನ್ನು ನಡೆಸಿ ಈ ಎಲ್ಲಾ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಮಂತ್ರಿಗಳನ್ನು ಕರೆಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ.ಎಂದರು..
ಪರಿಶಿಷ್ಟ ಪಂಗಡದಿಂದ ಸರ್ಕಾರ ನಾಮನಿರ್ದೇಶಿತ ಸದಸ್ಯರಾಗಿ ಅಯ್ಕೆಯಾಗಿರುವ ಸದಸ್ಯರನ್ನು ಅಭಿನಂದಿಸಲಾಯಿತು.
ಖಂಡನೆ ನಿರ್ಣಯ:
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸವಣಾಲು ಗ್ರಾಮದ ಹನ್ಯಾಡಿ ಪಿಲಿಕಲ ರಸ್ತೆ ದುರಸ್ತಿ ವೀಕ್ಷಣೆ ಸಂದರ್ಭದಲ್ಲಿ ಅದಿವಾಸಿ ಸಮುದಾಯದವರು ಶಾಸಕರನ್ನು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ನಾಯಿದ ಬಾಲೆಲು ಎಂಬ ನಿಂದನಾತ್ಮಕ ಪದ ಬಳಸಿದಕ್ಕೆ ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ನಾರಾಯಣ ನಾಯ್ಕ್ , ಜಿಲ್ಲಾ ಸಂಯೋಜಕರಾದ ಚಿತ್ತರಂಜನ್ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಎಮ್ ನಾಗೇಶ್ ಕುಮಾರ್ ಗೌಡ , ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ,
ಜಿಲ್ಲಾ ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಜಯರಾಮ್ ಎಮ್ ಕೆ, ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾದ ಜಯನಂದ ಪಿ, ಗ್ರಾಮೀಣ ಅಧ್ಯಕ್ಷರಾದ ಜಿನ್ನಪ್ಪ ನಾಯ್ಕ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ, ತಾಲೂಕು ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶ್ರೀಮತಿ ಸವಿತಾ ,
ತಾಲೂಕು ಆರಾಧನಾ ಸಮಿತಿಯ ಸದಸ್ಯರಾದ ಲಕ್ಷಣ್ ಮಲೆಕುಡಿಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಕೇಶವ ನಾಯ್ಕ್ ಒಡಿಲ್ನಾಳ ಹಾಗೂ ಸಮಿತಿ ಪ್ರಮುಖರು ಸದಸ್ಯರು ಉಪಸ್ಥಿತರಿದ್ದರು.