Fri. Dec 27th, 2024

Husband – Wife: ಗಂಡ – ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು ಗೊತ್ತಾ?

Husband – Wife: (ಸೆ.18) ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರ ಇರಬೇಕು ಎಂಬುವುದು ಹಲವರ ಅಭಿಪ್ರಾಯವಾಗಿರುತ್ತದೆ. ಕೆಲ ಅಧ್ಯಯನಗಳ ಪ್ರಕಾರ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಈ ವಯಸ್ಸಿನ ಅಂತರ ಮುಖ್ಯವಾಗುತ್ತದೆ.

ಇದನ್ನೂ ಓದಿ: 🔴ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಮಹತ್ವದ 14ನೇ ಯೋಜನೆಯಾದ “ಮುಗ್ಧ ಮನಸ್ಸುಗಳೊಂದಿಗೆ” ಸ್ಪಂದನ ಚಾರಿಟೇಬಲ್ ಟ್ರಸ್ಟ್

ವಯಸ್ಸಿನ ಅಂತರ ಜೋಡಿಯ ಬದುಕಿನ ಮೇಲೆ ನೇರ ಪರಿಣಾಮ ಬೀಳುತ್ತದೆ ಎಂದು ಈ ಅಧ್ಯಯನ ಹೇಳುತ್ತದೆ. ಕಡಿಮೆ ವಯಸ್ಸಿನ ಅಂತರದ ಜೋಡಿಗಳಲ್ಲಿ ಹೊಂದಾಣಿಕೆ ಹೆಚ್ಚಾಗಿ ಕಂಡು ಬರುತ್ತದೆ ಎಂಬವುದು ಕೆಲವರ ವಾದವಾಗಿರುತ್ತದೆ.


ಈ ಹಿಂದೆ ಹುಡುಗನಿಗಿಂತ ಹುಡುಗಿ ಚಿಕ್ಕವಳಾಗಿರಬೇಕು ಎಂಬ ನಿಯಮವಿತ್ತು. ಇಂದು ಕಾಲ ಬದಲಾಗಿದ್ದು, ಹುಡುಗರು ತಮಗಿಂದ ಎರಡರಿಂದ ಮೂರು ವರ್ಷದ ದೊಡ್ಡವರನ್ನು ಮದುವೆಯಾಗುತ್ತಿದ್ದಾರೆ.

ಇಬ್ಬರಲ್ಲಿ ಯಾರ ವಯಸ್ಸು ಹೆಚ್ಚಾಗಿರಬೇಕು ಎಂಬುದರ ಬಗ್ಗೆ ಹೇಳಲು ಅಸಾಧ್ಯ. ಹಿರಿಯರ ಪ್ರಕಾರ, ಹುಡುಗನ ವಯಸ್ಸೇ ಹೆಚ್ಚಿರಬೇಕು.
ಜೋಡಿ/ದಂಪತಿ ನಡುವಿನ ವಯಸ್ಸಿನ ಅಂತರ ಭಾವನಾತ್ಮಕ ಮತ್ತು ಮಾನಸಿಕತೆ ಮೇಲೆ ಪರಿಣಾಮ ಬೀರುತ್ತದೆ.

ಆದರೆ ವಯಸ್ಸಿನ ಅಂತರವೊಂದೇ ಇಬ್ಬರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದರ್ಥವಲ್ಲ. ವಯಸ್ಸು ಹೊರತುಪಡಿಸಿಯೂ ಜೀವನದ ಮೇಲೆ ಪರಿಣಾಮ ಬೀರುತ್ತವೆ.


ಕೆಲ ಅಧ್ಯಯನಗಳ ಪ್ರಕಾರ, ಜೋಡಿ ಅಥವಾ ಗಂಡ-ಹೆಂಡತಿ ನಡುವಿನ ವಯಸ್ಸಿನ ಅಂತರ 2ರಿಂದ 5 ವರ್ಷ ಆಗಿರಬೇಕು ಎಂದು ಹೇಳುತ್ತದೆ. ಆದರೆ ಇಬ್ಬರಲ್ಲಿ ಯಾರ ವಯಸ್ಸು ಹೆಚ್ಚಾಗಿರಬೇಕು ಎಂಬುದನ್ನು ಜೋಡಿಗಳು ನಿರ್ಧರಿಸಿಕೊಳ್ಳಬೇಕು.

ವಯಸ್ಸಿನ ಅಂತರದ ಆಯ್ಕೆ ಎಂಬುವುದು ವೈಯಕ್ತಿಕ ವಿಷಯ ಎಂದು ಅಧ್ಯಯನ ಹೇಳುತ್ತದೆ.

Leave a Reply

Your email address will not be published. Required fields are marked *