Thu. Dec 26th, 2024

Ujire: ಉಜಿರೆಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ – ಪ್ರವಾದಿ‌ ಸಂದೇಶ ಜಾಥಾ

ಬೆಳ್ತಂಗಡಿ:(ಸೆ.18) ಉಜಿರೆ ಹಳೆಪೇಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಅಂಗ ಸಂಸ್ಥೆಗಳ ಸಹಕಾರದೊಂದಿಗೆ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಇದನ್ನೂ ಓದಿ: ⭕ಮಂಗಳೂರು : ಕೂಳೂರು ಸೇತುವೆ ಬಳಿ ಭೀಕರ ಅಪಘಾತ


ಹಬ್ಬದ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಮೀಲಾದ್ ಸಂದೇಶ ಕಾರ್ಯಕ್ರಮ, ಉಜಿರೆ ಮಸ್ಜಿದ್ ವಠಾರದಿಂದ ಪಿಸಿ ಪೈ ಪೆಟ್ರೋಲ್ ಬಂಕ್ ವರೆಗೆ ಮೀಲಾದ್ ಸಂದೇಶ ಜಾಥಾ, ಅನ್ನದಾನ ಇತ್ಯಾಧಿ ಪ್ರಮುಖ ಕಾರ್ಯಕ್ರಮಗಳು ನಡೆಯಿತು.

ಉಜಿರೆ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಬಿ.ಎಮ್ ಹಮೀದ್ ಹಾಜಿ ಅವರ ನೇತೃತ್ವದಲ್ಲಿ,‌ಮೀಲಾದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌. ಎಂ ಕೋಯ ವಹಿಸಿದ್ದು ಮಾರ್ಗದರ್ಶನ ನೀಡಿದರು.

ಸಯ್ಯಿದ್ ಇಸ್ಮಾಯಿಲ್ ತಂಙಳ್ ದುಆ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು. ಮಸ್ಜಿದ್ ಪ್ರಧಾನ ಧರ್ಮಗುರುಗಳಾದ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಖಾನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿಗಳ ಕಳೆದ ಸಾಲಿನ ಶೈಕ್ಷಣಿಕ ಪ್ರಗತಿ ಪರಿಗಣಿಸಿ ಹಾಜರಿಯಲ್ಲಿ ಮತ್ತು ಕಲಿಕೆಯಲ್ಲಿ ಉನ್ನತಿ ಸಾಧಿಸಿದ ವಿದ್ಯಾರ್ಥಿಗಳನ್ನು ಪ್ರಮಾಣಪತ್ರದೊಂದಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಅಂಗೀಕೃತ ಪಬ್ಲಿಕ್ ಪರೀಕ್ಷೆಗಳಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕಳೆದ ಸಾಲಿನಲ್ಲಿ 7ನೇ ತರಗತಿಯಲ್ಲಿ ರೇಂಜ್ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಆಯಿಷತ್ ಶಝ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್, ಕೋಶಾಧಿಕಾರಿ‌ ಇಬ್ರಾಹಿಂ ವಾಫಿರ್, ಅಲ್ ಅಮೀನ್ ಯಂಗ್ ಮೆನ್ಸ್ ಅಧ್ಯಕ್ಷ ಶಾಕಿರ್, ನಿವೃತ್ತ ಡಿಎಫ್‌ಒ ಯು‌. ಹೆಚ್ ಮುಹಮ್ಮದ್, ಜಮಾಅತ್ ಉಪಾಧ್ಯಕ್ಷ‌‌ ಯು.ಎ ಹಮೀದ್, ಖುತುಬಿಯತ್ ಸಮಿತಿ‌ ಅಧ್ಯಕ್ಷ ಇಸ್ಮಾಯಿಲ್, ಅಬೂಬಕ್ಕರ್ ಚಮ್ಮೀನ್, ಅಬೂಬಕ್ಕರ್ ಸುಪ್ರಿಂ, ಬದುರುಲ್ ಹುದಾ ಸೆಕೆಂಡರಿ ಮದರಸದ ಸದರ್ ರಫೀಕ್‌ ಮದನಿ, ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಎಲ್ಲರ ಪರವಾಗಿ ಜೊತೆ ಕಾರ್ಯದರ್ಶಿ ಯು.ಕೆ ಮುಹಮ್ಮದ್ ಹನೀಫ್ ಉಜಿರೆ ಮಾತನಾಡಿ ಸಹಕರಿಸಿದ ಎಲ್ಲರನ್ನೂ ನೆನೆದು ಕೃತಜ್ಞತೆ ಅರ್ಪಿಸಿದರು.


ಸೆ.16 ರಂದು ಸಂದೇಶ ಜಾಥಾವನ್ನು‌ ದರ್ಗಾ ಝಿಯಾರತ್ ನೊಂದಿಗೆ ಧ್ವಜಾರೋಹಣ ನಡೆಸಿ ಆರಂಭಿಸಲಾಯಿತು. ಮೌಲೀದ್ ಪಾರಾಯಣ ನಡೆಸಿ ಅನ್ನದಾನ ನಡೆಯಿತು.

ಆಲ್ ಅಮೀನ್ ಯಂಗ್ ಮೆನ್ಸ್ , ಕಾರ್ಯದರ್ಶಿ ಫಝಲ್ ರಹಿಮಾನ್ ಸ್ವಾಗತಿಸಿದರು.

Leave a Reply

Your email address will not be published. Required fields are marked *