Wed. Nov 20th, 2024

Aishwarya Rai daughter: ಶಿವಣ್ಣನ ಜೊತೆಗೆ ಮಗಳು ಆರಾಧ್ಯ ಬಚ್ಚನ್ ವರ್ತಿಸಿದ್ದು ಕಂಡು ಕನ್ನಡಿಗರು ಶಾಕ್ !!

ದುಬೈ: (ಸೆ.19) ಇತ್ತೀಚೆಗೆ ದುಬೈಯಲ್ಲಿ SIIMA 2024 ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರಿಗೆ ಉತ್ತಮ ನಟಿ ಪ್ರಶಸ್ತಿ ಪ್ರದಾನವೂ ನಡೆಯಿತು.

ಇದನ್ನೂ ಓದಿ: 🟠ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ಚಿದಾನಂದ ಪೆರಿಯಡ್ಕ ನೇಮಕ

ಇದೇ ವೇಳೆ ಐಶ್ವರ್ಯಾ ರೈಯವರ ಮಗಳು ಆರಾಧ್ಯ ಬಚ್ಚನ್‌ ಕನ್ನಡದ ಜನಪ್ರಿಯ ನಟ ಶಿವರಾಜ್‌ ಕುಮಾರ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದೃಶ್ಯವುಳ್ಳ ವಿಡಿಯೋವೊಂದು ವೈರಲ್‌ ಆಗಿದೆ.

ಕಾರ್ಯಕ್ರಮದಲ್ಲಿ ಕನ್ನಡದ ಹೆಮ್ಮೆಯ ನಟ ಶಿವಣ್ಣ ಕೂಡ ಭಾಗಿಯಾಗಿದ್ದರು. ಐಶ್ವರ್ಯಾ ರೈ ಪೊನ್ನಿಯನ್‌ ಸೆಲ್ವನ್‌ 2 ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ವೇದಿಕೆಯಿಂದ ಕೆಳಗಿಳಿದು ಬರುತ್ತಿದ್ದರು.

ಈ ವೇಳೆ ಆರಾಧ್ಯ ಓಡಿ ಬಂದು ತಾಯಿಗೆ ಪ್ರೀತಿಯ ಅಪ್ಪುಗೆ ನೀಡಿ ಅಭಿನಂದಿಸಿದಳು. ಇದೇ ಸಮಯಕ್ಕೆ ಅಲ್ಲಿ ನಟ ಶಿವರಾಜ್‌ ಕುಮಾರ್‌ ಹಾದು ಹೋಗುತ್ತಿದ್ದರು.

ಇದನ್ನು ಗಮನಿಸಿದ ನಟಿ ಐಶ್ವರ್ಯಾ ರೈ, ನಟ ಶಿವರಾಜ್‌ ಕುಮಾರ್‌ರನ್ನು ಕರೆದು ಮಾತನಾಡಿಸಿದರು. ಅಲ್ಲದೆ, ಅಲ್ಲೇ ಇದ್ದ ತಮ್ಮ ಮಗಳನ್ನು ಶಿವಣ್ಣಗೆ ಪರಿಚಯಿಸಿದರು. ಈ ವೇಳೆ ಮಗಳು ಆರಾಧ್ಯ ನಟ ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಆರಾಧ್ಯ ಅವರ ಸಂಸ್ಕಾರವನ್ನು ಕಂಡು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಶಿವಣ್ಣನ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಈ ವಿಡಿಯೋ ಶೇರ್‌ ಮಾಡಿಕೊಂಡು ಖುಷಿಪಟ್ಟಿದ್ದಾರೆ.

Leave a Reply

Your email address will not be published. Required fields are marked *