Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್ / ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ / ರೇವತೀ, ಯೋಗ: ವೃದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಮಧ್ಯಾಹ್ನ 01:57 ರಿಂದ 03:28, ಯಮಘಂಡ ಕಾಲ ಬೆಳಿಗ್ಗೆ 06:23 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:24 ರಿಂದ ಮಧ್ಯಾಹ್ನ 10:55ರ ವರೆಗೆ.

ಮೇಷ ರಾಶಿ : ಸ್ವಂತ ವಾಹನ ಸವಾರರಿಗೆ ಖರ್ಚು ಬರುವುದು. ಇಂದು ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣ ಅತ್ಯವಶ್ಯಕ. ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ನೀವು ಪಡೆದುಕೊಳ್ಳುವಿರಿ. ಅಧಿಕ ವೆಚ್ಚವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ವೃಷಭ ರಾಶಿ : ಇಂದು ನೀವು ಗೌಪ್ಯವಾಗಿ ಸಮಾಲೋಚನೆ ನಡೆಸಿ ಮುಂದಿನ ಯೋಜನೆಯನ್ನು ಹೇಳುವಿರಿ. ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ನಿಮ್ಮ ವ್ಯವಹಾರದಲ್ಲಿ ನಿಮಗೆ ವಂಚನೆಯಾಗಲಿದೆ. ಪ್ರೇಮಪಾಶದಿಂದ ನಿಮಗೆ ತಪ್ಪಿಸಿಕೊಳ್ಳುವುದು ಕಷ್ಟ. ನಿಮ್ಮ ಕಳುವಾದ ವಸ್ತುವು ಸಿಗಲಿದೆ.

ಮಿಥುನ ರಾಶಿ : ಸಂಗಾತಿಯ ದುರಭ್ಯಾಸವನ್ನು ನಿಲ್ಲಿಸುವುದು ಸುಲಭವಲ್ಲ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ವಾಹನವನ್ನು ಖರೀದಿಸುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ.

ಕರ್ಕಾಟಕ ರಾಶಿ : ನಿಮ್ಮ ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ಯಾರೂ ನಿಮಗೆ ಸುಮ್ಮನೇ ಸಹಾಯ ಮಾಡಲಾರರು. ವಿದೇಶದಲ್ಲಿ ಇರುವವರಿಗೆ ಸಂಕಟವಾಗಬಹುದು.

ಸಿಂಹ ರಾಶಿ : ನಿಮ್ಮನ್ನು ನೀವು ಇನ್ನೊಬ್ಬರಿಗೆ ಸಾಕ್ಷಿಯಾಗಿ ತೋರಿಸಬೇಕಿಲ್ಲ. ನಂಬಿಕೆ ಇದ್ದವರು ಇರುತ್ತಾರೆ.‌ ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಮೇಲಧಿಕಾರಿಗಳ ಕಿರುಕುಳವು ನಿಮಗೆ ಬಹಳ ಕಷ್ಟವಾದೀತು.

ಕನ್ಯಾ ರಾಶಿ : ಯಾರದೋ ಹಂಗಿನಿಂದ ದೂರವಿರಲು ಬಯಸುವಿರಿ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ಭೂಮಿಯನ್ನು ಖರೀದಿಸುವ ಯೋಗವು ಬಂದಿದ್ದರೂ ಹಣವನ್ನು ಸೇರಿಸಲು ಕಷ್ಟವಾದೀತು. ದುಬಾರಿ ವಸ್ತುಗಳನ್ನು ಖರೀದಿಸಬೇಕಾದರೂ ಅದನ್ನು ಮುಂದೂಡುವಿರಿ. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕೀತು.

ತುಲಾ ರಾಶಿ : ಸಣ್ಣ ಕಾರ್ಯಗಳಿಗೆ ಇಂದು ಹೆಚ್ಚು ಸಮಯ ಬೇಕಾಗುವುದು. ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಇಂದಿನ ಕಾರ್ಯದ ಗುರಿಯನ್ನು ನೀವು ಸಹೋದ್ಯೋಗಿಗಳ ಸಹಕಾರದಿಂದ ಮಾಡುವಿರಿ. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗಲಿದ್ದು ಮನೆಯಲ್ಲಿ ಚರ್ಚೆಗಳು ನಡೆಯಬಹುದು.

ವೃಶ್ಚಿಕ ರಾಶಿ : ನಿಮ್ಮ ಸಹೋದ್ಯೋಗಿಗಳ ಬಗ್ಗೆ ಸದಭಿಪ್ರಾಯವನ್ನು ಇಟ್ಟುಕೊಳ್ಳುವುದು ಸಾಧ್ಯವಾಗದು. ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗಲಿದೆ.

ಧನು ರಾಶಿ : ವ್ಯವಹಾರದಲ್ಲಿ ಆಗುವ ಮಂದಗತಿಯಿಂದ ಬೇಸರವಾಗಲಿದೆ. ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ಇನ್ನೊಬ್ಬರ ವಿಷಯದಲ್ಲಿ ಮೂಗುತೂರಿಸುವ ಕೆಲಸವು ಅನವಶ್ಯಕ.

ಮಕರ ರಾಶಿ : ಹಳೆಯ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮಾಡುವಿರಿ. ದುರಭ್ಯಾಸವನ್ನು ನೀವು ರೂಢಿಸಿಕೊಂಡಿರುವುದು ಅರಿವಿಗೆ ಬರಲಿದೆ.

ಕುಂಭ ರಾಶಿ : ನಿಮ್ಮ ಔಷಧದ ಸೇವೆಯಿಂದ ಅಡ್ಡಪರಿಣಾಮ ಉಂಟಾಗುವುದು. ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ನಿಮ್ಮ ಆಲೋಚನೆಯಲ್ಲಿ ವ್ಯತ್ಯಾಸವಾಗಲಿದೆ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಕಣ್ಣಿಗೆ ಕಾಣಿಸಿದ್ದನ್ನು ನೀವು ನಂಬಲಾರಿರಿ. ವಿದೇಶದವರ ಸ್ನೇಹವು ಉಂಟಾಗಬಹುದು.

ಮೀನ ರಾಶಿ : ಕಛೇರಿಯ ಕಾರ್ಯಗಳಲ್ಲಿ ಆತುರತೆ ಬೇಡ. ಏಕೆಂದರೆ ಸಣ್ಣ ತಪ್ಪಾದರೂ ಪುನಃ ಮಾಡಬೇಕಾಗುವುದು. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯನ್ನು ಮಾಡುವಿರಿ. ಅಪ್ರಧಾನವಾದ ವಿಚಾರವು ನಿಮನ್ನು ಕಾಡಬಹುದು.ನಾಯಕತ್ವವನ್ನು ನೀವು ನಿರಾಕರಿಸಬಹುದು. ಸಂಗಾತಿಯಿಂದ ನಿಮಗೆ ನಕಾರಾತ್ಮಕ ಆಲೋಚನೆ ಬರುವುದು. ಕೃಷಿಯಲ್ಲಿ ಆಸಕ್ತಿಯು ಹೆಚ್ಚಿದ್ದು ಮಾರ್ಗದರ್ಶನವನ್ನು ನೀವು ಬಯಸುವಿರಿ.

Leave a Reply

Your email address will not be published. Required fields are marked *