Fri. Dec 27th, 2024

Kundapur: MBBS ಪದವೀಧರ ಕೆರೆಗೆ ಹಾರಿ ಆತ್ಮಹತ್ಯೆ.!!

ಕುಂದಾಪುರ :(ಸೆ.19) ಎಂ.ಬಿ.ಬಿ.ಎಸ್ ಮುಗಿಸಿ ಎಂ.ಎಸ್ ಮಾಡಲು ಸಿದ್ಧತೆ ನಡೆಸುತ್ತಿದ್ದ ಯುವಕ ಸೆ.18 ಬುಧವಾರ ರಾತ್ರಿ ಕೋಟೇಶ್ವರ ಕೋಟಿಲಿಂಗೇಶ್ವರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: 🔴ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ಸಚಿವರಿಂದ ಸಭೆ

ಹಂಗಳೂರು ಪಂಚಾಯತ್ ಹಿಂದುಗಡೆ ನಿವಾಸಿ ನಾರಾಯಣ ಎಂಬುವರ ಮಗ ಗೌರೀಶ್ ಗಾಣಿಗ (28) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ.

ತುಂಬಾ ಸರಳ ವ್ಯಕ್ತಿತ್ವದ ಗೌರೀಶ್, ಎಂ.ಬಿ.ಬಿ.ಎಸ್. ಮುಗಿಸಿದ ಬಳಿಕ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ. ಬಳಿಕ ಉನ್ನತ ವ್ಯಾಸಂಗ ಎಂ.ಎಸ್. ಮಾಡಲು ಪರೀಕ್ಷೆ ಬರೆದಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಗೌರೀಶ್ ಖಿನ್ನನಾಗಿದ್ದ ಎನ್ನಲಾಗಿದೆ.

ಬುಧವಾರ ಸಂಜೆ ಮನೆಯಿಂದ ಹೋದಾತ ನಾಪತ್ತೆಯಾಗಿದ್ದ. ಬಳಿಕ ಸ್ಥಳೀಯರು ಹುಡುಕಾಟ ನಡೆಸಿದ್ದು, ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಾಗ ಗೌರೀಶ್ ಮೊಬೈಲ್ ಲೊಕೇಶನ್ ಕೋಟೇಶ್ವರ ಕೆರೆ ಬಳಿಯಲ್ಲಿ ತೋರಿಸುತ್ತಿತ್ತು ಎನ್ನಲಾಗಿದೆ.

ಮೊಬೈಲ್ ಫೋನ್ ಮತ್ತು ಚಪ್ಪಲಿಯನ್ನು ಕೆರೆ ಸಮೀಪ ಒಂದು ಮೂಲೆಯಲ್ಲಿ ಕವುಚಿ ಇಡಲಾಗಿತ್ತು ಎಂದು ಎಂದು ತಿಳಿದು ಬಂದಿದೆ. ತಡರಾತ್ರಿಯಾದ್ದರಿಂದ ಕೆರೆಯಲ್ಲಿ ಹುಡುಕಿರಲಿಲ್ಲ.

ಗುರುವಾರ ಬೆಳಿಗ್ಗೆ ಕೋಟೇಶ್ವರ ಕೆರೆಯಲ್ಲಿ ಹುಡುಕಾಡಿದಾಗ ಗೌರೀಶ್ ದೇಹ ಪತ್ತೆಯಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *