Wed. Nov 20th, 2024

Mangalore: ಮಂಗಳೂರು ಮಹಾ ನಗರ ಪಾಲಿಕೆಯ ನೂತನ ಮೇಯರ್‌ ಆಗಿ ಮನೋಜ್‌ ಕುಮಾರ್‌ ಹಾಗೂ ಉಪಮೇಯರ್‌ ಆಗಿ ಭಾನುಮತಿ ಆಯ್ಕೆ

ಮಂಗಳೂರು:(ಸೆ.19) ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್‌ ಆಗಿ ಮನೋಜ್‌ ಕುಮಾರ್‌ ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ; ⭕ರಾತ್ರಿ ಹಗಲೆನ್ನದೇ ಕೆಲಸ- ಯುವತಿ ಸಾವು

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಮೇಯರ್‌ ಹುದ್ದೆಗೆ ಬಿಜೆಪಿ ಸದಸ್ಯ ಮನೋಜ್‌ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಜಾತಿಯ ಯಾವುದೇ ಸದಸ್ಯರಿಲ್ಲದ ಕಾರಣ, ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ.

ಹೀಗಾಗಿ ಮನೋಜ್‌ ಕುಮಾರ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ರಮೇಶ್‌ ಘೋಷಿಸಿದ್ದಾರೆ.


ಉಪಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನ ಜೀನತ್‌ ಶಂಸುದ್ದೀನ್‌, ಬಿಜೆಪಿಯ ಭಾನುಮತಿ ಪಿ.ಎಸ್.‌ ಹಾಗೂ ವನಿತಾ ಪ್ರಸಾದ್‌ ನಾಮಪತ್ರ ಸಲ್ಲಿಸಿದ್ದರು. ವನಿತಾ ಪ್ರಸಾದ್‌ ನಾಮಪತ್ರ ಹಿಂಪಡೆದರು.

ಭಾನುಮತಿ ಪರವಾಗಿ ಬಿಜೆಪಿಯ 47 ಸದಸ್ಯರು ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ 14 ಮತಗಳು ಬಿದ್ದವು. ಅತಿ ಹೆಚ್ಚು ಮತ ಪಡೆದ ಭಾನುಮತಿ ಉಪಮೇಯರ್‌ ಆಗಿ ಆಯ್ಕೆಯಾದರು.

ಪಾಲಿಕೆಯಲ್ಲಿ 60 ಸದಸ್ಯರಿದ್ದು, ಅವರಲ್ಲಿ 44 ಬಿಜೆಪಿ ಹಾಗೂ 14 ಕಾಂಗ್ರೆಸ್‌ ಸದಸ್ಯರಿದ್ದು, ಇಬ್ಬರು ಎಸ್‌ಡಿಪಿಐ ಸದಸ್ಯರಿದ್ದಾರೆ. ಮತದಾನದ ಹಕ್ಕು ಹೊಂದಿದ್ದ ಸಂಸದ ಬ್ರಿಜೇಶ್‌ ಚೌಟ, ಶಾಸಕರುಗಳಾದ ವೇದವ್ಯಾಸ ಕಾಮತ್‌, ಡಾ. ವೈ. ಭರತ್‌ ಶೆಟ್ಟಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮತದಾನದ ಹಕ್ಕು ಹೊಂದಿದ್ದ ಎಂಎಲ್‌ಸಿ ಮಂಜುನಾಥ ಭಂಡಾರಿ, ಐವನ್‌ ಡಿʼಸೋಜ ಗೈರಾಗಿದ್ದರು. ಎಸ್‌ಡಿಪಿಐನ ಒಬ್ಬರು ಗೈರಾಗಿದ್ದು, ಒಬ್ಬರು ತಟಸ್ಥರಾಗಿದ್ದರು. ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *