Wed. Nov 20th, 2024

Ujire: ಶ್ರೀ ಧ.ಮಂ.ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಆತ್ಮಹತ್ಯಾ ತಡೆ ದಿನ

ಉಜಿರೆ:(ಸೆ.19) ಭಾರತ ದೇಶವೊಂದರಲ್ಲೇ ನಲವತ್ತು ಸೆಕೆಂಡಿಗೊಂದು ಆತ್ಮಹತ್ಯೆ ಆಗುತ್ತಿದೆ. ಸಾಮಾಜಿಕ , ವೈಯುಕ್ತಿಕ , ಮಾನಸಿಕ ಖಿನ್ನತೆ , ರೋಗಾದಿ ಶಾರೀರಿಕ ಸಮಸ್ಯೆ , ಹೆದರಿಕೆ , ಸಾಲ ಇತ್ಯಾದಿಗಳಿಂದ ಮನುಷ್ಯ ಅನೇಕ ಸಮಸ್ಯೆಗಳನ್ನು ಹೊಂದಿದ್ದರೆ ಆತನ ಮನಸ್ಸು ವಿಚಲಿತವಾಗುತ್ತದೆ.

ಇದನ್ನೂ ಓದಿ: ⭕ಹೃದಯಾಘಾತದಿಂದ 23 ವರ್ಷದ ಯುವತಿ ಮೃತ್ಯು

ಹಾಗೆಯೇ ಆತ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಹೀಗಾದಾಗ ಮನುಷ್ಯನಲ್ಲಿ ಸಹಜವಾಗಿ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ. ಆಗ ಅಂತಹವರಿಗೆ ಆಪ್ತ ಸಮಾಲೋಚನೆ ಹಾಗೂ ಕುಟುಂಬದಲ್ಲಿ ಆಪ್ತತೆ ಹೊಂದಿರುವ ವ್ಯಕ್ತಿಗಳ ಸಲಹೆ ಅಗತ್ಯ.

ಒಟ್ಟಾರೆ ಸೋಲನ್ನು ಸ್ವೀಕರಿಸುವ ಗುಣ ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ. ಹೆಚ್ ಇವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಆತ್ಮಹತ್ಯಾ ತಡೆ ದಿನದ ಅಂಗವಾಗಿ ನಡೆದ ಭವಿಷ್ಯ ಕಾದಿದೆ…. ಆತ್ಮಹತ್ಯೆ ಬೇಡ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿಶೇಷವಾಗಿ ವಿದ್ಯಾರ್ಥಿಗಳ ಖಿನ್ನತೆ ಹಾಗೂ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದರು.

ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಆತ್ಮಹತ್ಯಾ ಜಾಗೃತಿ ಉಂಟಾಗಬೇಕು ಎಂದು ಕರೆ ನೀಡಿದರು.

ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದು ಗೌರವಿಸಿದರು. ಘಟಕದ ನಾಯಕರಾದ ಆದಿತ್ಯ ಶರ್ಮಾ ಹಾಗೂ ಪ್ರಾಪ್ತಿ ಗೌಡ ಉಪಸ್ಥಿತರಿದ್ದರು.


ಶ್ರೇಯಾ ಸ್ವಾಗತಿಸಿ , ಮೌಲ್ಯ ಪರಿಚಯಿಸಿದರು. ಶ್ರಮ ನಿರೂಪಿಸಿ , ಸಂತೋಷ್ ವಂದಿಸಿದರು.

Leave a Reply

Your email address will not be published. Required fields are marked *