Fri. Apr 11th, 2025

Kanyadi: ಕನ್ಯಾಡಿ ಸರ್ಕಾರಿ ಶಾಲೆಗೆ 1.65 ಲಕ್ಷ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಹಸ್ತಾಂತರ

ಕನ್ಯಾಡಿ:(ಸೆ.20) ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಬೆಂಗಳೂರಿನ ಬಿಟ್ಸ್ & ಬೈಟ್ ಐಟಿ ಕಂಪನಿಯ ಶ್ರೀ ಪ್ರಕಾಶ್ ರಾವ್

ಇದನ್ನೂ ಓದಿ: ⭕ತಿರುಪತಿ ಭಕ್ತರಿಗೆ ದೊಡ್ಡ ಶಾಕ್

ಇವರು ನೀಡಿದ ಒಂದು ಲಕ್ಷ ಅರವತ್ತೈದು ಸಾವಿರ ರೂಪಾಯಿ ವೆಚ್ಚದ ಸ್ಮಾರ್ಟ್ ಕ್ಲಾಸ್ ಅನ್ನು ಶ್ರೀ ರಾಮಕ್ಷೇತ್ರ ದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಕನ್ಯಾಡಿಯ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಿ ಸ್ಮಾರ್ಟ್ ಕ್ಲಾಸ್ ನ

ಸದುಪಯೋಗವನ್ನು ಚೆನ್ನಾಗಿ ಪಡೆದು ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಪೂರಣ್ ವರ್ಮಾ, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ, ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ರಾವ್,

ಇದನ್ನೂ ಓದಿ: ⭕ದಾವಣಗೆರೆ : ನಾಗಮಂಗಲ ಬಳಿಕ ದಾವಣಗೆರೆಯಲ್ಲೂ ಕಲ್ಲುತೂರಾಟ

ಇಸ್ರೋ ಹಿರಿಯ ವಿಜ್ಞಾನಿ ವಾಸುದೇವ್ ರಾವ್ ಪಿ, ಅಗ್ರಿ ಲೀಫ್ ಸಂಸ್ಥೆಯ ನಿರ್ದೇಶಕರಾದ ಅವಿನಾಶ್ ರಾವ್, ಬ್ಯಾಂಕ್ ಆಫ್ ಬರೋಡ, ನೂಜಿಬಾಳ್ತಿಲ ಶಾಖಾ ವ್ಯವಸ್ಥಾಪಕರು, ಶಿವಪ್ರಸಾದ್ ಸುರ್ಯ,


ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಂದ ಭಟ್ ಕೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಾ .ಎನ್ ಹಾಗೂ ಶಾಲಾ ಅಧ್ಯಾಪಕ ವೃಂದ ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿಗಳು, ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು