Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯ ನಕ್ಷತ್ರ: ಭರಣೀ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ09:24 ರಿಂದ 10:55, ಯಮಘಂಡ ಕಾಲ ಮಧ್ಯಾಹ್ನ 01:56 ರಿಂದ 03:27ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:23 ರಿಂದ  07:53ರ ವರೆಗೆ.

ಮೇಷ ರಾಶಿ : ಇಂದು ನೀವು ಸಂಗಾತಿಯ ವಿಚಾರಕ್ಕೆ ಖರ್ಚು ಮಾಡಬೇಕಾಗುವುದು. ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ದಾಂಪತ್ಯದಲ್ಲಿ ಮಾತುಕತೆಗಳು ವಿವಾದವಾಗಿ ಬದಲಾಗಬಹುದು. ವಿದ್ಯುತ್ ಉಪಕರಣಗಳ ಉದ್ಯಮವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯಲಿದ್ದೀರಿ. ಕೊರತೆಗಳನ್ನು ಅತಿಯಾಗಿ ಆಲೋಚಿಸಿದರೆ ಇಂದಿನ ದಿನ ಕಷ್ಟವಾಗುವುದು.

ವೃಷಭ ರಾಶಿ : ನಿಮ್ಮ ಯಶಸ್ಸಿಗೆ ಯಾರಾದರೂ ಕಪ್ಪುಚುಕ್ಕೆ ಇಡಬಹುದು. ಇಂದು ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ತಯಾರಿ ಮಾಡುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲಿದ್ದೀರಿ. ಸಂಗಾತಿಯ ಜೊತೆ ವಿರಸವು ಇರಲಿದೆ. ಸಜ್ಜನರ ಸಹವಾಸವನ್ನು ಬಯಸುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುವಿರಿ.

ಮಿಥುನ ರಾಶಿ : ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗುವುದು. ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ಆರ್ಥಿಕದಿಂದ ನೀವು ಬಲವಾಗುವಿರಿ. ಸಹೋದರಿಯ ಜೊತೆ ಸಂತೋಷದಿಂದ ನೀವು ಮಾತನಾಡಿ ಸಂತೋಷಗೊಳಿಸುವಿರಿ. ಹಿತಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಆಕಸ್ಮಿಕ ಒತ್ತಡವನ್ನು ಸುಲಭವಾಗಿ ಸ್ವೀಕರಿಸಲಾರಿರಿ. ಸ್ಥಿರಾಸ್ತಿಯ ವಿಷಯದಲ್ಲಿರುವ ಗೊಂದಲು ನಿವಾರಣೆ ಆಗಬಹುದು.

ಕರ್ಕಾಟಕ ರಾಶಿ : ಯಾರಾದರೂ ಸರಿಯಾದ ಮಾರ್ಗವನ್ನು ತೋರಿಸಿದರೆ ಮಾತ್ರ ಮುನ್ನಡೆಯುವಿರಿ. ನೂತನ ಉದ್ಯೋಗವು ನಿಮಗೆ ಪ್ರಾಪ್ತವಾಗಲಿದೆ. ಅಧಿಕಾರಿಯ ಜೊತೆ ನಿಮ್ಮ ಮಾತುಕತೆಗಳು ಮಿತಿಮೀರಲಿದೆ. ದಿನಬಳಕೆಯ ವಸ್ತುವನ್ನು ಮಾರಾಟ ಮಾಡುವವರು ಲಾಭವನ್ನು ಗಳಿಸುವರು. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಅದನ್ನು ಕೈ ಬಿಡುವಿರಿ. ಅಧಿಕ ವೆಚ್ಚವನ್ನು ನೀವು ಮಾಡಲಿದ್ದೀರಿ.

ಸಿಂಹ ರಾಶಿ : ತಂದೆಯ ಕಾರಣದಿಂದ ನಿಮಗೆ ಗೌರವವು ಸಿಗುವುದು. ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉದ್ಯೋಗದ ಕಾರಣಕ್ಕೆ ನಿಮಗೆ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಬರಬೇಕಾದ ಹಣವನ್ನು ನೀವು ಪಡೆಯಲಿದ್ದೀರಿ. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಉದ್ಯೋಗಕ್ಕೆ ಸೇರಲು ಮಾನಸಿಕವಾಗಿ ನೀವು ಸಿದ್ಧರಾಗುವಿರಿ. ನಿಮ್ಮನ್ನು ವಿರೋಧಿಸುವವರ ಮುಂದೆ ಸಮಾನವಾಗಿ ನಿಲ್ಲಬೇಕು ಎಂಬ ಹಠ ಬರಬಹುದು.

ಕನ್ಯಾ ರಾಶಿ : ಇಂದು ಇನ್ನೊಬ್ಬರಿಗೆ ಬರುವ ಧನಕ್ಕೆ ಸಹಾಯ ಮಾಡುವಿರಿ. ನಿಮ್ಮ ಅಪರೂಪದ ವಸ್ತುವನ್ನು ಕಳೆದುಕೊಳ್ಳುವಿರಿ. ಹೊಸ ಸ್ಥಳಗಳನ್ನು ನೀವು ನೋಡಲು ನಿಮಗೆ ಇಷ್ಟವಾಗಲಿದೆ. ಸಮಯಪಾಲನೆಗೆ ನೀವು ಹೆಚ್ಚು ಒತ್ತನ್ನು ಕೊಡುವಿರಿ. ನೀರಿನಿಂದ ಇಂದು ಭಯವಾಗುವ ಸಾಧ್ಯತೆ ಇದೆ. ನೀವು ಸುಳ್ಳು ಹೇಳುತ್ತಿರುವುದನ್ನು ನಿಮ್ಮ ಮುಖ ಹೇಳುವುದು.

ತುಲಾ ರಾಶಿ : ಯಾರದೋ ಮಾತಿಗೆ ಅನದಯರನ್ನು ದೂಷಿಸುವ ಕೆಲಸದಲ್ಲಿ ತೊಡಗುವಿರಿ. ನೀವು ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ಮಾನಸಿಕವಾಗಿ ಬಳಲಲಿದ್ದೀರಿ. ದೈಹಿಕ ಸಾಮರ್ಥ್ಯದಿಂದ ಕುಗ್ಗಿರುವಿರಿ. ಜೀವನದಲ್ಲಿ ಬದಲಾವಣೆಯನ್ನು ಬಯಸುವಿರಿ. ಆಯ ತಪ್ಪದಂತೆ ನಡೆಯುವುದು ಅವಶ್ಯಕ. ನಿಮ್ಮ ಹೆಜ್ಜೆಯನ್ನೂ ಗಮನಿಸುವವರು ಇರುವರು. ಭೂಮಿಯ ವ್ಯವಹಾರದಲ್ಲಿ ಗೊಂದಲವಿರಲಿದೆ.

ವೃಶ್ಚಿಕ ರಾಶಿ : ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚ‌ನೆಗಳು ಬರಬಹುದು. ಚರಾಸ್ತಿಯನ್ನು ಕಳೆದುಕೊಳ್ಳುವಿರಿ. ನಿಮ್ಮ ನಿಗದಿತ ಸಮಯವು ವ್ಯತ್ಯಾಸವಾಗಿ ಕಾರ್ಯಕ್ರಮವೂ ಬದಲಾಗಲಿದೆ. ಉದ್ವಿಗ್ನತೆಗೆ ಎಡಮಾಡಿಕೊಡದೇ ಸಮಾಧಾನಚಿತ್ತದಿಂದ ಇರುವುದನ್ನು ಕಲಿಯಬೇಕಾದೀತು. ನೌಕರರ ವಿಷಯದಲ್ಲಿ ಸಿಟ್ಟಾಗುವ ಸಾಧ್ಯತೆ ಇದೆ. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ.‌ ಪ್ರಯತ್ನವನ್ನು ಮಾಡಿ, ಫಲವನ್ನು ಪಡೆಯುವಿರಿ.

ಧನು ರಾಶಿ : ಮಹಿಳೆಯರಿಗೆ ಕೊಡಬೇಕಾದ ಗೌರವವನ್ನು ಕೊಡುವಿರಿ. ಇಂದು ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿಮ್ಮ ಸ್ವಭಾವಗಳು ಇಷ್ಟವಾಗದು. ನಿಮ್ಮ‌ ಮಾತುಗಳನ್ನು ನಿರಾಸಕ್ತಿಯಿಂದ ಪಾಲಿಸುವರು. ನಿಮ್ಮ ಪ್ರಭಾವವನ್ನು ತೋರಿಸಲು ಹೋಗಿ ಅಪಮಾನಗೊಳ್ಳುವಿರಿ. ಸಂಬಂಧವನ್ನು ಮತ್ತಷ್ಟು ಆತ್ಮೀಯವಾಗಿಸಲು ಪ್ರಯತ್ನಿಸುವಿರಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ನಿರೀಕ್ಷೆ ಇರಲಿದೆ. ಯಾರನ್ನೂ ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾದ ಕಾರಣ ನಿಮಗೆ ಸಿಟ್ಟು ಬರಬಹುದು.

ಮಕರ ರಾಶಿ : ನೀವು ವಿಶ್ವಾಸ ಯೋಗ್ಯರ ಜೊತೆ ಹೆಚ್ಚು ಬೆರೆಯುವಿರಿ. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಯಾರಾದರೂ ನಿಮ್ಮ ಹಾದಿಯನ್ನು ತಪ್ಪಿಸಬಹುದು. ದೈವೀಕ್ಷೇತ್ರದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ವಿವಾಹದಲ್ಲಿ ಆಸಕ್ತಿಯು ಕಡಿಮೆಯಾಗಲಿದೆ. ಸ್ವತಂತ್ರವಾಗಿರಲು ಬಯಸುವಿರಿ. ಮನೆಯವರ ವರ್ತನೆಯು ನಿಮಗೆ ಹಿಡಿಸದೇಹೋದೀತು. ಸಂಪತ್ತು ಕ್ಷಣಿಕ ಎಂದೆನಿಸಬಹುದು.

ಕುಂಭ ರಾಶಿ : ಕಳೆದ ಕಷ್ಟದ ದಿನಗಳು ನಿಮಗೆ ಇಂದು ಖುಷಿ ಎನಿಸಬಹುದು. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ನಂಬಿಕೆಗೆ ದ್ರೋಹವಾಗಬಹುದು.‌ ಸಂಗಾತಿಯ ಮಾತುಗಳು ನಿಮಗೆ ಅಜೀರ್ಣವಾಗುವುದು. ಅಕಾರಣ ಪ್ರೀತಿಯನ್ನು ಒಪ್ಪಿಕೊಳ್ಳುವಿರಿ. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವಿರಿ. ನೀವು ಬಯಸಿದ ವಸ್ತುಗಳು ನಿಮ್ಮನ್ನು ಬಂದು ಸೇರಲಿದೆ.

ಮೀನ ರಾಶಿ : ನೀವು ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಬಹುದು. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ವಿನಾಕಾರಣ ಎಲ್ಲದಕ್ಕೂ ಎಲ್ಲರಮೇಲೂ ಸಿಟ್ಟಾಗುವಿರಿ. ಶಿಕ್ಷಣ ತಜ್ಞರ ಭೇಟಿಯಿಂದ ನಿಮ್ಮ ಓದು ಇನ್ನಷ್ಟು ಸುಗಮವಾಗುವುದು. ಮನೆಯವರ ಜೊತೆ ಕಾಲ ಕಳೆಯುವಿರಿ. ಕೂಡಿಟ್ಟ ಹಣದಿಂದ ಉಪಯುಕ್ತವಾದ ವಸ್ತುವನ್ನು ಖರೀದಿಸುವಿರಿ. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಪಡಿಸುವಿರಿ. ಗೆಳೆತನದ ವಿಚಾರದಲ್ಲಿ ಮಿತಿಯಿರಲಿದೆ.

Leave a Reply

Your email address will not be published. Required fields are marked *