ಬೆಳ್ತಂಗಡಿ:(ಸೆ.21) ಸವಣಾಲಿನಲ್ಲಿ ಚಿರತೆಯ ಕಾಟ ಹೆಚ್ಚಾಗಿತ್ತು. ಅಲ್ಲಿನ ಗ್ರಾಮಸ್ಥರು ಭಯದಿಂದಲೇ ಜೀವನ ಸಾಗಿಸುತ್ತಿದ್ದರು. ಒಂದು ಚಿರತೆಯನ್ನು ಸೆರೆ ಹಿಡಿದ ಬೆನ್ನಲ್ಲೇ ಮತ್ತೊಂದು ಚಿರತೆ ಊರಿಗೆ ಎಂಟ್ರಿ ಕೊಟ್ಟಿತ್ತು. ಈಗ ಮತ್ತೊಂದು ಚಿರತೆಯು ಬೋನಿಗೆ ಬಿದ್ದಿದೆ.
ಇದನ್ನೂ ಓದಿ: ⚖Aries to Pisces – ಇಂದು ಈ ರಾಶಿಯವರಿಗೆ ಹಿತಶತ್ರುಗಳಿಂದ ತೊಂದರೆ!!
ಏನಿದು ಘಟನೆ?:
ಸವಣಾಲು ಗ್ರಾಮದ ಗುರಿಕಂಡ ಆನಂದ ಶೆಟ್ಟಿ ಎಂಬವರ ಮನೆ ಬಳಿ ಇರಿಸಲಾಗಿದ್ದ ಬೋನಿನೊಳಗೆ ಮಧ್ಯರಾತ್ರಿ ಚಿರತೆ ಸೆರೆಯಾಗಿದೆ.
ಕಳೆದ ಕೆಲವು ತಿಂಗಳುಳಿಂದ ಗುರಿಕಂಡ ಪರಿಸರದಲ್ಲಿ ಚಿರತೆ ಹಾವಳಿ ಕಂಡು ಬಂದಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದ
ಮನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಚಿರತೆಯನ್ನು ಸೆರೆ ಹಿಡಿಯುವುದಕ್ಕಾಗಿ ಬೋನ್ ಅಳವಡಿಸಿದ್ದರು.
ಸುಮಾರು 3 ತಿಂಗಳ ನಂತರ ಸೆಪ್ಟೆಂಬರ್ 1 ರ ಮಧ್ಯರಾತ್ರಿ ಚಿರತೆ ಈ ಬೋನಿನೊಳಗೆ ಸೆರೆಯಾಗಿತ್ತು. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು.
ಅದರೆ ಒಂದೇ ವಾರದೊಳಗೆ ಮತ್ತೊಂದು ಚಿರತೆ ಈ ಪರಿಸರದಲ್ಲಿ ಸುತ್ತಾಡಿದ್ದಲ್ಲದೇ ಮನೆಯ ಕೋಳಿಯನ್ನು ಹಿಡಿದಿತ್ತು.
ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.
ಅದರಂತೆ ಮತ್ತೆ ಕಳೆದ ಒಂದು ವಾರಗಳ ಹಿಂದೆ ಬೋನ್ ಅಳವಡಿಸಲಾಗಿತ್ತು. ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಬೋನಿನೊಳಗೆ ಚಿರತೆ ಸೆರೆಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿದ್ದು, ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ.