ಬೆಳ್ತಂಗಡಿ :(ಸೆ.21) ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದ ಶೆಡ್‌ನೊಳಗೆ
ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ (ಉಲಾಯಿ-ಪಿದಾಯಿ)ಅಂದರ್-ಬಾಹರ್ ಎಂಬ ಅದೃಷ್ಟದಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ,
ಇದನ್ನೂ ಓದಿ; 🚌Mangaluru: ಫುಟ್ ಬೊರ್ಡ್‌ಗಳಲ್ಲಿ ನಿಂತು ಪ್ರಯಾಣ
ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್‌ಐ (ಕಾ&ಸು) ನಂದಕುಮಾರ್ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ವೇಳೆ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು.
ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸೆ.20-.2024 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.