Tue. Apr 8th, 2025

Bengaluru: ಶ್ರದ್ಧಾ ವಾಕರ್ ರೀತಿಯಲ್ಲೇ ಭಯಾನಕ ಕೊಲೆ – 30ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್​ನಲ್ಲಿಟ್ಟ ಆರೋಪಿ

ಬೆಂಗಳೂರು:(ಸೆ.21) ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ ಬೆಂಗಳೂರಿನಲ್ಲಿಯೂ ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನಗರದ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಆರೋಪಿಯು ಯುವತಿಯನ್ನು ಕೊಲೆಗೈದು 30 ಕ್ಕೂ ಹೆಚ್ಚು ಪೀಸ್ ಪೀಸ್‌ ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದಾನೆ.

ಮೇಲ್ನೋಟಕ್ಕೆ ಹೊರ ರಾಜ್ಯದ ಸುಮಾರು 25 ರಿಂದ 26 ವಯಸ್ಸಿನ ಯುವತಿ ಎಂದು ಗುರುತಿಸಲಾಗಿದ್ದು, ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ಹತ್ಯೆ ಮಾಡಲಾಗಿದೆ. ಸದ್ಯ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ, ಹಿನ್ನಲೆ ಅದೇ ಬಿಲ್ಡಿಂಗ್​ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರೆ.

ಅದರಂತೆ ಕೊಲೆಯಾದಂತಹ ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದು ಬೀಗ ಹೊಡೆದು ಒಳಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ‘ಓರ್ವನೇ ಕೊಲೆ ಮಾಡಿದ್ದು, 30ಕ್ಕೂ ಹೆಚ್ಚು ಪೀಸ್ ಮಾಡಿ ಸಿಂಗಲ್ ಡೋರ್​ನ 165 ಲೀಟರ್ಸ್ ಫ್ರೀಡ್ಜ್​ನಲ್ಲಿ ಬಾಡಿ ಇಡಲಾಗಿದೆ.

ಮೃತ ಯುವತಿಯನ್ನು ಛತ್ತೀಸ್​ಘಡ ಅಥವಾ ಪಶ್ಚಿಮ ಬಂಗಾಳ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೇರೆ ರಾಜ್ಯದವರು ಇಲ್ಲಿಯೇ ಸೆಟಲ್ ಆಗಿದ್ದವರು. ಗಂಡನ ಜೊತೆಗೆ ಬೇರೆಯಾಗಿದ್ದ ಮಹಿಳೆ, ಒಬ್ಬಳೇ ವಾಸವಾಗಿದ್ದಳು ಎಂದಿದ್ದಾರೆ.

Leave a Reply

Your email address will not be published. Required fields are marked *