Wed. Apr 16th, 2025

Online Class ನಡೆಯುವಾಗಲೇ ಲವ್ ಯೂ ಮ್ಯಾಮ್ ಎಂದ ಸ್ಟೂಡೆಂಟ್ – ಟೀಚರ್‌ ಕೊಟ್ಟ ಉತ್ತರವೇನು ಗೊತ್ತಾ?

Online Calss:(ಸೆ.21) ಆನ್ಲೈನ್ ಕ್ಲಾಸ್ ಮಾಡುವಾಗ ವಿದ್ಯಾರ್ಥಿಯೊಬ್ಬ ತರಗತಿ ನಡುವೆ ಟೀಚರ್‌ಗೆ ಪ್ರಪೋಸ್ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಯ ಪ್ರಪೋಸ್ ಗೆ ಟೀಚರ್ ನೀಡಿದ ಉತ್ತರ ಕಂಡು ನೆಟ್ಟಿಗರೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ⭕ದ.ಕ.ಜಿಲ್ಲೆಯಲ್ಲಿ ಕಾಲರಾ ರೋಗದ ಆತಂಕ

ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದ ನಡುವೆ ವಿದ್ಯಾರ್ಥಿ, ನೇರವಾಗಿ ಟೀಚರ್‌ಗೆ ಲವ್ ಯು ಮ್ಯಾಮ್ ಎಂದು ಪ್ರಪೋಸ್ ಮಾಡಿದ್ದಾನೆ. ಆದರೆ ಟೀಚರ್ ಶಾಂತವಾಗಿ, ಸಮಾಧಾನವಾಗಿ ಉತ್ತರ ನೀಡಿದ್ದಾರೆ. ಟೀಚರ್ ನೀಡಿದ ಉತ್ತರಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ವಿದ್ಯಾರ್ಥಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕ್ಲಾಸ್ ನಡುವೆ ವಿದ್ಯಾರ್ಥಿಯೊಬ್ಬ ಕೀಟಲೆ ಆರಂಭಿಸಿದ್ದಾನೆ. ಪ್ರಶ್ನೆ ಇರುವುದಾಗಿ ನಟಿಸಿದ್ದಾನೆ. ಪಠ್ಯದ ನಡುವೆ ಟೀಚರ್, ಸರಿ ಏನು ಪ್ರಶ್ನೆ ಎಂದು ಕೇಳಿದ್ದಾರೆ. ಆಗ ವಿದ್ಯಾರ್ಥಿ ನಿಮಗೆ ಮದುವೆಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಕೇಳಿದಾಗ ಸಿಟ್ಟು ಮಾಡಿಕೊಳ್ಳದ ಟೀಚರ್ ಅಷ್ಟೆ ವಿನಯವಾಗಿ, ಮದುವೆಯಾಗಿಲ್ಲ ಎಂದು ಉತ್ತರಿಸಿದ್ದಾರೆ. ಆಗ ಖುಷಿಯಾದ ವಿದ್ಯಾರ್ಥಿ ಹಾಗಾದರೆ ಲವ್ ಯೂ ಮ್ಯಾಮ್ ಎಂದು ಆನ್‌ಕ್ಲಾಸ್ ನಡುವೆ ಪ್ರಪೋಸ್ ಮಾಡಿದ್ದಾನೆ.

ಇದಕ್ಕೆ ಟೀಚರ್ ಶಾಂತವಾಗಿ ‘ಪ್ರಿಯ ವಿದ್ಯಾರ್ಥಿ, ನಾನು ಎಲ್ಲರನ್ನೂ ಪ್ರೀತಿಸುತ್ತೇನೆ, ಎಲ್ಲಾ ವಿದ್ಯಾರ್ಥಿಗಳ ಮೇಲೆ ನನಗೆ ಪ್ರೀತಿ ಇದೆ ಎಂದಿದ್ದಾರೆ. ಆದರೆ ಈ ವಿದ್ಯಾರ್ಥಿ ಮತ್ತೆ, ನನ್ನನ್ನು ಮದುವೆಯಾಗುತ್ತೀರಾ? ಪ್ಲೀಸ್ ಮೇಡಮ್ ಎಂದೆಲ್ಲಾ ಬೇಡಿಕೊಂಡಿದ್ದಾನೆ.

ಆದರೆ ಎಲ್ಲೂ ಕೂಡ ಟೀಚರ್ ತಾಳ್ಮೆ ಕಳೆದುಕೊಂಡಿಲ್ಲ, ವಿದ್ಯಾರ್ಥಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಇಲ್ಲಿಗೆ ಕೊನೆಗೊಳ್ಳುತ್ತಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ, ವಿದ್ಯಾರ್ಥಿ ನಡೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ.

Leave a Reply

Your email address will not be published. Required fields are marked *