Video viral: (ಸೆ.21) ರಕ್ತದಾನ ಹಾಗೂ ನೇತ್ರದಾನ ಈಗ ದೊಡ್ಡ ಮಟ್ಟದ ಶ್ರೇಷ್ಠತೆಯನ್ನು ಪಡೆದಿವೆ. ಹುಟ್ಟು ಹಬ್ಬದಂದು ಅಥವಾ ನಮ್ಮ ನೆಚ್ಚಿನವರ ಹುಟ್ಟುಹಬ್ಬದಂದು ನಾವು ರಕ್ತದಾನ ಮಾಡಿ ಅದನ್ನು ಫೋಟೋ ಶೇರ್ ಮಾಡುವ ಮೂಲಕ ಅನೇಕರಿಗೆ ಸ್ಪೂರ್ತಿಯಾದೆವು ಅನ್ನೋ ಖುಷಿ ನಮ್ಮದಾಗಿರುತ್ತದೆ.
ಇದನ್ನೂ ಓದಿ: 🟠ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ
ಆದ್ರೆ ಈ ದಾನವೂ ಕೂಡ ಕೇವಲ ಪ್ರಮೋಷನ್‌ಗೆ, ಫೋಟೋಶೂಟ್‌ಗೆ ಸೀಮಿತವಾದ್ರೆ ನಾವು ಜನರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತೇವೆ. ಹೀಗೆಯೇ ನಗೆಪಾಟಲಿಗೆ ಈಡಾಗಿದ್ದಾರೆ ಬಿಜೆಪಿಯ ಮೇಯರ್ ವಿನೋದ್ ಅಗರ್ವಾಲ್.
ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಜನ್ಮದಿನ ಸೆ.17ರಂದು ನಡೆದ ಘಟನೆ.
ಮೋದಿ ಹುಟ್ಟುಹಬ್ಬದಂದು ಉತ್ತರ ಪ್ರದೇಶದ ಮೊರಾದಾಬಾದ್ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲಿಗೆ ರಕ್ತದಾನ ಮಾಡಲು ಬಂದ ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್, ರಕ್ತ ನೀಡಲು ಬೆಡ್ ಮೇಲೆ ಮಲಗಿದ್ದಾರೆ. ಆದರೆ ವೈದ್ಯರು ರಕ್ತ ತೆಗೆದುಕೊಳ್ಳಲು ಬಂದಾಗ ದಿಢೀರ್ ಅಂತ ನಗುತ್ತಾ ಎದ್ದು ಕೂತಿದ್ದಾರೆ.
ಮೋದಿ ಹುಟ್ಟುಹಬ್ಬದಂದು ಉತ್ತರ ಪ್ರದೇಶದ ಮೊರಾದಾಬಾದ್ ಬಿಜೆಪಿ ಕಚೇರಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲಿಗೆ ರಕ್ತದಾನ ಮಾಡಲು ಬಂದ ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್, ರಕ್ತ ನೀಡಲು ಬೆಡ್ ಮೇಲೆ ಮಲಗಿದ್ದಾರೆ. ಆದರೆ ವೈದ್ಯರು ರಕ್ತ ತೆಗೆದುಕೊಳ್ಳಲು ಬಂದಾಗ ದಿಢೀರ್ ಅಂತ ನಗುತ್ತಾ ಎದ್ದು ಕೂತಿದ್ದಾರೆ.
ಮೇಯರ್ ವರ್ತನೆಗೆ ಒಂದು ಕ್ಷಣ ಆರೋಗ್ಯ ಸಿಬ್ಬಂದಿಯೇ ಗಲಿಬಿಲಿಗೊಳಗಾಗಿದ್ದಾರೆ. ರಕ್ತದಾನ ಮಾಡಲು ಬಿಜೆಪಿಗೆ ಕಚೇರಿ ಬಂದ ಮೇಯರ್ ರಕ್ತದಾನ ಮಾಡುವ ಮುನ್ನ ಬೆಡ್ ಮೇಲೆ ಮಲಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬಳಿಕ ವೈದ್ಯರು ಅಗರ್ವಾಲ್ ಅವರ ಬಿಪಿ ಪರೀಕ್ಷಿಸಿದ್ದಾರೆ. ಬಳಿಕ ರಕ್ತದಾನ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ತಕ್ಷಣ ಎದ್ದು ಕೂತ ಮೇಯರ್ ‘ಡಾಕ್ಟರ್ ಸಾಹೇಬ್ರೇ ಬಿಡಿ. ನಾವು ರಕ್ತದಾನ ಮಾಡಲು ಬಂದಿಲ್ಲ. ಹೀಗೆ ಸುಮ್ಮನೆ ಬಂದಿದ್ದು’ ಅಂತ ಎದ್ದು ಕೂತಿದ್ದಾರೆ.
ಮೊರಾದಾಬಾದ್ ಮೇಯರ್ ವಿನೋದ್ ಅಗರ್ವಾಲ್‌ರ ಈ ನಟನೆಯ ವೀಡಿಯೋ ವೈರಲ್ ಆಗುತ್ತಿದೆ. ವೀಡಿಯೋ ವೈರಲ್ ಬಳಿಕ ಸ್ಪಷ್ಟನೆ ನೀಡಿರುವ ಮೇಯರ್ ವಿನೋದ್, ‘ನಾನು ಮಧುಮೇಹಿ ರೋಗಿ, ಹೃದ್ರೋಗಿ ಕೂಡ. ಹಾಗಾಗಿ ರಕ್ತದಾನ ಮಾಡಲು ಸಾಧ್ಯವಿಲ್ಲ.’ ಅಂತ ಸ್ಪಷ್ಟನೆ ನೀಡಿದ್ದಾರೆ.
ಮೇಯರ್ ವಿನೋದ್ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ಬಗೆಬಗೆಯ ಕಮೆಂಟ್ ಮಾಡಿದ್ದಾರೆ. ನಿಮ್ಮನ್ನು ಮೋದಿ ಕ್ಷಮಿಸಿದ್ರು ನಾವು ಕ್ಷಮಿಸಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.