Wed. Apr 16th, 2025

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯ ನಕ್ಷತ್ರ: ರೋಹಿಣೀ, ಯೋಗ: ಸಿದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:53 ರಿಂದ 09:24, ಯಮಘಂಡ ಕಾಲ ಬೆಳಿಗ್ಗೆ 10:54ರಿಂದ 12:25ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:26ರ ವರೆಗೆ.

ಮೇಷ ರಾಶಿ : ಯಾರ ಮೇಲೂ ಸ್ವಾಮಿತ್ವವನ್ನು ಸ್ಥಾಪಿಸಲು ಹೋಗಬಹುದು. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ಆಸ್ತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಸರ್ಕಾರಿಯ ಕೆಲಸದ ವಿಳಂಬದಿಂದ ನಿಮಗೆ ಬೇಸರವಾಗಲಿದೆ. ರಾಜಕಾರಣಿಗಳ ಕಾರ್ಯಕ್ಕೆ ಪ್ರಶಂಸೆಯು ಸಿಗಲಿದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸುಲಭ. ಅದರ ನಿರ್ವಹಣೆ ಕಷ್ಟ.

ವೃಷಭ ರಾಶಿ : ನಿಮಗೆ ಇಂದು ಯಾವ ಭರವಸೆಯೂ ವಿಶ್ವಾಸಾರ್ಹವಾಗದು. ದೃಷ್ಟಿದೋಷದಿಂದ ನೀವು ಪೀಡಿತರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಳೆದುಕೊಂಡು ಕಳವಳಗೊಳ್ಳುವಿರಿ. ಸಹೋದ್ಯೋಗಿಗಳಿಂದ ನಿಮಗೆ ಧೈರ್ಯ ಬರುವುದು. ಆಸ್ತಿಯ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಇದೆ.

ಮಿಥುನ ರಾಶಿ : ಇಂದು ನಿಮ್ಮ ಜವಾಬ್ದಾರಿ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು. ನಿಮ್ಮ ಆಸ್ತಿಯ ಮೇಲೆ ಬೇರೆಯವರ ಕಣ್ಣು ಬೀಳಲಿದೆ. ಕೆಲವರು ನಿಮ್ಮಿಂದ ಉಪಕಾರವನ್ನು ಪಡೆದುಕೊಳ್ಳುವವರಿದ್ದಾರೆ. ಅನಂತರ ನಿರ್ಲಕ್ಷ್ಯಿಸಬಹುದು. ಸಂಗಾತಿಯನ್ನು ಹಲವು ದಿನಗಳ ಅನಂತರ ಭೇಟಿಯಾಗುವಿರಿ.

ಕರ್ಕಾಟಕ ರಾಶಿ : ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಅನ್ನಿಸುವುದು. ಹಣಕಾಸಿನ ಸಹಾಯವನ್ನು ಮಿತ್ರರಿಂದ ಪಡೆಯುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಆತಂಕವಾಗಲಿದೆ.

ಸಿಂಹ ರಾಶಿ : ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಇಂದು ನಿಮ್ಮ ಕಲ್ಪನೆಯೇ ಸುಳ್ಳಾಗಬಹುದು. ಕುಟುಂಬದ ಕೆಲಸಕ್ಕೆ ಸಹಕಾರವನ್ನು ನೀಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಇರಲಿದೆ. ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವಿರಿ‌. ನಿಮ್ಮ ಗೆಲುವಿಗೆ ಬೀಗದೇ ಸಮಾಧಾನ ಚಿತ್ತದಿಂದ ಆಸ್ವಾದಿಸಿ.

ಕನ್ಯಾ ರಾಶಿ : ವೃತ್ತಿಯಲ್ಲಿ ಒತ್ತಡ ಇಲ್ಲದೇ ಇಂದು ನಿಶ್ಚಿಂತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಬಂಧುಗಳು ಆಡುವರು. ತೆಗೆದುಕೊಂಡ ಸಾಲದ ಬಗ್ಗೆ ನಿಮಗೆ ಲೆಕ್ಕಾಚಾರವಿರಲಿ. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ಹಿತವಚನಗಳನ್ನು ಅನುಭವಿಗಳು ಹೇಳುವರು.

ತುಲಾ ರಾಶಿ : ಉತ್ತಮ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಳ್ಳುವುದು ಕಷ್ಟ. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮಿತ್ರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಆಕಸ್ಮಿಕ ಧನಲಾಭವು ನಿಮಗೆ ನೆಮ್ಮದಿಯನ್ನು ತರಬಹುದು. ಉದ್ಯೋಗದಲ್ಲಿ ಅವಘಡವು ಸಂಭವಿಸಬಹುದು. ಯಾವುದಾದರೂ ಕಾರಣವನ್ನು ಹೇಳಿ ನಿಮಗೆ ಬಂದ ಕೆಲಸದಿಂದ ಜಾರಿಕೊಳ್ಳುವಿರಿ.

ವೃಶ್ಚಿಕ ರಾಶಿ : ನೀವು ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ದುರ್ಬಲ್ಯವನ್ನು ಬಳಸಿಕೊಂಡು ಆಡಿಕೊಳ್ಳಬಹುದು. ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ. ನಿಮ್ಮೊಳಗಾದ ಬದಲಾವಣೆಯು ನಿಮಗೆ ಆಶ್ಚಯರ್ಯವನ್ನು ಕೊಟ್ಟೀತು.‌ ಸಹನೆಯನ್ನು ನೀವು ಬೆಳೆಸಿಕೊಳ್ಳಬೇಕಾಗಿದೆ.

ಧನು ರಾಶಿ : ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಇಂದು ತುರ್ತು ಕಾರ್ಯಗಳು ಹೆಚ್ಚಾಗಬಹುದು. ನೀವು ಸ್ವಾರ್ಥಿಗಳಂತೆ ತೋರುವಿರಿ. ಎಲ್ಲವನ್ನೂ ನಿಮಗೆ ಬೇಕೆನ್ನುವ ಬಯಕೆ ಇರಲಿದೆ. ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ.

ಮಕರ ರಾಶಿ : ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ವಿವಾದಕ್ಕೆ ಅವಕಾಶ ಕೊಡದೇ ನಿರ್ವಹಿಸಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಲು ಹೋಗುವಿರಿ. ಯೋಜಿತ ಕಾರ್ಯವನ್ನು ಕಾರ್ಯಗತ ಮಾಡಿ ಸಂತೋಷಗೊಳ್ಳುವಿರಿ.

ಕುಂಭ ರಾಶಿ : ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ನಿಮಗೆ ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಮಾನಸಿಕ ಒತ್ತಡವು ಕಡಿಮೆ ಇದ್ದರೂ ನೆಮ್ಮದಿಯ ಕೊರತೆ ಕಾಣಿಸಿಕೊಳ್ಳಲಿದೆ.

ಮೀನ ರಾಶಿ : ಹೊರಗಿನ ಆಹಾರವು ನಿಮ್ಮ ಮೇಲೆ ಇಂದು ದುಷ್ಪರಿಣಾಮ ಬೀರಿ, ಅದನ್ನು ತ್ಯಜಿಸುವಿರಿ. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಔದ್ಯೋಗಿಕ ವಲಯದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗದು. ಆದರೂ ಪ್ರಯತ್ನವಂತೂ ನಿರಂತರವಾಗಿ ಇರುವುದು. ದುರ್ಬಲರಿಗೆ ಸಹಾಯವನ್ನು ಮಾಡಿ.

Leave a Reply

Your email address will not be published. Required fields are marked *