Thu. Dec 26th, 2024

Belthangady: ಗುರುವಾಯನಕೆರೆ ಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ :(ಸೆ.23) ಗುರುವಾಯನಕೆರೆ ಪೇಟೆಯ ‘ಶ್ರೇಷ್ಠ’ ಅಂಗಡಿಯಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದನ್ನು ಯಾರೋ ಕಳವು ಮಾಡಿದ ಘಟನೆ ಸೆಪ್ಟೆಂಬರ್ 20ರಂದು ನಡೆದಿದೆ.

ಇದನ್ನೂ ಓದಿ: 🔴ಮಂಗಳೂರು: ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕು ವೇಣೂರು ಕರಿಮಣೇಲು ಗ್ರಾಮದ ಸಂತೋಷ್ ಕುಮಾರ್ ಎಂಬವರು ತಮ್ಮ ಕೆಎ 19 ಹೆಚ್ ಎಮ್ 3013 ಸಂಖ್ಯೆಯ ದ್ವಿಚಕ್ರ ವಾಹನವನ್ನು ಕುವೆಟ್ಟು ಗ್ರಾಮದ ಗುರುವಾಯನಕೆರೆ ಪೇಟೆಯ

ಉಪ್ಪಿನಂಗಡಿ ರಸ್ತೆಯ ‘ಶ್ರೇಷ್ಠ’ ಅಂಗಡಿ ಬಳಿ ಸೆಪ್ಟಂಬರ್ 20-2024 ರಂದು ನಿಲ್ಲಿಸಿ ಹೋಗಿದ್ದು, ಮಧ್ಯಾಹ್ನ ಕಳವಾಗಿದೆ.


ಸಂತೋಷ್ ಕುಮಾರ್ ಅವರು ಗುರುವಾಯನಕೆರೆಯ ಉಪ್ಪಿನಂಗಡಿ ರಸ್ತೆಯಲ್ಲಿರುವ ಶ್ರೇಷ್ಠ ಪೀಠೋಪಕರಣ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದರು.

ಅವರು ಸಂಜೆ ಹಿಂತಿರುಗಿ ಬಂದು ನೋಡಿದಾಗ ನಿಲ್ಲಿಸಿ ಹೋಗಿದ್ದ ಸ್ಥಳದಲ್ಲಿ ತಮ್ಮ ಮೋಟಾರ್ ಸೈಕಲ್ ಇರಲಿಲ್ಲ. ಕಳವಾದ ವಾಹನದ ಅಂದಾಜು ಮೌಲ್ಯ ರೂ 68,000/ ಎಂದು ಅಂದಾಜಿಸಲಾಗಿದೆ.


ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ: 81/2024 ಕಲಂ: 303(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *