ಮಡಂತ್ಯಾರು :(ಸೆ.23) ದಕ್ಷಿಣ ಕನ್ನಡ ಜಿಲ್ಲೆಯ ಜನರ ಮನೆ ಮಾತಾಗಿರುವ ಭದ್ರಾ ಹೋಮ್ ಅಪ್ಲಾಯನ್ಸಸ್ ಮಳಿಗೆ ಮಡಂತ್ಯಾರಿನಲ್ಲಿ ಸೋಮವಾರ ಶುಭಾರಂಭಗೊಂಡಿದೆ.
ಮಡಂತ್ಯಾರಿನ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೂತನ ಪರಿಶ್ರಮ ಕಟ್ಟಡದಲ್ಲಿ ಭದ್ರಾ ಹೋಮ್ ಅಪ್ಲಾಯನ್ಸಸ್ ತನ್ನ ನೂತನ ಮಳಿಗೆಯನ್ನು ತೆರಿದಿದೆ.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರು, ಭದ್ರಾ ಹೋಮ್ ಅಪ್ಲಾಯನ್ಸಸ್ ನೂತನ ಮಳಿಗೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಭದ್ರಾ ಹೋಮ್ ಅಪ್ಲಾಯನ್ಸಸ್ ನ ಮಾಲೀಕ ಮಂಜುನಾಥ್ ಆಚಾರ್ಯ, ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರಿಗೆ ತನ್ನ ನೂತನ ಮಳಿಗೆಯ ವಸ್ತುಗಳನ್ನು ತೋರಿಸಿದರು. ಇವರಿಗೆ ಕುಶಾಲಪ್ಪ ಗೌಡ, ಮಡಂತ್ಯಾರಿನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅರವಿಂದ್ ಜೈನ್ ಸಾಥ್ ನೀಡಿದರು.
ರಾಜೇಂದ್ರ ಕುಮಾರ್ ಭದ್ರಾದ ಅಂಗಡಿಯಲ್ಲಿದ್ದ ಸೋಫಾ ಮೇಲೆ ಕುಳಿತು ಕೆಲ ಹೊತ್ತು ಕುಳಿತುಕೊಂಡು ಅತ್ಯುತ್ತಮವಾಗಿದೆ ಎಂದು ಪ್ರಶಂಶಿಸಿದರು.
ಭದ್ರಾ ಹೋಮ್ ಅಪ್ಲಾಯನ್ಸಸ್ ವಿಶೇಷತೆ ಏನು..?
ಭದ್ರಾ ಹೋಮ್ ಅಪ್ಲಾಯನ್ಸಸ್ ನಲ್ಲಿ ಮನೆಗೆ ಬೇಕಾದ ಎಲ್ಲಾ ಉತ್ಪನ್ನಗಳು ದೊರೆಯುತ್ತದೆ. ಪಾತ್ರೆಗಳು, ಮಿಕ್ಸಿ, ಫ್ರಿಡ್ಜ್, ಎಸಿ. ಮನೆಗೆ ಬೇಕಾದ ಅತ್ಯುತ್ತಮ ಶೈಲಿಯ ಫರ್ನಿಚರ್ಸ್, ಟಿವಿಗಳು, ಕಚೇರಿಗೆ ಬೇಕಾದ ಚಯರ್, ಟೇಬಲ್ ಎಲ್ಲವೂ ದೊರಕುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಮಳಿಗೆಗಳನ್ನು ಹೊಂದಿದೆ. ಮಂಜುನಾಥ್ ಆಚಾರ್ಯ ಹೇಳಿದ್ದೇನು..? ” ನಾವು ಮೊದಲು ಭದ್ರಾ ಗ್ಯಾಸ್ ಏಜೆನ್ಸಿ ಆರಂಭಿಸಿದ್ದೆವು. ಆದಾದ ನಂತರ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಯನ್ನು ಬಿಸಿ ರೊಡ್ ನಲ್ಲಿ ಆರಂಭಿಸಿದೆವು.
ಇದು ನಮ್ಮ ಮೂರನೇ ಶೋ ರೂಂ ಆಗಿದೆ. ಮಡಂತ್ಯಾರಿನ ಜನರು ಬಿಸಿ ರೋಡ್ ಗೆ ಬಂದು ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದರು. ಹೀಗಾಗಿ ಅವರಿಗೆ ನೆರವಾಗುವ ದೃಷ್ಟಿಯಿಂದ ನಾವು ಮಡಂತ್ಯಾರಿನಲ್ಲಿ ನಮ್ಮ ಮಳಿಗೆಯನ್ನು ತೆರೆದಿದ್ದೇವೆ.
ಇದು ಗ್ರಾಹಕರಿಗೆ ಸಹಾಯವಾಗಲಿದೆ ಎಂದು ಭದ್ರಾ ಮಳಿಗೆಯ ಮಾಲೀಕ ಮಂಜುನಾಥ್ ಆಚಾರ್ಯ ಹೇಳಿದರು. ನಾವು ಎಲ್ಲ ಮಳಿಗೆಯವರಿಗಿಂತ ವಿಭಿನ್ನ ಯಾಕಂದ್ರೆ, ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ವಸ್ತುಗಳ ವರೆಗೆ ಎಲ್ಲಾ ಗೃಹೋಪಯೋಗಿ ವಸ್ತುಗಳು ನಮ್ಮಲ್ಲಿ ಇದೆ. ಗ್ರಾಹಕರಿಗೆ ಯಾವತ್ತೂ ನಾವು ನಿರಾಸೆ ಮಾಡೋದಿಲ್ಲ ಎಂದಿದ್ದಾರೆ.
ಮೇಘಾ ಆಚಾರ್ಯ ಹೇಳಿದ್ದೇನು..?
“ನಾವು ದೇವರ ಹೆಸರಿನಲ್ಲಿ ನಮ್ಮ ಮಳಿಗೆಗೆ ಇಟ್ಟಿದ್ದೇವೆ. ಎಲ್ಲ ಕಡೆಗಳಲ್ಲೂ ನಮ್ಮ ಮಳಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಯಾವುದೇ ಗ್ರಾಹಕರು ಬಂದ್ರು ನಿರಾಸರಾಗುವುದಿಲ್ಲ. ಯಾಕಂದ್ರೆ ಎಲ್ಲ ರೀತಿಯ ವಸ್ತುಗಳು ಇಲ್ಲಿ ದೊರಕುತ್ತದೆ ಎಂದು ಮಳಿಗೆ ಮಾಲಕಿ ಮೇಘಾ ಆಚಾರ್ಯ ಹೇಳಿದ್ದಾರೆ.