Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯ ನಕ್ಷತ್ರ: ಮೃಗಶಿರಾ, ಯೋಗ: ವ್ಯತಿಪಾತ್, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:56, ಯಮಘಂಡ ಕಾಲ ಬೆಳಿಗ್ಗೆ 09:24ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:24 ರಿಂದ 01:55 ರ ವರೆಗೆ.

ಮೇಷ ರಾಶಿ: ಮಕ್ಕಳಿಗೆ ಸಿಗುವ ಗೌರವದಿಂದ ನಿಮಗೆ ಹೆಮ್ಮೆ. ನೀವು ಪ್ರತಿಕೂಲಸ್ಥಿತಿಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ಕಾನೂನಿಗೆ ವಿರುದ್ಧವಾದ ವ್ಯವಹಾರವು ನಿಮಗೆ ತೊಡಕನ್ನು ಉಂಟುಮಾಡುವುದು. ಆಪ್ತರು ನಿಮ್ಮಿಂದ ದೂರವಾಗಲಿದ್ದು ಆ ವೇದನೆಯನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳು ಅಡ್ಡದಾರಿಯಲ್ಲಿ ಹೋಗುವ ಸಾಧ್ಯತೆ ಇದೆ. ಮಾರ್ಗದರ್ಶನದ ಅವಶ್ಯಕತೆ ಹೆಚ್ಚು ಇರಲಿದೆ.

ವೃಷಭ ರಾಶಿ: ಯಾವುದನ್ನಾದರೂ ಆಗಾಗ ಹೊಸತನ್ನಾಗಿಸಬೇಕು. ಸಂಸಾರದ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಅನಾರೋಗ್ಯದ ಕಾರಣದಿಂದ ನೀವು ಪ್ರಯಾಣವನ್ನು ಬದಲಾಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮಗೆ ಸಮಯ ಸಾಲದೆಂಬ ಆತಂಕವಿರುವುದು. ನಿಮ್ಮ ತಾಳ್ಮೆಯ ವರ್ತನೆಯಿಂದ ಸಂಕಟವನ್ನು ದೂರ ಮಾಡಿಕೊಳ್ಳುವಿರಿ.

ಮಿಥುನ ರಾಶಿ: ಅಕಾರಣವಾದ ಪ್ರೀತಿಯು ಅಕಾರಣವಾಗಿಯೇ ಮುಕ್ತಾಯವಾಗುವುದು. ಇಂದು ಹೆಚ್ಚು ಆದಾಯದ ಯೋಜನೆಗಳು ನಿಮ್ಮ ಪಾಲಿಗೆ ಸಿಗಲಿದೆ. ದುಂದುವೆಚ್ಚವನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮವರ ಪ್ರೀತಿಯು ನಿಮ್ಮ ಮೇಲೆ ಕಡಿಮೆ ಆದಂತೆ ಅನ್ನಿಸಬಹುದು. ಕೃಷಿಯಲ್ಲಿ ಲಾಭಗಳಿಸುವ ಯೋಜನೆಯನ್ನು ಕಂಡುಕೊಳ್ಳುವಿರಿ. ಸಂಗಾತಿಯಿಂದ ನೀವು ಹೆಚ್ಚಿನ ಆದಾಯವನ್ನು ನಿರೀಕ್ಷಿಸುವಿರಿ. ಸಹೋದರರ ನಡುವಿನ‌ ಬಾಂಧವ್ಯವು ಸಡಿಲಾಗಬಹುದು.‌ ಆಗಾಗ ಮಾತನಾಡುತ್ತ ಸಂಬಂಧವನ್ನು ಗಟ್ಟಿಮಾಡಿಕೊಳ್ಳಿ.

ಕರ್ಕಾಟಕ ರಾಶಿ: ಬೇಕೆಂದಾಗ ಬೇಕಾದ ವಸ್ತುವನ್ನು ಪಡೆಯುವ ಅನುಕೂಲವಿದ್ದರೂ ಅದನ್ನು ಬಳಸಿಕೊಳ್ಳಬೇಕೆ ಎನ್ನುವ ಬಗ್ಗೆ ವಿವೇಚನೆ ಇರಲಿ. ನಿಮ್ಮ ಹಳೆಯ ಸಂಬಂಧಗಳು ಪುನಃ ಹತ್ತಿರವಾಗಲು ಕಾರಣವಿರುವುದು. ಅನಾರೋಗ್ಯದ ಕಾರಣ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವಿರಿ. ಬಂಧುಗಳು ನಿಮ್ಮ ಬಗ್ಗೆ ಆಡಿಕೊಂಡಾರು.

ಸಿಂಹ ರಾಶಿ: ಆತ್ಮವಿಶ್ವಾಸವು ನಿಮ್ಮ ಹಲವು ಮುಖಗಳನ್ನು ತೋರಿಸುವುದು. ನಿಮ್ಮ ಮಾತಿನಿಂದ ಕೆಲವರು ಪ್ರಭಾವಿತರಾಗಬಹುದು. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಉದ್ಯೋಗದಲ್ಲಿ ಬಡ್ತಿಯು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ನೀವು ನೆಚ್ಚಿದವರ ಜೊತೆಗೆ ಇಂದು ಕೆಲವು ಸಮಯ ಇರುವಿರಿ. ಭಾಷೆಯಲ್ಲಿ ನಿಮಗೆ ತೊಂದರೆ ಕಾಣಿಸುವುದು. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ.

ಕನ್ಯಾ ರಾಶಿ: ನಿಮ್ಮ ಅನಗತ್ಯ ಮೊಂಡುತನ ನಿಮ್ಮನ್ನೇ ಕುರುಡುಮಾಡಬಹುದು. ಗೌರವಕ್ಕಾಗಿ ಕಾರ್ಯವನ್ನು ಮಾಡದೇ ಕರ್ತವ್ಯದ ದೃಷ್ಟಿಯಿಂದ ಮಾಡಿ. ಪ್ರಶಂಸೆಯು ಸಹಜವಾಗಿ ಸಿಗುವುದು. ಮಕ್ಕಳಿಗೆ ಆಸ್ತಿ ಮಾಡುವ ಯೋಚನೆ ಬರುವುದು. ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ‌ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ನಿಮ್ಮ ಚಿಂತನೆಗಳು ಬರಬಹುದು. ಕುಟುಂಬದಲ್ಲಿ ಆಗುವ ಕಲಹವನ್ನು ನೀವು ನಿಭಾಯಿಸಬೇಕಾದೀತು.

ತುಲಾ ರಾಶಿ: ನಿಮ್ಮ ಚರಾಸ್ತಿಯನ್ನು ಯಾರಾದರೂ ಬಳಸಿಯಾರು. ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಇಂದು ನೀವು ದೈಹಿಕವಾಗಿ ಬರುವ ನೋವನ್ನು ಸಹಿಸುವ ಶಕ್ತಿಯನ್ನು ತಂದುಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ಬರಬಹುದು.

ವೃಶ್ಚಿಕ ರಾಶಿ: ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಏಕಾಂತವು ನಿಮಗೆ ಇಂದು ಬಹಳ ಪ್ರಿಯವಾಗುವುದು. ‌ಆರ್ಥಿಕ ಅಭಿವೃದ್ಧಿಯಿಂದ ನಿಮಗೆ ಸಂತೋಷವಾಗುವುದು. ಆದಾಯವನ್ನು ಸರಿಯಾದಕಡೆಗೆ ವಿನಿಯೋಗ ಮಾಡುವಿರಿ. ದಾಂಪತ್ಯ ಜೀವನವನ್ನು ಆನಂದಿಸುವಿರಿ.

ಧನು ರಾಶಿ: ಯಾರನ್ನೂ ಕೇಳದೇ ಮಾಡಿದ ಕಾರ್ಯದಿಂದ ನಷ್ಟವನ್ನು ನೀವೊಬ್ಬರೇ ಅನುಭವಿಸುವಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನು‌ ಮಾಡಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಮನೋಬಲವನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ತಿಳಿಯುವುದು ಒಳ್ಳೆಯದು. ಸುಮ್ಮನೇ ಮಾತನಾಡುವುದು ವ್ಯರ್ಥ ಎಂದು ನಿಮಗೆ ಅನ್ನಿಸಬಹುದು.

ಮಕರ ರಾಶಿ: ಇಂದು ವ್ಯವಹಾರದಲ್ಲಿ ಸ್ಥೈರ್ಯವು ಬೇಕಾಗುವುದು. ನಿಮ್ಮ ಖರ್ಚು ಅಧಿಕವಾದರೂ ಒಳ್ಳೆಯ ಕಾರ್ಯಕ್ಕೆ ಆಗುತ್ತದೆ. ಹಣಕಾಸಿನ ವಿಚಾರಕ್ಕೆ ದಾಂಪತ್ಯದಲ್ಲಿ ಕಲಹವುಂಟಾಗಿ ಕೊನೆಗೆ ಮೌನದಲ್ಲಿ ಮುಕ್ತಾಯವಾಗಬಹುದು. ವ್ಯಾಪಾರದ ಲಾಭದಿಂದ ನಿಮ್ಮಲ್ಲಿ ಹೆಚ್ಚು ಉತ್ಸಾಹವಿರುವುದು. ಕುಟುಂದ ಜೊತೆ ಸಮಯವನ್ನು ಕೊಡುವುದು ಇಂದು ಕಷ್ಟವಾದೀತು. ನಿಮ್ಮ ಸಿಟ್ಟನ್ನು ಎಲ್ಲ ಕಡೆಗಳಲ್ಲಿ ತೋರಿಸುವುದು ಬೇಡ.

ಕುಂಭ ರಾಶಿ: ಜೊತೆಗಾರರನ್ನು ನೀವು ವಿರೋಧ ಮಾಡಿಕೊಳ್ಳದೇ ಇರಬೇಕು‌. ನಿಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇಂದು ಆಗದು. ಕರ್ತವ್ಯದಲ್ಲಿ ನಿರಾಸಕ್ತಿ ಬರಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ಹೆಚ್ಚಾಗಲಿದೆ. ಪ್ರವಾಸವನ್ನು ಹೆಚ್ಚು ಮಾಡುವ ಆಸಕ್ತಿಯನ್ನು ಹೊಂದಿರುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರಲಿದೆ.

ಮೀನ ರಾಶಿ: ಇಂದು ವಿದ್ಯಾಭ್ಯಾಸದಲ್ಲಿ ಬುದ್ಧಿಪೂರ್ವಕವಾಗಿ ಪ್ರಯತ್ನವನ್ನು ಮಾಡಬೇಕು. ನೀವು ಪ್ರಮುಖ ವ್ಯಕ್ತಿಯ ಇಂದು ಸಂಬಂಧವನ್ನು ಬೆಳೆಸುವಿರಿ. ಉಪಾಯದಿಂದ ನಿಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವಿರಿ. ಕೃಷಿಯಲ್ಲಿ ಆಸಕ್ತಿಯು ನಿಮಗೆ ಹೆಚ್ಚಾಗಲಿದೆ. ಇನ್ನೊಬ್ಬರ ಬಗ್ಗೆ ಸದ್ಭಾವನೆ ಇರಲಿ. ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಮಿತ್ರರು ನಿಮಗೆ ಏನಾದರೂ ತೊಂದರೆ ಕೊಡಬಹುದು.

Leave a Reply

Your email address will not be published. Required fields are marked *