Wed. Nov 20th, 2024

Puttur: ತಿರುಪತಿ ವಿವಾದ – ವಿಶ್ವ ಹಿಂದೂ ಪರಿಷತ್ ಖಂಡನೆ

ಪುತ್ತೂರು:(ಸೆ.24) ತಿರುಪತಿ ದೇವಸ್ಥಾನದ ಲಡ್ಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ⛔ಇಂದು ಮುಡಾ ಕೇಸ್‌ ತೀರ್ಪು ಪ್ರಕಟಿಸಲಿದೆ ಹೈಕೋರ್ಟ್

ಪುತ್ತೂರಿನಲ್ಲಿ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ತಿರುಪತಿ ದೇವಸ್ಥಾನ ಹಿಂದೂಗಳ ಒಂದು ಶ್ರದ್ಧಾ ಕೇಂದ್ರ.

ಇಲ್ಲಿ ಪ್ರಸಾದ ರೂಪದಲ್ಲಿ ಸಿಗುವಂತಹ ಲಡ್ಡು ಅತ್ಯಂತ ಮಹತ್ವಪೂರ್ಣವಾದದ್ದು. ಹೀಗಿರುವಾಗ ಪವಿತ್ರವಾದ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿದ್ದಂತಹ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಇದನ್ನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡಿಸುತ್ತದೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿರುವಂತಹ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಧೋರಣೆಯನ್ನು ಅವರು ಖಂಡಿಸಿದರು.

ಸದ್ಯ ತಿರುಪತಿಯ ಪ್ರಕರಣವನ್ನು ಬೆಳಕಿಗೆ ತಂದ ಈಗಿನ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ಲಾಘಿಸುತ್ತದೆ.

ಜೊತೆಗೆ ವಿಶೇಷ ತನಿಖೆ ಮಾಡಿ ಇದರ ಹಿಂದಿರುವ ಕಾಣದ ಕೈಗಳನ್ನು ಹಿಡಿದು ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.

Leave a Reply

Your email address will not be published. Required fields are marked *