Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯ ನಕ್ಷತ್ರ: ಆರ್ದ್ರಾ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ ಸಂಜೆ 01:54, ಯಮಘಂಡ ಕಾಲ 07:53ರಿಂದ 09:24ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:54 ರಿಂದ 10:54 ರ ವರೆಗೆ.

ಮೇಷ ರಾಶಿ : ಸಿಟ್ಟು ಮಾತ್ರ ತೋರಿಸಿದರೆ ನಿಮ್ಮ ಕೆಲಸವಾಗದು. ನಿಮ್ಮ ಹಲವು ದಿನಗಳ ಮನಸ್ಸಿನ ಗೊಂದಲವು ಪರಿಹಾರವಾಗುವುದು. ಇಂದು ನಿಮ್ಮ ಅನೇಕ‌ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ಬೇರೆ ಕಡೆಗೆ ಇರಲು ಬಯಸುವಿರಿ. ಆರ್ಥಿಕತೆಯ ಹಿನ್ನಡೆಯಿಂದಾಗಿ ಕಾರ್ಯಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯವನ್ನು ಬಯಸುವಿರಿ. ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ.

ವೃಷಭ ರಾಶಿ : ಯಾರದೋ ಒತ್ತಾಯಕ್ಕಾಗಿ ಮಾಡುವ ಕಾರ್ಯಗಳು ಹಾಳಾಗುವುದು. ಇಂದು ಮಹಿಳೆಯರ ಸಂಘವು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಸ್ತ್ರೀಯರಿಂದ ಸಹಾಯವು ನಿಮಗೆ ಸಿಗಲಿದೆ. ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನು ಕೊಡಲಾಗದು.

ಮಿಥುನ ರಾಶಿ : ಅಕಾರಣ ಸಂತೋಷದಿಂದ ನಿಮಗೆ ಉತ್ಸಾಹದಿಂದ ಇರುವಿರಿ. ಇಂದು ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವು ಕಡಿಮೆ ಸಿಗಲಿದೆ. ಯಾರದೋ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿರಿ. ಆರ್ಥಿಕ ನಷ್ಟದ ಹಾಗೂ ಸಮಯದ ನಷ್ಟವಾಗಿ ಬೇಸರಿಸುವಿರಿ.

ಕರ್ಕಾಟಕ ರಾಶಿ : ಇಂದು ನಿಮ್ಮ ಕಛೇರಿಯ ಕಾರ್ಯಗಳು ಬೇಗನೆ ಮುಕ್ತಾಯವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುವಿರಿ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ.ವಿದೇಶದ ಸ್ನೇಹಿತನ ಪರಿಚಯವಾಗುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಹೇಳಿ ಪಡೆದುಕೊಳ್ಳುವಿರಿ. ನಿಮ್ಮ ಗೆಳೆತನವು ಸಂಗಾತಿಗೆ ಅಸೂಯೆಯನ್ನು ಉಂಟುಮಾಡಬಹುದು.

ಸಿಂಹ ರಾಶಿ : ವಿದ್ಯಾರ್ಥಿಗಳ ಕನಸು ನನಸಾಗುವುದು. ಯಾರ ವ್ಯಕ್ತಿತ್ವವನ್ನೂ ನೋಡಿದ ಮಾತ್ರಕ್ಕೆ ಅಳೆಯುವಲ್ಲಿ ಸೋಲುವಿರಿ. ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸಹೋಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಬಂದ ಹಣವನ್ನು ಕಳೆದುಕೊಳ್ಳುವಿರಿ. ಭೂ ಕಲಹವು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ.

ಕನ್ಯಾ ರಾಶಿ : ನೀವು ನಿಮ್ಮ ಉದ್ಯೋಗದಲ್ಲಿ ಗಟ್ಟಿತನವನ್ನು ಉಳಿಸಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗಬಹುದು. ಸಕಾಲಕ್ಕೆ ನಿಮಗೆ ಹಣವು ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಅವಶ್ಯಕ.

ತುಲಾ ರಾಶಿ : ಅಧಿಕಾರದಲ್ಲಿ ಇದ್ದರೂ ಅದನ್ನು ನಿರ್ವಹಿಸುವ ಕ್ರಮವೂ ಗೊತ್ತಿರಬೇಕು. ಅತಿಥಿಗಳ ಆಗಮನದಿಂದ ನಿಮಗೆ ಕಷ್ಟವಾಗಬಹುದು. ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗುವಿರಿ.ನಿಮ್ಮ ಖಾಸಗಿತನವು ಹಿತಶತ್ರುಗಳಿಂದ ಬಯಲಾಗಬಹುದು. ಮನೆಯ ಕೆಲಸಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು. ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ.

ವೃಶ್ಚಿಕ ರಾಶಿ : ನಿಮ್ಮ ಪ್ರತಿಭೆಯ ಪರಿಚಯ ನಿಮಗೂ ಇತರರಿಗೂ ಆಗುವುದು. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು. ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಮಕ್ಕಳಿಂದ ನಿಮಗೆ ಶ್ರೇಯಸ್ಸು ಸಿಗುವುದು. ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು.

ಧನು ರಾಶಿ : ಬಂಧುಗಳ ಮನೆಗೆ ಇಂದು ತೆರಳುವಿರಿ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ದಾನದಲ್ಲಿ‌ ನೀವು ಬಹಳ ಹಿಂಗೈಯುಳ್ಳವರಾಗುವಿರಿ. ಇಂದು ನಿಮಗೆ ರುಚಿಸುವ ಸಂಗತಿಗಳನ್ನೇ ಮಾತನಾಡುತ್ತಾರೆ ಎಂದು ತಿಳಿಯುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ‌ ಮೌನವು ಮಾತಾಗಿ ಬಾರದು. ಸಂಗಾತಿಯನ್ನು ಪಡೆಯಲು ನೀವು ಬಹಳ ಶ್ರಮವಹಿಸುವಿರಿ.

ಮಕರ ರಾಶಿ : ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ನಿಮ್ಮವರೇ ಆದರೂ ನೀವು ನಂಬಿಕೆಯನ್ನು ಇಡಲಾರಿರಿ. ಹೊಸತನ್ನು ಕಲಿಯುವ ಹಂಬಲವು ಕಡಿಮೆಯಾಗಬಹುದು. ನಿಮ್ಮದೇ ರೀತಿಯ ಮಾರ್ಗದಲ್ಲಿ ನೀವು ಮುಂದುವರಿಯುವಿರಿ. ಯಾರ ಮಾತನ್ನೂ ಕೇಳುವ ತಾಳ್ಮೆ ಕಡಿಮೆ ಆಗಬಹುದು. ನಿಮ್ಮ ಹೇಳಿಕೆಯನ್ನು ಬದಲಾಯಿಸವುದು ಬೇಡ. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬರದಿರುವುದು ಬೇಸರವನ್ನು ತರಿಸುವುದು.

ಕುಂಭ ರಾಶಿ : ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮುಖಂಡರಾಗಿ ಪಕ್ಷಪಾತವನ್ನು ಮಾಡುವುದು ಯೋಗ್ಯವಾಗದು. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕು ಎಂದನಿಸಬಹುದು. ಮನೆಯಿಂದ ದೂರವಿರಲು ಇಷ್ಟಪಡುವಿರಿ. ಬರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ವೃತ್ತಿಯಲ್ಲಿ ಗಟ್ಟಿಯಾಗಿ ನಿಲ್ಲುವತನಕ ಸ್ವಲ್ಪ ಗೊಂದಲವು ಇರುವುದು.

ಮೀನ ರಾಶಿ : ಬೇಸರದಲ್ಲಿ ಇರುವ ನಿಮಗೆ ಮತ್ತೆ ಬೇಸರ ತರಿಸುವ ಕೆಲಸವನ್ನು ಮಾಡಿಸಬಹುದು. ಇಂದು ನಿಮ್ಮನ್ನು ಭೇಟಿ ಮಾಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ಅನಿವಾರ್ಯ ಕಾರಣದಿಂದ ನಿಮ್ಮ ಇಂದಿನ ಯೋಜನೆಯನ್ನು ಬದಲಿಸಬೇಕಾಗುವುದು. ಸಿಟ್ಟುಗೊಳ್ಳುವ ಸಂದರ್ಭದಲ್ಲಿ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವುದು ಬೇಡ. ಒಳ್ಳೆಯ ಕರ್ಮದಿಂದ ಪುಣ್ಯದ ಫಲವನ್ನು ಸಂಪಾದಿಸುವಿರಿ. ಸಂಗಾತಿಯನ್ನು ನೀವು ಬೇಸರಿಸಿ ಸಮಾಧಾನ ಮಾಡುವಿರಿ. ನಿದ್ರೆಯನ್ನು ಅಧಿಕವಾಗಿ ಮಾಡಲಿದ್ದೀರಿ.

Leave a Reply

Your email address will not be published. Required fields are marked *