Tue. Jan 13th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

Bengaluru: 5ನೇ ಕರ್ನಾಟಕ ರಾಜ್ಯ ಹಣಕಾಸು ಆಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದ ಸಭೆ

ಬೆಂಗಳೂರು:(ಸೆ.25) ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಡಾ. ನಾರಾಯಣಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದೊಂದಿಗೆ ಖನಿಜ ಭವನ ಹಣಕಾಸು ಆಯೋಗದ ಸಭಾಂಗಣದಲ್ಲಿ ಸಭೆ ನಡೆಯಿತು.

ಇದನ್ನೂ ಓದಿ: ⛔ಚಿಕ್ಕಮಗಳೂರು : 5 ವರ್ಷದ ಬಾಲಕಿ ಅನುಮಾನಾಸ್ಪದ ಸಾವಿಗೆ ಬಿಗ್ ಟ್ವಿಸ್ಟ್ !

ಈಗಾಗಲೇ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಗ್ರಾಮ ಪಂಚಾಯತಿ ನೌಕರರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಮತ್ತು ನಗರ ಪಂಚಾಯಿತಿ ನೌಕರರಂತೆ ವೇತನ ಶ್ರೇಣಿ ಸಿ ಮತ್ತು ಡಿ ದರ್ಜೆ ಸ್ಥಾನಮಾನವನ್ನು ನೀಡಬೇಕೆಂದು ಸರಕಾರದ ಮಟ್ಟದಲ್ಲಿ ಪ್ರಸ್ತಾಪ ಇರುವ ಕಾರಣ.

ಈ ಬಗ್ಗೆ ಅನುದಾನವನ್ನು ಮೀಸಲಿರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ. ಯಾವ ಯಾವ ಮೂಲಗಳಿಂದ ಅನುದಾನಗಳನ್ನು ನಿಗದಿಪಡಿಸುವುದು ಎಂಬ ಬಗ್ಗೆ ಶ್ರೇಯೋಭಿವೃದ್ಧಿ ಸಂಘದ ನಿಯೋಗದೊಂದಿಗೆ ಮಹತ್ವವಾದ ಚರ್ಚೆಯನ್ನು ನಡೆಸಿದರು. ಹಣಕಾಸಿನ ಮೂಲದ ಬಗ್ಗೆ ಶ್ರೇಯೋಭಿವೃದ್ಧಿ ಸಂಘಟನೆಯಿಂದ ವಿವರವನ್ನು ಪಡೆಯಲಾಯಿತು.

ಈ ಬಗ್ಗೆ ಸಂಘಟನೆಯಿಂದ ಪಂಚಾಯತ್ ರಾಜ್ ಇಲಾಖೆಯಲ್ಲಿ ವೇತನ ನಿಗದಿಪಡಿಸುವ ಬಗ್ಗೆ ಹಣದ ಮೂಲಗಳನ್ನು ವಿವರಿಸಿದರು. ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ನೌಕರರಿಗೆ ಉದ್ಯೋಗ ಭದ್ರತೆ ಹಾಗೂ ನೌಕರರ ಬದುಕನ್ನು ಬದಲಾವಣೆ ಮಾಡುವ ಬಗ್ಗೆ ರಾಜ್ಯ ಹಣಕಾಸು ಆಯೋಗ ಶಿಫಾರಸು ಮಾಡುವ ಮೂಲಕ ಕ್ರಮ ಕೈಗೊಂಡರೆ ಸಾಧ್ಯವಿದೆ ಎಂಬ ಮಾಹಿತಿಯ ವಿವರವನ್ನು ರಾಜ್ಯಾಧ್ಯಕ್ಷರಾದ ದೇವಿ ಪ್ರಸಾದ್ ಬೊಲ್ಮ ಇವರು ಹಣಕಾಸು ಆಯೋಗದ ಮುಂದೆ ವಿವರಿಸಿದರು.

ಈ ಬಗ್ಗೆ ಐದನೇ ಹಣಕಾಸು ಆಯೋಗದ ಅಧ್ಯಕ್ಷರಾದ ಶ್ರೀ ನಾರಾಯಣಸ್ವಾಮಿಯವರು ಪರಿಶೀಲಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ಹಾಗೂ ಸಿ ಮತ್ತು ಡಿ ದರ್ಜೆಯ ಸ್ಥಾನಮಾನವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರಕ್ಕೆ ಆಯೋಗದಿಂದ ನಿರ್ದೇಶನವನ್ನು ನೀಡಲಾಗುವುದು ಎಂದು ತಿಳಿಸಿದರು.

ಮಾಜಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಐದನೇ ಹಣಕಾಸು ಆಯೋಗದ ಸದಸ್ಯರಾದ ಐಎಎಸ್ ಅಧಿಕಾರಿ ಆರ್ ಎಸ್ ಪೋಂಡೆ ಕಡತವನ್ನು ಪರಿಶೀಲಿಸಿ ನೌಕರರು ನೀಡಿರುವ ನ್ಯಾಯಯುತ ಬೇಡಿಕೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆಯೋಗದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಂಚಾಯತ್ ರಾಜ್ ಮಾಜಿ ನಿರ್ದೇಶಕರಾದ ಶ್ರೀ ಯಾಲಕ್ಕಿಗೌಡ ಇವರಿಂದ ನೌಕರರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಮಾಜಿ ನಿರ್ದೇಶಕರು, ಹಾಗೂ ಸಲಹೆಗಾರರಾದ ಶ್ರೀ ಕೆಂಪೇಗೌಡ ರವರು ಮಾತನಾಡಿ ಗ್ರಾಮ ಪಂಚಾಯಿತಿ ನೌಕರರು ಹಲವಾರು ವರ್ಷಗಳಿಂದ ಬೇಡಿಕೆ ನೀಡಿದ್ದು.ಇವರ ಬೇಡಿಕೆ ನ್ಯಾಯಯುತವಾಗಿದ್ದು, ಇದಕ್ಕೆ ಪೂರಕವಾಗಿ ಇಲಾಖೆಯಿಂದ ಆದೇಶಗಳು ಕೂಡ ಆಗಿದ್ದು, ಆಯೋಗವಿದನ್ನು ಪರಿಶೀಲಿಸಿ ಮಂಡಿಸಬಹುದೆಂದು ಸಲಹೆ ನೀಡಿದರು.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದಿಂದ ರಾಜ್ಯಾಧ್ಯಕ್ಷರಾದ ಡಾ. ದೇವಿ ಪ್ರಸಾದ್ ಬೊಲ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಆರ್ ಕುಲಾಲ್, ಉತ್ತರ ಕನ್ನಡ ಜಿಲ್ಲೆ ಜಿಲ್ಲಾಧ್ಯಕ್ಷರಾದ ಶ್ರೀ ಗಂಗಾಧರ ನಾಯ್ಕ , ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಶಾಂತ ತೆಂಕನಿಡಿಯೂರು , ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್,

ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯಕುಮಾರ್ ಮಿಳ್ಳಿ, ಶ್ರೀ ಸತೀಶ್ ನಾರಾವಿ ಬೆಳ್ತಂಗಡಿ, ಶ್ರೀ ಸುರೇಶ ಅಳ್ಳಿ ಮೊರೆ ವಿಜಯಪುರ, ರಾಮಗೊಂಡ ನಡುವಿನಮನೆ ವಿಜಯಪುರ ಇಂಡಿ, ಶ್ರೀ ವೀರಪ್ಪ ಹಡಪದ ಧರ್ಮಸ್ಥಳ, ಶ್ರೀ ದಿನೇಶ್ ಮಾಗಡಿ, ಶ್ರೀ ಪ್ರಸನ್ನ ರಾಮನಗರ, ಶ್ರೀ ಪ್ರಸನ್ನಕುಮಾರ್ ಪಟ್ರಮೆ ದಕ್ಷಿಣ ಕನ್ನಡ, ಶ್ರೀ ಅರವಿಂದ ಕುಕ್ಕಿಹಳ್ಳಿ ಉಡುಪಿ, ಶ್ರೀ ಗುರು ಎಂ ನಾಯ್ಕ ಸಿದ್ದಾಪುರ, ಶ್ರೀ ಸಂತೋಷ್ ನಾಯ್ಕ ಕೋಲ್ ಶಿರಸಿ, ಶ್ರೀ ಚಂದ್ರಹಾಸ ನಾಯ್ಕ ಇಟಗಿ, ಶ್ರೀ ವಸಂತ್ ನಾಯ್ಕ ಕ್ಯಾದಗಿ, ಶ್ರೀ ಯೋಗೇಶ ನಾಯ್ಕ ಭಟ್ಕಳ, ಶ್ರೀ ವಿನಾಯಕ ಆಚಾರ್ಯ ಭಟ್ಕಳ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *