Wed. Nov 20th, 2024

Belthangady: ಇದಲ್ವೇ ಮಾನವೀಯತೆ ಅಂದ್ರೆ – ಹಣ , ದಾಖಲೆಗಳಿದ್ದ ಬ್ಯಾಗ್ ಹಿಂದಿರುಗಿಸಿದ ಗರ್ಡಾಡಿಯ ಯುವಕ – ಯುವಕನ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜರಿಂದ ಮೆಚ್ಚುಗೆ

ಬೆಳ್ತಂಗಡಿ :(ಸೆ.26) ಇತ್ತೀಚೆಗೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ನಯರಾ ಪೆಟ್ರೋಲ್ ಪಂಪ್ ಬಳಿ ಅದೇ ಊರಿನ ಮಹಿಳೆ ಪದ್ಮಾವತಿ ಎಂಬವರ

ಇದನ್ನೂ ಓದಿ ; 🟣ಉಜಿರೆ: ಶ್ರೀ ಧ.ಮಂ.ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

ಒಂದು ಲಕ್ಷ ರೂಪಾಯಿ ಹಣ ಹಾಗೂ ಅನೇಕ ಅಗತ್ಯ ದಾಖಲೆಗಳಿದ್ದ ಬ್ಯಾಗ್ ಬೆಳ್ತಂಗಡಿ ತಾಲೂಕು ಗರ್ಡಾಡಿ ಯುವಕ ವರುಣ್ ಎಂಬವರು ಸಿದ್ದಕ್ಕಟೆ ಬಳಿ ಪ್ರಯಾಣಿಸುವಾಗ ಸಿಕ್ಕಿರುವ ಬಗ್ಗೆ ವರದಿಯಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾಗಿ ಬ್ಯಾಗ್ ನಲ್ಲಿದ್ದ ದಾಖಲೆ ಪರಿಶೀಲಿಸಿ ತಕ್ಷಣವೇ ದೂರವಾಣಿ ಮೂಲಕ ಸಂಪರ್ಕ ಮಾಡಿ ಬ್ಯಾಗ್ ಕಳೆದುಕೊಂಡ ಮಹಿಳೆಗೆ ದಾಖಲೆ,ಹಣದ ಜೊತೆಗೆ ಬ್ಯಾಗ್ ಹಿಂತಿರುಗಿಸಿ ವರುಣ್ ರವರು ಮಾನವೀಯತೆ ಮೆರೆದಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಸಲುವಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಬೆಳ್ತಂಗಡಿ ಯುವಮೋರ್ಚಾದ ವತಿಯಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಾರ್ಯದಲ್ಲೂ ವರುಣ್ ನಿರತರಾಗಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂoಜ ರವರು ವರುಣ್ ಅವರ ಮಹಾನ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *