ಬೆಳ್ತಂಗಡಿ:(ಸೆ.26) ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಸೇವಾ ಸೌಲಭ್ಯಗಳನ್ನು ಒದಗಿಸಲು ಮತ್ತು ಮೊಬೈಲ್ ಆ್ಯಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನು ನಿಲ್ಲಿಸಲು
ಇದನ್ನೂ ಓದಿ: 👏🏻ಬೆಳ್ತಂಗಡಿ : ಇದಲ್ವೇ ಮಾನವೀಯತೆ ಅಂದ್ರೆ
ಅನಿರ್ದಿಷ್ಟ ಅವಧಿಗೆ ಕೆಲಸ ಸ್ಥಗಿತಗೊಳಿಸಿ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರವನ್ನು ನಡೆಸಿದರು. ‘ಏನೇ ಆಗಲಿ ಒಗ್ಗಟ್ಟಿರಲಿ’, ‘ಸಂಘಟನೆಯು ಚಿರಾಯುವಾಗಲಿ’ ಎಂಬ ಘೋಷಣೆಯೊಂದಿಗೆ ಮುಷ್ಕರ ನಡೆಸಿದರು.
ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಆವರಣದಲ್ಲಿ ಸೆ.26ರರಂದು ಕಪ್ಪು ಪಟ್ಟಿ ಧರಿಸಿದ ಗ್ರಾಮ ಆಡಳಿತಾಧಿಕಾರಿಗಳು ಧರಣಿ ಆರಂಭಿಸಿದ್ದಾರೆ. ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ, ಮುಂದೆ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಸತೀಶ್,
ಪರಮೇಶ್ವರ್, ವಿಜೇತ್ , ಪೃಥ್ವಿ, ಸಂತೋಷ್ ಕುಮಾರ್, ಆಶಾ, ಅಂಕಿತ್ ಜೈನ್ , ಉಷಾ ಕಿರಣ್, ಶ್ರುತಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.