Fri. Apr 18th, 2025

Mangaluru: ಪಾನಿಪುರಿ ತಿನ್ನುತ್ತಾ ಮೊಬೈಲ್‌ ಎಗರಿಸಿದ ಖತರ್ನಾಕ್‌ ಕಳ್ಳ – ಕಳ್ಳನ ಕೈಚಳಕ ಸಿಸಿಟಿವಿ ಯಲ್ಲಿ ಸೆರೆ

ಮಂಗಳೂರು:(ಸೆ.26) ಪಾನಿಪುರಿ ತಿನ್ನುತ್ತಾ ಕಾಲೇಜು ಯುವತಿಯ ಮೊಬೈಲ್‌ ಕಳ್ಳತನ ಮಾಡಿದ ಘಟನೆ ಮಂಗಳೂರು ಬಳಿ ನಡೆದಿದೆ.

ಇದನ್ನೂ ಓದಿ: ⛔Belthangady: ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ಸಂಜೆ ಹೊತ್ತಿಗೆ ಕಾಲೇಜು ವಿದ್ಯಾರ್ಥಿನಿಯರು ಸೇರೋದೆ ಪಾನಿಪುರಿ ತಿನ್ನಲು, ಪಾನಿಪುರಿ ತಿನ್ನುತ್ತಿದ್ದರೆ ಪಕ್ಕದಲ್ಲಿ ಏನು ನಡೆದರೂ ಗೊತ್ತಾಗುವುದಿಲ್ಲ, ಪಕ್ಕದಲ್ಲಿ ಹಾವು ಬಂದರೂ, ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಬಂದರೂ ತಿಳಿಯುವುದಿಲ್ಲ.

ಪಾನಿಪುರಿ ಅಂದ್ರೆ ಹೆಣ್ಣು ಮಕ್ಕಳಿಗಂತೂ ಪಂಚಪ್ರಾಣನೇ ಅಂತಾನೇ ಹೇಳ್ಬೋದು. ಆದ್ರೆ ಮಂಗಳೂರಿನ ಬೆಸೆಂಟ್‌ ಬಳಿ ಒಂದು ಘಟನೆ ನಡೆದಿದೆ.

ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಪಾನಿಪುರಿ ತಿನ್ನಲು ಸ್ಟಾಲ್‌ ಹತ್ತಿರ ಬಂದು ಕೂತಿದ್ದಾರೆ. ಅಲ್ಲೇ ಪಕ್ಕದಲ್ಲಿ ಮತ್ತೊಬ್ಬ ಪಾನಿಪುರಿ ತಿನ್ನುತ್ತಾ ಕುಳಿತಿದ್ದಾನೆ, ಆದರೆ ಆತ ಕಳ್ಳನೆಂದು ಆ ವಿದ್ಯಾರ್ಥಿನಿಯರಿಗೆ ತಿಳಿದಿರಲಿಲ್ಲ.

ಆ ವಿದ್ಯಾರ್ಥಿನಿಯರಲ್ಲಿ ಒಬ್ಬಳು ಅವನ ಹತ್ತಿರ ಬ್ಯಾಗ್‌ ಇಟ್ಟು, ಬ್ಯಾಗ್‌ ನ ಮೇಲೆ ಮೊಬೈಲ್‌ ಇಟ್ಟಿದ್ದಾಳೆ. ಇದನ್ನು ಗಮನಿಸಿದ ಕಳ್ಳ, ಅವನ ಚಮಕನ್ನು ಮುಂದುವರೆಸಿದ್ದಾನೆ.

ಪಕ್ಕದಲ್ಲೇ ಕುಳಿತು ಪಾನಿಪುರಿ ತಿನ್ನುವಂತೆ ನಟಿಸಿ ಮೆಲ್ಲನೆ ಮೊಬೈಲನ್ನು ಎಗರಿಸಿದ್ದಾನೆ. ಆದರೆ ಎಷ್ಟು ಹೊತ್ತಾದರೂ ಆಕೆಯ ಮೊಬೈಲ್‌ ಕಳ್ಳತನವಾಗಿದ್ದು ಆಕೆಗೆ ಗೊತ್ತೇ ಆಗಿರಲಿಲ್ಲ.

ಕಳ್ಳನ ಕೈ ಚಳಕ ದ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಮೊಬೈಲ್ ಕಳ್ಳತನ ಮಾಡುವ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *