ಬಂದಾರು:(ಸೆ.27) ಶಾಲಾ ಮಕ್ಕಳು, ಕೆಲಸಕ್ಕೆ ತೆರಳುವ ಪ್ರಯಾಣಿಕರಿಗೆ ಸರಿಯಾಗಿ ಕೆ ಎಸ್ ಆರ್ ಟಿ ಸಿ ಬಸ್ಸು ವ್ಯವಸ್ಥೆ ಇಲ್ಲದೆ ಬಂದಾರುವಿನಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: 🛑ಕೊಕ್ಕಡ : ಅಕ್ರಮ ಕಸಾಯಿಖಾನೆಗೆ ಪೋಲಿಸ್ ದಾಳಿ- ಆರೋಪಿಗಳು ಪರಾರಿ
ಬಂದಾರು ಪಂಚಾಯತ್ ಬಳಿಯಿಂದ ಬೆಳಗ್ಗೆ 7.00 ಗಂಟೆಗೆ ಬೈಪಾಡಿ – ಕೊಯ್ಯೂರು – ಬೆಳ್ತಂಗಡಿ ಗೆ ತೆರಳುವ ಬಸ್ ಒಂದು ದಿನ ಬರುತ್ತೆ ಒಂದು ದಿನ ಬರೋದಿಲ್ಲ, ಕೊಯ್ಯೂರು – ಪಿಜಕ್ಕಳ ಬಳಿ ಗೇರ್ ಸಮಸ್ಯೆ ಯಿಂದ ಬಾಕಿಯಾಗೋದು ಮಾಮೂಲು ಆಗಿದೆ.
ಸಂಜೆ 4.15 ಗಂಟೆಗೆ ಬೆಳ್ತಂಗಡಿಯಿಂದ , ಕೊಯ್ಯೂರು, ಬೈಪಾಡಿ ಮಾರ್ಗವಾಗಿ ಬಂದಾರು ಪಂಚಾಯತ್ ಬಳಿಗೆ ಬಂದು ತಿರುಗಿ ವಾಪಾಸ್ ಹೋಗುತ್ತದೆ.
ಆದ್ರೆ ಕೆಲವೊಂದು ದಿನ ಸಂಚಾರಕ್ಕೆ ಯೋಗ್ಯವಿಲ್ಲದ ಬಸ್ ಕಳುಹಿಸಿ ಶಾಲಾ ಮಕ್ಕಳನ್ನು ಬೈಪಾಡಿ ಬಳಿ ಹಾಗೂ ಬಂದಾರು ಮಿಲ್ಕ್ ಡೈರಿ ಇಳಿಸಿ ಹೋಗ್ತಾರೆ, ಕೇಳಿದ್ರೆ ಅಲ್ಲಿ ಹೋಗೋಕೆ ಆಗಲ್ಲ ಅಂತ ಉಡಾಫೆ ಉತ್ತರ ಕೊಡುತ್ತಾರೆ.
ಸಂಜೆ ಕಾಂತಾಜೆ ಕೊಯ್ಯೂರು ಬಳಿ ಬಸ್ ಮುಂದೆ ಚಲಿಸದೇ ಮಕ್ಕಳ ಹತ್ತಿರನೇ ದೂಡಿಸ್ತಾರೆ, ಎಷ್ಟು ದೂಡಿದ್ರು ಬಸ್ ಮುಂದೆ ಸಾಗಲ್ಲ ಕೊನೆಗೆ ಅಲ್ಲೇ ಜಕಂ ಆಗುತ್ತೆ, ಅದ್ರಲ್ಲೇ ಬಂದಿರುವ ಮಕ್ಕಳ ಕಥೆ ಅಯೋಮಯ.
ಇತ್ತೀಚಿಗೆ ಕೊಯ್ಯೂರು ಕಾಲೇಜು ಬಳಿ ಬಸ್ ನ ಗೇರ್ ಬೀಳೋದಿಲ್ಲ ಅಂತ ಹೇಳಿ ಬೈಪಾಡಿ ತನಕ ಬಸ್ ಬಂದು ಅಲ್ಲೇ ಮಕ್ಕಳನ್ನು ಇಳಿಸಿ ಹೋಗುತ್ತಾರೆ.
ಶಾಲಾ, ಕಾಲೇಜು, ವಿದ್ಯಾರ್ಥಿಗಳು, ಉದ್ಯೋಗ ಕ್ಕೆ ತೆರಳುವವರು, ಪ್ರಯಾಣಿಕರ ಸಮಸ್ಯೆಗೆ ಇತ್ಯರ್ಥ ಯಾವಾಗ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.