Wed. Nov 20th, 2024

Guruwayanakere: ವಿದ್ವತ್‌ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನ ಸಭೆ

ಗುರುವಾಯನಕೆರೆ: (ಸೆ.27) ವಿದ್ವತ್‌ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ದ.ಕ ಜಿಲ್ಲಾಪಂಚಾಯತ್‌ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ ಮಂಗಳೂರು, ಮತ್ತು ವಿದ್ವತ್‌ ಪದವಿ ಪೂರ್ವ ಕಾಲೇಜು ಶಕ್ತಿನಗರ ಗುರುವಾಯನಕೆರೆಯ ಸಹಯೋಗದೊಂದಿಗೆ ಪ್ರೌಢಶಾಲಾ ಮುಖ್ಯಶಿಕ್ಷಕರ ಸಮಾಲೋಚನ ಸಭೆ ದಿನಾಂಕ 26-09-2024 ನೇ ಗುರುವಾರ ಬೆಳಗ್ಗೆ 09:30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೆರವೇರಿತು.

ಇದನ್ನೂ ಓದಿ; 🔴ಬಂದಾರು : ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ


ಕಾರ್ಯಕ್ರಮದ ಉದ್ಘಾಟನೆಯನ್ನು ವಿದ್ವತ್‌ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರು ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು ವಹಿಸಿ ಉದ್ಘಾಟನಾ ಭಾಷಣದೊಂದಿಗೆ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ಶ್ರೀ ವೆಂಕಟೇಶ ಸುಬ್ರಾಯ ಪಟಗಾರ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆ ದ.ಕಜಿ.ಪಂ ಮಂಗಳೂರು ವಹಿಸಿ ಬೆಳ್ತಂಗಡಿ ಹಾಗೂ ಮೂಡುಬಿದ್ರಿ ವಲಯದ 113 ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಶೈಕ್ಷಣಿಕ ಸಾಲಿನ ಸವಾಲುಗಳ ಕುರಿತು ಹಾಗೂ ಉತ್ತಮ ಫಲಿತಾಂಶಗಳನ್ನು ನೀಡುವ ಕುರಿತು ತಿಳಿಸಿದರು.

ವೇದಿಕೆಯ ಗೌರವ ಉಪಸ್ಥಿತಿಯಲ್ಲಿ ಶ್ರೀಮತಿ ರಾಜಲಕ್ಷಿ ಉಪನಿರ್ದೇಶಕರು(ಅಭಿವೃದ್ಧಿ) ಡಯಾಟ್ ಇಲಾಖೆ ದ.ಕ.ಜಿ‌ ಪಂಚಾಯತ್‌ ಮಂಗಳೂರು, ಶ್ರೀಮತಿ ತಾರಕೇಸರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳ್ತಂಗಡಿ ತಾಲೂಕು, ಶ್ರೀ ವಿರೂಪಾಕ್ಷಪ್ಪ ಹೆಚ್. ಎಸ್‌ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡುಬಿದ್ರಿ, ಶ್ರೀ ಲಕ್ಷೀನಾರಾಯಣ ಜಿಲ್ಲಾ ಶಿಕ್ಷಣಾಧಿಕಾರಿಗಳು, ವೆಂಕಟೇಶ ತುಳುಪಳೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು, ಕಾಲೇಜಿನ ಕೋಶಾಧಿಕಾರಿ ಎಂ.ಕೆ ಕಾಶಿನಾಥ್, ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಯುತ ರಾಧಾಕೃಷ್ಣ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ನೆರವೇರಿಸಿದರು.


ಕಾರ್ಯಕ್ರಮದ ಪೂರ್ವಭಾವಿಯಾಗಿ 45 ನಿಮಿಷಗಳ ಉನ್ನತ ಶಿಕ್ಷಣಪಥ (Carier guidance )ಕಾರ್ಯಕ್ರಮವನ್ನು ವಿದ್ವತ್‌ ಕಾಲೇಜಿನ ಶೈಕ್ಷಣಿಕ ನಿರ್ದೇಶಕರು ಗಂಗಾಧರ ಇ ಮಂಡಗಳಲೆ ನಡೆಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರು ಅರುಣ್‌ ಕ್ಯಾಸ್ಟಲಿನೊ ಹಾಗೂ ಆಡಳಿತ ಅಧಿಕಾರಿ ಚಂದ್ರಶೇಖರ್‌ ಗೌಡ ಕೆ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯಿಂದ ಪ್ರಾರಂಭಗೊಂಡು, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *