Wed. Nov 20th, 2024

Karwar: ಕಾಡಿಗೆ ಹೋದ ಮಹಿಳೆ ನಾಪತ್ತೆ – ದಾರಿ ತಪ್ಪಿಸಿದ ಮರೆವಿನ ಬಳ್ಳಿ.? ಈ ಮರೆವಿನ ಬಳ್ಳಿ ಅಂದ್ರೆ ಏನು ಗೊತ್ತಾ?

ಕಾರವಾರ:(ಸೆ.27) ಕಾಡಿಗೆ ಅಣಬೆ ತರುವುದಕ್ಕಾಗಿ ಹೋದ ಮಹಿಳೆ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದೆ. ಮಧ್ಯಾಹ್ನ ಕಾಡಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿಲ್ಲ. ಅರಣ್ಯ ಇಲಾಖೆಯವರೊಂದಿಗೆ ಹುಡುಕಾಟ ನಡೆಸಿದ ಪತ್ತೆಯಾಗಿದ್ದು, ಒಂದು ಬಳ್ಳಿ ದಿಕ್ಕು ತಪ್ಪಿಸಿ ಅವರು ಬಂದ ದಾರಿಯನ್ನು ಮರೆಸಿದೆ.

ಇದನ್ನೂ ಓದಿ: ⭕ಕಾಸರಗೋಡು: ಗರ್ಭಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಹಿಳೆ ಪತ್ತೆಯಾದ ಬಳಿಕ ಮಹಿಳೆ ಏನಾಗಿದೆ ಎಂಬುವುದನ್ನು ಹೇಳಿಕೊಂಡಿದ್ದಾರೆ. ಇದು ಗ್ರಾಮಸ್ಥರನ್ನು ಅಚ್ಚರಿಗೀಡು ಮಾಡಿದೆ. ಉತ್ತರಕನ್ನಡ ಜಿಲ್ಲೆಯ ಅಂಬಿಕಾನಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅದೆಷ್ಟೋ ಬಾರಿ ವಿಜ್ಞಾನಕ್ಕೂ ಸವಾಲಾಗಿ ಪ್ರಕೃತಿ ನಡೆದುಕೊಳ್ಳುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಆಧುನಿಕ ಯುಗದಲ್ಲಿ ನಾವಿದ್ದರೂ, ಪ್ರಕೃತಿ ತೋರುವ ಅಸಾಧಾರಣ ವಿದ್ಯಾಮಾನಕ್ಕೆ ಉತ್ತರ ಸಿಕ್ಕಿಲ್ಲ. ಅಂಬಿಕಾನಗರದ ಮಹಿಳೆಯೊಬ್ಬರು ಅಣಬೆ ಹೆಕ್ಕಲೆಂದು ಅರಣ್ಯಕ್ಕೆ ಹೋಗಿದ್ದಳು. ಮೊಬೈಲ್ ಗೆ ಕರೆ ಮಾಡಿದ್ರೂ ನಾಟ್ ರೀಚೆಬಲ್ ಎಂದು ಬರುತ್ತಿತ್ತು. ಹೀಗಾಗಿ ಆತಂಕಗೊoಡ ಮನೆಯವರು ಅರಣ್ಯ ಸಿಬ್ಬಂದಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆಯ ಮೊಬೈಲ್ ನೆಟ್‌ವರ್ಕ್ ಟ್ರ್ಯಾಕ್ ಮಾಡಿದ ಪೊಲೀಸರು, ಆ ಸ್ಥಳಕ್ಕೆ ತೆರಳಿದರೂ ಅಲ್ಲಿ ಮಹಿಳೆ ಪತ್ತೆಯಾಗಿರಲಿಲ್ಲ. ಮತ್ತೆ ಮೊಬೈಲ್ ಲೊಕೇಶನ್ ಟ್ಯಾಕ್ ಮಾಡಿ, ಹುಡುಕಾಟ ನಡೆಸಿದಾಗ ಮಹಿಳೆ ಪತ್ತೆಯಾದಳು. ಅಷ್ಟೊತ್ತಿಗಾಗಲೇ ರಾತ್ರಿ 11 ಗಂಟೆಯಾಗಿತ್ತು.

ತುಂಬಾ ಗಾಳಿ ಮಳೆ ಇದ್ದದ್ದರಿಂದ ಸ್ವಲ್ಪಮಟ್ಟಿಗೆ ಅಸ್ವಸ್ಥಗೊಂಡಿದ್ದಳು ಮಹಿಳೆ. ಕೊನೆಗೂ ಅಣಬೆ ತರುವುದಕ್ಕಾಗಿ ಕಾಡಿಗೆ ಹೋಗಿ ದಾರಿತಪ್ಪಿದ ಮಹಿಳೆಯನ್ನು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು , ಕಾರ್ಯಾಚರಣೆ ನಡೆಸಿ ರಕ್ಷಿಸಿದರು. ಆದ್ರೆ, ದಾರಿ ತಪ್ಪಲು ಅದೊಂದು ಬಳ್ಳಿ ಕಾರಣವಾಗಿತ್ತು ಎಂಬುದನ್ನ ಮಹಿಳೆ ವಿವರಿಸಿದ್ದಾಳೆ.

ಏನಿದು ದಾಟುಬಳ್ಳಿ? ನಂಬಿಕೆ ಏನು?
ಬಿಳಿ ದಾರದಂತಿರುವ ಈ ಜೀವಿಗೆ ಉತ್ತರ ಕನ್ನಡದ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ದಾಟುಬಳ್ಳಿ ಅಥವಾ ಮರೆವಿನ ಬಳ್ಳಿ ಎಂದು ಕರೆಯುತ್ತಾರೆ. ಕಾಡಿಗೆ ಹೋದ ವೇಳೆ ಈ ದಾಟುಬಳ್ಳಿ ದಾಟಿದರೆ ದಾರಿ ತಪ್ಪುತ್ತದೆ. ಮರಳಿ ಮನೆಗೆ ಬರಲು ದಿಕ್ಕುತೋಚದಂತೆ ಆಗುತ್ತದೆ ಎಂಬುದು ಹಳ್ಳಿ ಭಾಗದ ಜನರ ನಂಬಿಕೆ.

ಈ ವಿರಳ ಜೀವಿ ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಅಷ್ಟು ಗಮನಕೊಟ್ಟಿ ನೋಡಿದ್ರೆ ಮಾತ್ರ ಇದು ಕಾಣಿಸುತ್ತದೆ. ಅಣಬೆ ತರಲು ಕಾಡಿಗೆ ಹೋದಾಗ ಇದೇ ದಾಟುಬಳ್ಳಿಯನ್ನು ದಾಟಿದ್ದಾಳೆ. ಹೀಗಾಗಿ ದಾರಿ ತಪ್ಪಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಸ್ಥಳೀಯವಾಗಿ ದಾಟುಬಳ್ಳಿ ಎಂದು ಕರೆಯುವ ಜೀವಿಗೆ ಇಂಗ್ಲಿಷ್‌ನಲ್ಲಿ ಹಾರ್ಸ್‌ ಹೇರ್‌ ಎನ್ನುತ್ತಾರೆ.

Leave a Reply

Your email address will not be published. Required fields are marked *