Thu. Dec 26th, 2024

Kokkada: ಅಕ್ರಮ ಕಸಾಯಿಖಾನೆಗೆ ಪೋಲಿಸ್ ದಾಳಿ- ಆರೋಪಿಗಳು ಪರಾರಿ

ಕೊಕ್ಕಡ:(ಸೆ.27) ಧರ್ಮಸ್ಥಳ ಪೋಲಿಸರು ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡ ಘಟನೆ ಕೊಕ್ಕಡ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.

ಇದನ್ನೂ ಓದಿ: 🟠ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಶಾರದಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಎಂಬಲ್ಲಿನ ಉಸ್ಮಾನ್‌ ಎಂಬವರ ಅಡಿಕೆ ತೋಟದಲ್ಲಿ ಗೋಹತ್ಯೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಸುಮಾರು 10 ಕಿಲೋ ಗ್ರಾಂ ಜಾನುವಾರಿನ ಮಾಂಸ,

ಜಾನುವಾರಿನ ದೇಹದ ಇತರೆ ಭಾಗಗಳು, ಬ್ಯಾಟರಿ ಚಾಲಿತ ತೂಕದ ಯಂತ್ರ-1, ಚಾಕು ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ.

ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು ರೂ. 5,250/- ಆಗಿರುತ್ತದೆ.


ಗೋಮಾಂಸ ಮಾಡುತ್ತಿದ್ದ ಅಡ್ಡೆಗೆ ಧರ್ಮಸ್ಥಳ ಠಾಣಾಧಿಕಾರಿ ಕಿಶೋರ್ ಪಿ ಹಾಗೂ ಠಾಣಾ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.


ದಾಳಿ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಉಸ್ಮಾನ್‌ ಮತ್ತು ಸಲೀಂ ಎಂಬವರುಗಳ ವಿರುದ್ಧ ಗೋ ಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆಯನ್ವಯ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *