Wed. Nov 20th, 2024

Mangalore : (ಸೆ.29): ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ವತಿಯಿಂದ “ಯೋಗ ಏಕಾಹ-2024”

ಮಂಗಳೂರು :(ಸೆ.27) “ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ (ರಿ.) ಕರ್ನಾಟಕ ಇದರ ಆಯೋಜನೆಯಲ್ಲಿ ಯೋಗೋತ್ಸವ “ಯೋಗ ಏಕಾಹ-2024″ ವಿನೂತನ ಕಾರ್ಯಕ್ರಮ ಸೆ.29ರ ರವಿವಾರ ಸಂಘ ನಿಕೇತನದಲ್ಲಿ ಜರುಗಲಿದೆ” ಎಂದು ಸಂಘಟನೆಯ ಅಧ್ಯಕ್ಷ ಏಕನಾಥ ಬಾಳಿಗ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಇದನ್ನೂ ಓದಿ: 🛑ಕಾರವಾರ: ಕಾಡಿಗೆ ಹೋದ ಮಹಿಳೆ ನಾಪತ್ತೆ


ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನವು ಪ್ರತಾಪನಗರದ ಕೇಶವ ಯೋಗ ಕೇಂದ್ರದೊಂದಿಗೆ ಜಂಟಿಯಾಗಿ ಒಂದು ದಿನದ ಯೋಗಾಸನ ಪ್ರದರ್ಶನದ ಯೋಗೋತ್ಸವ ಕಾರ್ಯಕ್ರಮ – “ಯೋಗ ಏಕಾಹ – 2024” ಆಯೋಜಿಸಿದೆ.

ಜಿಲ್ಲೆಯ 12 ಪ್ರತಿಷ್ಠಿತ ಯೋಗಾಭ್ಯಾಸವನ್ನು ಕಲಿಸುವ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತೀ ಸಂಸ್ಥೆಯ ತಂಡವು 30 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಲಿದ್ದಾರೆ. ಅಂತೆಯೇ, 8 ಮಂದಿ ನುರಿತ ಹಾಗೂ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಯೋಗಪಟುಗಳು ವೈಯಕ್ತಿಕ ಯೋಗಾಸನ ಪ್ರದರ್ಶನವನ್ನೂ ಮಾಡಿ ತೋರಿಸಲಿದ್ದಾರೆ.

ಇದಲ್ಲದೆ ಸೂರ್ಯನಮಸ್ಕಾರ ಹಾಗೂ ಯೋಗಗುಚ್ಛಗಳೂ ಯೋಗಜೀವಿ ದರ್ಶಕರಿಗೆ ಹಬ್ಬ ನೀಡಲಿರುವುದು“ ಎಂದರು.
ಬೆಳಿಗ್ಗೆ 6.00ರಿಂದ ಆರಂಭಗೊಂಡು ಸಂಜೆ 6.00ರ ವರೆಗೆ ನಡೆಯುವ ಈ ಕಾರ್ಯಕ್ರಮವು ಸ್ಪರ್ಧಾತ್ಮಕವಾಗಿರದೆ ಉತ್ಕೃಷ್ಟ ಮಟ್ಟದ ಹಾಗೂ ಕೇವಲ ಪ್ರದರ್ಶನದ ಮಹತ್ವ ಹೊಂದಿರುತ್ತದೆ.

ಪ್ರತಿಷ್ಠಾನ ಮತ್ತು ಕೇಶವ ಯೋಗ ಕೇಂದ್ರವು ಈ ವಿನೂತನ ಕಾರ್ಯಕ್ರಮವನ್ನು ಎರಡನೇ ಬಾರಿಗೆ ನಡೆಸುತ್ತಿವೆ. ವಿವಿಧ ಸಂಸ್ಥೆಗಳು ಒಂದೇ ವೇದಿಕೆಯ ಮೇಲೆ ಪ್ರದರ್ಶನಾತ್ಮಕವಾಗಿ ಆಸನಗಳನ್ನು ಮಾಡಿ ತೋರಿಸುವುದು ಒಂದು ವಿಶಿಷ್ಟ ಪ್ರಯತ್ನ, ಅದಲ್ಲದೆ, ಹೆಚ್ಚು ಜನರಿಗೆ ಈ ಮೂಲಕ ಯೋಗಾಭ್ಯಾಸದಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ನಮ್ಮ ಉದ್ದೇಶ.

ಸುಮಾರು 150-175 ಮಂದಿ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಈ ಯೋಗಪಟುಗಳಿಗೆ ಭಾಗವಹಿಸುವಿಕೆಯ ಪ್ರಶಸ್ತಿ ಪತ್ರ,ಸಂಸ್ಥೆಗಳಿಗೆ ಸ್ಮರಣಿಕೆ ನೀಡಲಾಗುವುದು. ಇದಲ್ಲದೆ ಸುಮಾರು 500 -750 ಮಂದಿ ವೀಕ್ಷಕರೂ ಈ
ಕಾರ್ಯಕ್ರಮಕ್ಕೆ ಸಾಕ್ಷಿಗಳಾಗಲಿರುವರು“ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಧನಂಜಯ ಕೆ., ಯೋಗೀಶ್ ಶೆಟ್ಟಿ ಕಾವೂರು, ಜಯಲಕ್ಷ್ಮಿ ಚಂದ್ರಹಾಸ್, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *